ಸಸ್ಯ ಸಂಪತ್ತು-ವನ್ಯಜೀವಿ ರಕ್ಷಣೆಗೆ ಮುಂದಾಗಿ : ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಸಲಹೆ
Team Udayavani, Jan 14, 2021, 3:21 PM IST
ಗದಗ: ಸಮಾಜ ಸ್ವಾಮೀಜಿಗಳು ಮತ್ತು ಶಿಕ್ಷಕರನ್ನು ವೀಕ್ಷಿಸುತ್ತಿದೆ ಮತ್ತು ಪರೀಕ್ಷಿಸುತ್ತಿದೆ. ಆದ್ದರಿಂದ ನಾವು ನಮ್ಮ ಜವಾಬ್ದಾರಿಗಳನ್ನು ಗುರುತರವಾಗಿ ನಿರ್ವಹಿಸಬೇಕಿದೆ. ಜೊತೆಗೆ ಕಪ್ಪತಗುಡ್ಡ ಸಸ್ಯಸಂಪತ್ತು, ವನ್ಯಜೀವಿಗಳ ಸಂರಕ್ಷಣೆಗೂ ಒತ್ತು ನೀಡಬೇಕು ಎಂದು ಕಪ್ಪತಗುಡ್ಡ-ಗದಗ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಅಕ್ಷರಮಾತೆ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ, ಶಿಕ್ಷಣ ಹಾಗೂ
ನೈತಿಕ ಮೌಲ್ಯ ಕುರಿತು ಉಪನ್ಯಾಸ ಮತ್ತು ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನಾಚರಣೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಂ.ಬಸವಲಿಂಗಪ್ಪ ಮಾತನಾಡಿ, ಶಿಕ್ಷಕರು ಓಬಮಾ ಆಗುವತ್ತ ಗಮನ
ನೀಡಬೇಕು. ಓ-ಅಂದರೆ ಓದುವದು, ಬ-ಅಂದರೆ ಬರೆಯುವುದು, ಮಾ-ಅಂದರೆ ಮಾತನಾಡುವುದು. ಈ ಕೌಶಲ್ಯಗಳನ್ನು ಕೇಂದ್ರೀಕರಿಸಿಗೊಂಡು ಇಂದಿನ ಸ್ಪರ್ಧಾ ಜಗತ್ತಿಗೆ ಮಕ್ಕಳನ್ನು ತಯಾರು ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಇದನ್ನೂ ಓದಿ:ತಮಿಳುನಾಡಿನ ಅವನಿಯಪುರಂನಲ್ಲಿ ಜಲ್ಲಿಕಟ್ಟು ವೀಕ್ಷಿಸಿದ ರಾಹುಲ್ ಗಾಂಧಿ
ಸವಣೂರು ತಾಲ್ಲೂಕಿನ ಕ್ಷೇತ್ರಶಿಕ್ಷಣಾಕಾರಿ ಐ.ಬಿ.ಬೆನಕೊಪ್ಪ ಹಾಗೂ ಸೊಂಡೂರು ಬಿಇಒ ಐ.ಆರ್.ಅಕ್ಕಿ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರು ಅಂದಿನ ಬ್ರಿಟಿಷ್ ಸರಕಾರದಿಂದ ಪ್ರಥಮ ಭಾರತೀಯ ಮಹಿಳಾ ಶಿಕ್ಷಕಿಯೆಂಬ ಗೌರವ
ಪಡೆದಿದ್ದರು. ಇಂದಿನ ಇಲೆಕ್ಟ್ರಾನಿಕ್ಸ್ ಮಾಧ್ಯಮಗಳನ್ನು ಬಳಸಿಕೊಂಡು ಮಕ್ಕಳ ಗುಣಾತ್ಮಕ ಕಲಿಕೆಗೆ ಒತ್ತು ನೀಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಅಧ್ಯಕ್ಷ ವಿ.ಎಂ.ಹಿರೇಮಠ ಮಾತನಾಡಿ, ಸಾವಿತ್ರಿಬಾಯಿ ಫುಲೆಯವರು ಅಂದಿನ ಸಮಾಜದ ಜನರಿಂದ ಅನೇಕ ನಿಂದನೆ, ತೊಂದರೆಗಳನ್ನು ಅನುಭವಿಸಿದರೂ, ಮಹಿಳೆಯರಿಗೆ ಶಿಕ್ಷಣ
ನೀಡುವಲ್ಲಿ ಯಶಸ್ವಿಯಾದರು. ಅವರ ಆದರ್ಶಮತ ಬದುಕು ನಮ್ಮೆಲ್ಲಿರಗೆ ದಾರಿದೀಪವಾಗಬೇಕು ಎಂದು ತಿಳಿಸಿದರು.
ಇದೇ ವೇಳೆ ಗದಗ ಶಹರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಕೆ.ಮಂಗಳಗುಡ್ಡ ಅವರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ-11 ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ-21 ದತ್ತು ತೆಗೆದುಕೊಂಡರು.
2020-25 ನೆಯ ಸಾಲಿಗೆ ಗದಗ ಶಹರ ವಲಯ¨ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಆಯ್ಕೆಯಾದ ನೂತನ ಪದಾಧಿ ಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ವೇದಿಕೆ ಮೇಲೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ, ನಿವೃತ್ತ ಮುಖ್ಯೋಪಾಧ್ಯಾಯ
ಎಸ್.ಎನ್.ಬಳ್ಳಾರಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಎಸ್.ಡಿ.ಗಾಂಜಿ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ಎಸ್.ಎಸ್.ಕೆಳದಿಮಠ, ರಾಜೇಶ್ವರಿ ಮ್ಯಾಗೇರಿ, ಅಂದಪ್ಪ ನಾಗರಹಳ್ಳಿ, ಎಸ್. ಆರ್.ಬಂಡಿ, ಡಿ.ಎಸ್.ತಳವಾರ, ನಿಕಟ ಪೂರ್ವ
ಅಧ್ಯಕ್ಷ ವಿ.ಜಿ.ಖೋಡೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.