Arun Kumar Puthila ಮಾದರಿಯಲ್ಲೇ ಮೈಸೂರಿನಲ್ಲಿ ಶಕ್ತಿ ಪ್ರದರ್ಶನ ಸಾಧ್ಯವಿತ್ತು: ಪ್ರತಾಪ್
Team Udayavani, Apr 3, 2024, 12:37 AM IST
ಪುತ್ತೂರು: ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೈ ತಪ್ಪಿಸಿರುವ ನಾಯಕರ ವಿರುದ್ಧ ಸಂಸದ ಪ್ರತಾಪ್ ಸಿಂಹ ಅವರ ಮುನಿಸು ಇನ್ನೂ ಪೂರ್ತಿಯಾಗಿ ಶಮನವಾಗಿಲ್ಲ ಅನ್ನುವುದು ಪುತ್ತೂರಿನಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಬಹಿರಂಗಗೊಂಡಿದೆ.
ಪುತ್ತೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ಸಿಗದಕ್ಕೆ ಪಕ್ಷೇತರವಾಗಿ ಸ್ಪರ್ಧಿಸಿ ಅತಿ ಹೆಚ್ಚು ಮತ ಗಳಿಸಿದ್ದ ಅರುಣ್ ಪುತ್ತಿಲ ಅವರನ್ನು ಉದಾಹರಣೆಗೆ ತೆಗೆದುಕೊಂಡು ಪ್ರಸ್ತಾಪಿಸಿದ ಅವರು, ನನಗೆ ಟಿಕೆಟ್ ಸಿಗಲಿಲ್ಲ. ಒಂದು ವೇಳೆ ವೈಯಕ್ತಿಕ ಶಕ್ತಿ ಪ್ರದರ್ಶನದ ಯೋಚನೆ ಇದ್ದರೆ ಮೈಸೂರಿನಲ್ಲಿ ಮಾಡುತ್ತಿದ್ದೆ ಎಂದು ತಮ್ಮ ಸಾಮರ್ಥಯದ ಬಗ್ಗೆ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಸಂದೇಶ ರವಾನಿಸಿದ್ದಾರೆ.
ಎಷ್ಟೋ ಸಾರಿ ಸಂಘಟನೆಯಲ್ಲಿ ಎಲ್ಲೋ ಒಂದು ಕಡೆ ನ್ಯಾಯ ಸಿಕ್ಕಿಲ್ಲ ಎನ್ನುವ ಪ್ರಶ್ನೆ ಬಂದಾಗ ಸಂಘಟನೆಯ ಶಕ್ತಿ ಮೂಲಕ ಯಾರನ್ನೂ ಗೆಲ್ಲಿಸಬಹುದು ಎಂದು ಹೇಳುತ್ತಿರುವ ಹೊತ್ತಲ್ಲಿ, ಸಂಘಟನೆಯೇ ಸೆಟೆದು ನಿಂತು ಓರ್ವ ವ್ಯಕ್ತಿಗೆ ನ್ಯಾಯ ಕೊಡಬೇಕು ಎಂದು ಕೇಳಿದ್ದ ಕ್ಷೇತ್ರ ಅದು ಪುತ್ತೂರು ಎಂದು ಅರುಣ್ ಪುತ್ತಿಲ ಅವರ ಸಾಮರ್ಥ್ಯವನ್ನು ಪ್ರತಾಪ್ ಪ್ರಶಂಸಿಸಿದರು.
ನಾಲ್ಕೇ ವರ್ಷದಲ್ಲಿ ಮಾಡಿದರು!
ಸಂಸದ ಹಾಗೂ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ನಳಿನ್ ಕುಮಾರ್‌ಕಟೀಲು ಕುರಿತಾಗಿ ಪ್ರತಾಪ್, ಪಕ್ಷದಲ್ಲಿ ನಲವತ್ತು ವರ್ಷ ರಾಜಕಾರಣ ಮಾಡಿದವರು ಮಾಡದಷ್ಟು ಓಡಾಟವನ್ನು ನಳಿನ್ ಕುಮಾರ್ ಕಟೀಲು ನಾಲ್ಕೇ ವರ್ಷದಲ್ಲೇ ಮಾಡಿದ್ದಾರೆ. ಪಕ್ಷದ ಯಾವ ಅಧ್ಯಕ್ಷನೂ ಇಷ್ಟು ಓಡಾಟ ನಡೆಸಿಲ್ಲ ಎಂದು ನಳಿನ್ ಕಟೀಲು ಪರ ಬ್ಯಾಟ್ ಬೀಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.