ಕ್ಷಮೆ ಯಾಚಿಸಿದ ಬಳಿಕ ಖೇಲ್‌ರತ್ನಕ್ಕೆ ಶ್ರೀಕಾಂತ್ ಹೆಸರು
Team Udayavani, Jun 20, 2020, 6:19 AM IST
ಹೊಸದಿಲ್ಲಿ: ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಿದ ಬಳಿಕ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್ ಹೆಸರನ್ನು ಪ್ರತಿಷ್ಠಿತ ಖೇಲ್‌ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಶುಕ್ರವಾರ ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಶನ್ (ಬಿಎಐ) ಇದನ್ನು ಪ್ರಕಟಿಸಿತು.
ಕಳೆದ ಫೆಬ್ರವರಿಯಲ್ಲಿ ಮನಿಲಾದಲ್ಲಿ ನಡೆದ ಏಶ್ಯನ್ ಟೀಮ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸೆಮಿಫೈನಲ್‌ನಲ್ಲಿ ಆಡದ ಕೆ. ಶ್ರೀಕಾಂತ್ ಬಾರ್ಸಿಲೋನಾದಲ್ಲಿ ಮತ್ತೂಂದು ಕೂಟವನ್ನಾಡಲು ತೆರಳಿದ್ದರು. ಇವರೊಂದಿಗೆ ಎಚ್.ಎಸ್. ಪ್ರಣಯ್ ಕೂಡ ಇದ್ದರು. ಇದಕ್ಕಾಗಿ ಬಿಎಐ ಇಬ್ಬರಿಗೂ ನೊಟೀಸ್ ಜಾರಿ ಮಾಡಿತ್ತು.
ಅನಂತರ ತನ್ನನ್ನು ಬಿಎಐ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡದ ಕಾರಣ ಎಚ್.ಎಸ್. ಪ್ರಣಯ್ ಅಸಮಾಧಾನ ವ್ಯಕ್ತಪಡಿಸಿದದ್ದರು. ಆಗ ಪ್ರಣಯ್ ಅವರನ್ನು ಬೆಂಬಲಿಸಿ ಶ್ರೀಕಾಂತ್ ಹೇಳಿಕೆ ನೀಡಿದ್ದರು. ಅಶಿಸ್ತಿನ ಕಾರಣ ಇವರಿಬ್ಬರನ್ನೂ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳಿಗೆ ಶಿಫಾರಸು ಮಾಡಿರಲಿಲ್ಲ.
ಪ್ರಣಯ್ ಹೆಸರು ಕಡೆಗಣನೆ
ಈಗ ಶ್ರೀಕಾಂತ್ ಹೆಸರನ್ನು ಖೇಲ್‌ರತ್ನಕ್ಕೆ ಪರಿಗಣಿಸಲಾಗಿದೆ. ಆದರೆ ಪ್ರಣಯ್ ಅವರನ್ನು ಕಡೆಗಣಿಸಲಾಗಿದೆ. ಬಿಎಐ ವಿರುದ್ಧ ಆಕ್ರೋಶದ ಹೇಳಿಕೆ ನೀಡಿದ್ದಕ್ಕೆ 15 ದಿನಗಳಲ್ಲಿ ಉತ್ತರಿಸಬೇಕೆಂದು ಅವರಿಗೆ ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.