ಆಲೂರು ಮಂಡಲದ ಬಿಜೆಪಿ ಅಧ್ಯಕ್ಷ ಎಂ.ಎಂ.ಹರೀಶ್ ಗೆ ಶ್ರದ್ಧಾಂಜಲಿ
Team Udayavani, Dec 27, 2021, 8:31 PM IST
ಆಲೂರು : ಆಲೂರು-ಕಟ್ಟಾಯ ಮಂಡಲದ ಬಿಜೆಪಿ ಅಧ್ಯಕ್ಷ ಎಂ.ಎಂ.ಹರೀಶ್ ಅವರ ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ವೀರಶೈವ ಸಮುದಾಯ ಭವನದಲ್ಲಿ ತಾಲ್ಲೂಕಿನ ವಿವಿಧ ಪಕ್ಷಗಳ ಮುಖಂಡರಿಂದ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮಾತನಾಡಿ ಹರೀಶ್ ರವರಿಗೆ ಹಲವು ದಿನಗಳಿಂದ ಅನಾರೋಗ್ಯ ಕಾಡಿತ್ತು ಅವರು ವೈದ್ಯರ ಸಲಹೆಯಂತೆ ಕೆಲವು ದಿನಗಳು ವಿಶ್ರಾಂತಿ ಪಡೆಯಬೇಕಿತ್ತು ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಎಡಬಿಡದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು ನಾವು ಕೂಡ ಅವರಿಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದೇವು ಅದರೆ ವಿಶ್ರಾಂತಿ ಪಡೆಯಲಿಲ್ಲ ಮೊನ್ನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ದಿನದಿಂದ ನಾವುಗಳು ಕುಟುಂಬದ ಸಂಪರ್ಕದಲ್ಲಿದ್ದು ಎಲ್ಲಾ ರೀತಿಯಿಂದಲೂ ಸಹಕಾರ ನೀಡಲಾಗಿತ್ತು ಅದರೆ ವಿಧಿ ಅವರನ್ನು ಬಿಡಲಿಲ್ಲ ವಿಧಿಯಾಟದ ಮುಂದೆ ನಮ್ಮ ಆಟ ಏನು ನಡೆಯುವುದಿಲ್ಲ ಎಂದು ಮತ್ತೊಮ್ಮೆ ಸಾಬಿತಾಗಿದೆ ಹರೀಶ್ ನಮ್ಮ ಕುಟುಂಬದ ಸದಸ್ಯ ಅದ್ದರಿಂದ ಮುಂದಿನ ದಿನಗಳಲ್ಲಿಯೂ ಅವರ ಕುಟುಂಬ ವರ್ಗದೊಂದಿಗೆ ಇರುತ್ತೇವೆ ಎಂದರು.
ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್ ಮಾತನಾಡಿ, ಹರೀಶ್ ಪಕ್ಷದ ನಿಷ್ಠಾವಂತ. ಅನಾರೋಗ್ಯದ ಹಿನ್ನೆಲೆಯಲ್ಲಿಯೂ ವಿಧಾನ ಪರಿಷತ್ ಚುನಾವಣೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ್ದರು ಹಗಲಿರುಳು ಪಕ್ಷಕ್ಕಾಗಿ ದುಡಿಯುತ್ತಿದ್ದರು ಅಂತಹ ನಾಯಕನನ್ನು ಕಳೆದುಕೊಂಡು ಪಕ್ಷ ತಬ್ಬಲಿಯಾಗಿದೆ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಗೋಪಾಲಯ್ಯನವರ ಸಂಪರ್ಕದಲ್ಲಿದ್ದು, ಅವರ ಉಳಿವಿಗಾಗಿ ಶತ ಪ್ರಯತ್ನ ಮಾಡಿದೇವು ಅದರೆ ಅವರನ್ನು ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ ನಾನು,ಪಕ್ಷ, ಹಾಗೂ ಮುಖಂಡರು ಹರೀಶ್ ಅವರ ಕುಟುಂಬದ ನೆರವಿಗೆ ಧಾವಿಸಬೇಕು ಎಂದು ಕಣ್ಣಿರಿಟ್ಟರು.
ಮಾಜಿ ಶಾಸಕ ಬಿ.ಆರ್.ಗುರುದೇವ್ ಮಾತನಾಡಿ, ಹರೀಶ್ ಒಬ್ಬ ಸಂಘಟನೆ ಚತುರ ಅವರನ್ನು ಪಕ್ಷ ಕಳೆದಕೊಂಡು ತಬ್ಬಲಿಯಾಗಿದೆ ಅವರನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ನನ್ನ ಸಲಹೆ ಪಡೆದು ತಾಲ್ಲೂಕಿಗೆ ಒಳ್ಳೆಯ ಅಧ್ಯಕ್ಷರನ್ನು ನೀಡಿದ್ದರು. ಅದರೆ ವಿಧಿ ಅವರನ್ನು ಬಿಡಲಿಲ್ಲ ಅವರ ಕುಟುಂಬಕ್ಕೆ ಎಲ್ಲರೂ ನೆರವಾಗೋಣ ಎಂದರು.
ಹೆಚ್ಡ್.ಸಿ.ಸಿ.ಬ್ಯಾಂಕ್ ನಿರ್ದೇಶಕ ಕಬ್ಬಿನಹಳ್ಳ ಜಗದೀಶ್ ಮಾತನಾಡಿ ಹರೀಶ್ ಅವರು ಬಿಜೆಪಿ ಮುಖಂಡರಾಗುವ ಮೊದಲು ಪಿಎಲ್ಡ್ ಬ್ಯಾಂಕ್ ನಿರ್ದೇಶಕರಾಗಿ ಕೆ.ಹೊಸಕೋಟೆ ಭಾಗದಲ್ಲಿ ಪಕ್ಷಾತೀತವಾಗಿ ಗುರುತಿಸಿಕೊಂಡು ಜನಸಾಮಾನ್ಯರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದರು ಅದರೆ ದೇವರು ಚಿಕ್ಕ ವಯಸ್ಸಿನಲ್ಲಿಯೇ ಹರೀಶ್ ಅವರನ್ನು ಕರೆದುಕೊಂಡಿದ್ದು ಮಾತ್ರ ನೋವು ತಂದಿದೆ ಮನುಷ್ಯನಿಗೆ ಆರೋಗ್ಯ ಅತೀ ಮುಖ್ಯ ಆರೋಗ್ಯವಿದ್ದರೆ ಎಲ್ಲವನ್ನು ಸಂಪಾದಿಸಬಹುದು ಮೊದಲು ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಕದಾಳು ಲೋಕೇಶ್ ಮಾತನಾಡಿ, ಹರೀಶ್ ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆ ಸೇರಿದ ಸಂದರ್ಭದಲ್ಲಿ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದರು ನಮ್ಮ ನಾಯಕ ನಾರ್ವೇ ಸೋಮಶೇಖರ್ ಕೂಡ ಆಸ್ಪತ್ರೆ ಖರ್ಚು ಬರಿಸಿ ಹರೀಶಣ್ಣ ಒಂದು ವರ್ಷ ವಿಶ್ರಾಂತಿ ಪಡೆಯಿರಿ ಎಂದಿದ್ದರು ಹರೀಶ್ ರವರು ಪಕ್ಷದ ಶಿಸ್ತಿನ ಶಿಪಾಯಿಯಾಗಿದ್ದರು ಎಲ್ಲೋ ಒಂದು ಕಡೆ ಆರೋಗ್ಯದ ಕಡೆ ಗಮನ ನೀಡಲಿಲ್ಲವೆನೋ ಅನ್ನಿಸುತ್ತೇ, ಅದರೇನು ಮಾಡುವುದು ವಿಧಿಯ ಆಟ ದೇವರು ಹರೀಶ್ ಕುಟುಂಬಕ್ಕೆ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಲಿ ಎಂದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಸುರೇಶ್, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್, ಬಿ.ಆರ್.ಗುರುದೇವ್,ಸಕಲೇಶಪುರ ಬಿಜೆಪಿ ಅಧ್ಯಕ್ಷ ಮಂಜುನಾಥ್ ಸಿಂಘಿ, ವೀರಶೈವ ಮುಖಂಡ ರೇಣುಕಾ ಪ್ರಸಾದ್,ಕಬ್ಬಿನಹಳ್ಳಿ ಜಗದೀಶ್, ಡಾ ಜಯರಾಜ್, ಕದಾಳು ಲೋಕೇಶ್,ಬಿ.ಸಿ.ಶಂಕರಚಾರ್,ಕರವೇ ತಾಲ್ಲೂಕು ಅಧ್ಯಕ್ಷ ನಟರಾಜ್,ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ಎಸ್ ಎಸ್ ಶಿವಮೂರ್ತಿ, ಶಾಂತ್ ಕೃಷ್ಣ,ಸಂದೇಶ್,ಹಾಗೂ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಗರ್ಭಿಣಿ ಪತ್ನಿಯ ಹತ್ಯೆಗೈದು ಆತ್ಮಹ*ತ್ಯೆಗೆ ಯತ್ನಿಸಿದ ಪತಿ
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Belur: ಶಾಲೆ ಆವರಣದಲ್ಲಿ ಕಾಡಾನೆ ಪ್ರತ್ಯಕ್ಷ, ವಿದ್ಯಾರ್ಥಿಗಳ ಆತಂಕ
Hasana: ಹೊಳೆನರಸೀಪುರ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗಡ್ಡ ವಿವಾದ ಸುಖಾಂತ್ಯ!
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.