ಅಪಾಯಿಂಟ್‌ಮೆಂಟ್ ಇದ್ದರಷ್ಟೇ ಶಾಪಿಂಗ್
ಲಾಕ್‌ಡೌನ್ ಮುಕ್ತಾಯದ ಬಳಿಕ ಆಯ್ದ ಮಳಿಗೆಗಳಲ್ಲಿ ಈ ವ್ಯವಸ್ಥೆ
Team Udayavani, May 5, 2020, 10:01 AM IST
ಸಾಂದರ್ಭಿಕ ಚಿತ್ರ
ಮುಂಬೈ: ಲಾಕ್‌ಡೌನ್ ಬಳಿಕ ನಿಮ್ಮ ಇಷ್ಟದ ಬ್ರ್ಯಾಂಡ್‌ನ ಬಟ್ಟೆ ಖರೀದಿಸಲು, ಅಂಗಡಿಗೆ ಹೊರಟಿದ್ದೀರಾ? ನಿಮ್ಮ ಬಳಿ ಅಪಾಯಿಂಟ್‌ಮೆಂಟ್ ಇದ್ದರಷ್ಟೇ, ನಿಮಗೆ ಪ್ರವೇಶ. ಮಾಸ್ಕ್ ಧರಿಸಿ ಬಂದರಷ್ಟೇ ಒಳಗೆ ಕಾಲಿಡಲು ಅವಕಾಶ. ಹೌದು, ಲಾಕ್‌ಡೌನ್‌ಗೆ ತೆರಬಿದ್ದ ಬಳಿಕ ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ವಸ್ತ್ರೋದ್ಯಮ ಅಗತ್ಯ ನಿಯಮಾವಳಿ ರೂಪಿಸುತ್ತಿದೆ. “ಗ್ರಾಹಕರ ಸುರಕ್ಷತೆ ಕಾಪಾಡುವುದೇ ದೊಡ್ಡ ಸವಾಲಾಗಿದೆ. ಸಾಮಾಜಿಕ ಅಂತರಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಶಾಪಿಂಗ್‌ಗೂ ನಿಗದಿತ ಸಮಯ ಅಳವಡಿಸುವ ಬಗ್ಗೆ ಯೋಜಿಸುತ್ತಿದ್ದೇವೆ’ ಎಂದು ಫ್ಯಾಬ್ ಇಂಡಿಯಾ ಅಧ್ಯಕ್ಷ ಅಜಯ್ ಕಪೂರ್ ಹೇಳಿದ್ದಾರೆ. ಪ್ರಸ್ತುತ ಫ್ಯಾಬ್ ಇಂಡಿಯಾ ತನ್ನ 327 ಅಂಗಡಿಗಳಲ್ಲಿ, 10 ಮಾತ್ರ ತೆರೆದಿದೆ.
ಎಲ್ಲವೂ ಶುದ್ಧ ಶುದ್ಧ: ಇನ್ನೊಂದೆಡೆ ಬ್ಲ್ಯಾಕ್‌ಬೆರ್ರಿ ಜವಳಿ ಸಂಸ್ಥೆ, ಟ್ರಯಲ್ ರೂಮ್‌ನಲ್ಲಿ ಬಾಗಿಲಿನ ಹಿಡಿಕೆಯಿಂದ ಹಿಡಿದು, ಕ್ಯಾಷ್ ಡೆಸ್ಕ್ವರೆಗೆ ನಿರಂತರವಾಗಿ ಸ್ಯಾನಿಟೈಸ್ ಮಾಡಲು ನಿರ್ಧರಿಸಿದೆ. ಅಲ್ಲದೆ, ಗ್ರಾಹಕ ಟ್ರಯಲ್ ರೂಮ್‌ನಲ್ಲಿ ಧರಿಸಿ, ನಿರಾಕರಿಸಿ ಕಳಚಿಟ್ಟ ಬಟ್ಟೆಯನ್ನು ಕೆಲವು ದಿನಗಳವರೆಗೆ ಮಾರಾಟಕ್ಕೆ ಇಡದೇ ಇರಲು ತೀರ್ಮಾನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.