ಪುರಸಭೆ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟದ ಅಂಗಡಿಗಳಿಗೆ ಮೂರು ದಿನಗಳ ಗಡುವು
Team Udayavani, Jan 8, 2021, 4:59 PM IST
ತಾಳಿಕೋಟೆ: ಪಟ್ಟಣದ ಪುರಸಭೆ ವ್ಯಾಪ್ತಿಯ ಮಳಿಗೆಗಳ ಬಾಡಿಗೆ ಕಟ್ಟದಿರುವ ಅಂಗಡಿಕಾರರಿಗೆ 3 ದಿನಗಳ ಕಾಲಾವಕಾಶದ
ನೋಟಿಸ್ ಮೂಲಕ ಗಡುವು ನೀಡಿರುವ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಬಾಡಿಗೆ ಕಟ್ಟದಿದ್ದಲ್ಲಿ ಅಂಗಡಿ ಮುಟ್ಟುಗೋಲು
ಹಾಕಿಕೊಳ್ಳುವುದರೊಂದಿಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಡಿಸೆಂಬರ್ 2019ರ ಅವಧಿಯಲ್ಲಿ ಅಂಗಡಿಗಳ ಮರು ಲಿಲಾವು ಮಾಡಲಾಗಿದ್ದು ಅಂಗಡಿಕಾರರು ಇನ್ನುವರೆಗೂ ನೋಂದಣಿ
ಮತ್ತು ಬಾಡಿಗೆಯನ್ನೂ ಕಟ್ಟಿಲ್ಲ. ಅಂತಹ ಅಂಗಡಿಕಾರರಿಗೆ 3 ದಿನಗಳ ಕಾಲಾವಕಾಶದ ಮೂಲಕ ಗಡುವಿನ ನೋಟಿಸ್ ನೀಡಲಾಗಿದ್ದು ಅಷ್ಟರೊಳಗೆ ನೋಂದಣಿಯೊಂದಿಗೆ ಬಾಡಿಗೆ ಕಟ್ಟಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿ ಕಾರಿ ಸಿ.ವಿ. ಕುಲಕರ್ಣಿ, ವ್ಯವಸ್ಥಾಪಕ ಎಚ್.ಎ. ಢಾಲಾಯತ್ ಪತ್ರಿಕೆಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಬ್ರಿಮ್ಸ್ ಅಕ್ರಮ: ತಪ್ಪಿತಸ್ಥರ ವಿರುದ್ಧ ತಿಂಗಳೊಳಗೆ ಕ್ರಮ : ಕೆ. ರಘುಪತಿ ಭಟ್
ಅಲ್ಲದೇ ಇನ್ನೂ ಕೆಲವು ಹಳೆಯ ಅಂಗಡಿಕಾರರೂ ಬಾಡಿಗೆ ಕಟ್ಟಿಲ್ಲ. ಅಂಥವರಿಗೂ ನೋಟಿಸ್ ನೀಡಲಾಗಿದೆ. ಅವರೂ ಕೂಡಲೇ ಬಾಡಿಗೆ ಕಟ್ಟದಿದ್ದಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ಕಾನೂನ ಕ್ರಮ ಕೈಗೊಳ್ಳಲಾಗುವುದೆಂದು ನೋಟಿಸ್ ಮೂಲಕ ಎಚ್ಚರಿಕೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
7 ಅಂಗಡಿಕಾರರು ಲಿಲಾವಿನ ಬಿಡ್ ನಲ್ಲಿ ತಾವೇ ಬೇಡಿಕೆಯಿಂದ ಹಿಡಿದಿರುವ ಅಂಗಡಿಕಾರರು ಬಿಡ್ ಮೊತ್ತ ಹೆಚ್ಚಿಗೆಯಾಗಿದೆ
ಎಂದು ನ್ಯಾಯಾಲಯ ಮೊರೆ ಹೋಗಿದ್ದಾರೆ. ನ್ಯಾಯಾಲಯವೂ ಜಿಲ್ಲಾ ಅಧಿಕಾರಿಗಳಿಗೆ ಅಂತಿಮ ನಿರ್ಣಯ ಕೈಗೊಳ್ಳಲು ನಿರ್ದೇಶನ ನೀಡಿದೆ. ಅದರಂತೆ ಜಿಲ್ಲಾ ಅಧಿಕಾರಿಗಳು ಮುಂದಿನ ಆದೇಶದ ಮೇರೆಗೆ ಅಂಗಡಿಕಾರರ ಮೇಲೆ ಕ್ರಮ ಜರುಗಿಸಲಾಗುವುದೆಂದು ವ್ಯವಸ್ಥಾಪಕ ಎಚ್.ಎ. ಢಾಲಾಯತ್ ತಿಳಿಸಿದ್ದಾರೆ.
ಈ ವೇಳೆ ಕಂದಾಯ ಅಧಿಕಾರಿ ಎನ್. ಎಸ್.ಪಾಟೀಲ, ಆರ್.ವೈ. ನಾರಾಯಣಿ, ಡಿ.ಬಿ. ಜಾನ್ವೇಕರ, ಪಿ.ವಿ. ರೋಖಡೆ ಇತರರು
ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.