ಸಣ್ಣ ಕಥೆಗಳು: ಮಗನ ಸಮಾಧಿ
ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.
Team Udayavani, Jul 31, 2023, 1:55 PM IST
ಅನುಗ್ರಹ
ನಾನು ಏನೇ ಮಾಡಿದರೂ ಅದರಲ್ಲೊಂದು ವಿಶೇಷತೆ ಇರಬೇಕು. ಅದಕ್ಕಾಗಿ ತಾನು ಗಳಿಸಿಟ್ಟ ಹಣವೆಲ್ಲಾ ಖರ್ಚಾದರೂ ಚಿಂತೆಯಿಲ್ಲ ಎಂಬುದು ಸುಧಾಕರನ ವಾದವಾಗಿತ್ತು. ಭಾರೀ ಸಂಬಳದ ಉದ್ಯೋಗವಿದ್ದ ಕಾರಣ, ಅದ್ದೂರಿಯಾಗಿ ಮದುವೆಯಾಗಬೇಕೆಂಬುದು ಅವನ ಬಹುದಿನದ ಆಸೆಯಾಗಿತ್ತು.
ಹೀಗಿದ್ದಾಗಲೇ ಒಮ್ಮೆ ದಾರಿಯಲ್ಲಿ ಅವನ ಶಾಲಾ ಶಿಕ್ಷಕರು ಸಿಕ್ಕರು. ದುಡಿಯುವಾಗ ಉಳಿತಾಯ ಮಾಡದೇ ಬಂದ ಹಣವನ್ನೆಲ್ಲಾ ಖರ್ಚುಮಾಡಿ, ಈಗ ಹೆಂಡತಿಯ ಆಸ್ಪತ್ರೆ ಖರ್ಚಿಗಾಗಿ ಇಳಿ ವಯಸ್ಸಿ ನಲ್ಲೂ ದುಡಿಯಬೇಕಾದ ಅನಿವಾರ್ಯ ಸ್ಥಿತಿಯಲ್ಲಿರುವುದನ್ನು ಸಂಕಟದಿಂದ ಹೇಳಿಕೊಂಡರು.
ಗುರುಗಳ ಆ ಅವಸ್ಥೆ, ಸುಧಾಕರನ ಕಣ್ಣು ತೆರೆಸಿತು. ಬಹಳಷ್ಟು ಚಿಂತಿಸಿದ ಆತ, ಕಡಿಮೆ ಖರ್ಚಿನಲ್ಲಿ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿ, ಅದರಿಂದ ಉಳಿದ ಹಣವನ್ನು ತಮ್ಮ ಶಿಕ್ಷಕರ ಮಡದಿಯ ಆಸ್ಪತ್ರೆ ಖರ್ಚಿಗೆಂದು ನೀಡಿ, ಗುರುವಿನ ಅನುಗ್ರಹಕ್ಕೆ ಪಾತ್ರನಾದ.
ಮಗನ ಸಮಾಧಿ
ಆಕೆ ಅನಕ್ಷರಸ್ಥೆ, ಬಡವಿ. ಮನೆಯ ಮುಂದಿನ ರಸ್ತೆಬದಿಯಲ್ಲಿ ಆಲದ ಸಸಿಯನ್ನು ನೆಟ್ಟು ಬೆಳೆಸಿದಳು. ಅವಳೂ ಬೆಳೆದು ದೊಡ್ಡವಳಾದಾಗ ಮದುವೆಯೂ ಆಗಿ ತವರೂರಿನಿಂದ ದೂರ ಹೋದಳು. ಇತ್ತ ಸರ್ಕಾರ ರಸ್ತೆ ಅಗಲೀಕರಣದ ನೆಪವೊಡ್ಡಿ ಆಲದ ಮರವನ್ನು ಕಡಿದುಹಾಕಿತು.
ಅತ್ತ ಅವಳ ಗಂಡ ಮತ್ತು ಇದ್ದೊಬ್ಬ ಮಗನೂ ಸಹ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದರು. ಬೇಸರಗೊಂಡ ಆಕೆ ಗಂಡನ ಮನೆಯ ಋಣ ಕಳೆದುಕೊಂಡು ತವರೂರಿಗೆ ಬಂದಳು. ಈಗ, ದಿನವೂ ಬೆಳಗ್ಗೆ ತಾನು ನೆಟ್ಟ ಮರವಿದ್ದ ಜಾಗಕ್ಕೆ ತೆರಳಿ ಡಾಂಬರು ರಸ್ತೆಯ ಮೇಲೆ ಹೂವನ್ನಿಟ್ಟು ಕೈಮುಗಿಯುತ್ತಾಳೆ. ಅದನ್ನು ತನ್ನ ಮಗನ ಸಮಾಧಿ ಎಂದು ಹೇಳಿಕೊಂಡು ತಿರುಗುತ್ತಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.