ನಾಡು ನುಡಿಯ ಅಭಿವೃದ್ಧಿಗಾಗಿ ಶ್ರಮ ವಹಿಸಿ : ಕಸಾಪ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ಸಲಹೆ
ತಾಲ್ಲೂಕು ಕಸಾಪ ಅಧ್ಯಕ್ಷರಾಗಿ ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ
Team Udayavani, Jan 3, 2022, 8:28 PM IST
ಕೊರಟಗೆರೆ: ಕನ್ನಡ ಸಾಹಿತ್ಯ ಪರಿಷತ್ತು ನಾಡು- ನುಡಿಯ ಏಳಿಗೆಗಾಗಿ ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಗ್ರಾಮೀಣ ಭಾಗಗಳಲ್ಲೂ ಸಾಹಿತ್ಯ ಉನ್ನತ ಮಟ್ಟಕ್ಕೆ ತರಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ತಿಳಿಸಿದರು.
ಪಟ್ಟಣದ ಸಾಹಿತ್ಯ ಪರಿಷತ್ತಿನ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರ ಪದಗ್ರಹಣ ಹಾಗೂ ತಾಲ್ಲೂಕು ಕಸಾಪ ಸಾಹಿತ್ಯ ಚಟುವಟಿಕೆಗಳ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಬಳಿಗೆ ತಲುಪಬೇಕಾದರೆ ತಾಲ್ಲೂಕು ಮತ್ತು ಹೋಬಳಿ ಘಟಕಗಳು ಸಧೃಡವಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಮ್ಮೇಳನಗಳಿಗೂ ಮುನ್ನ ಗ್ರಾಮಾಂತರ ಭಾಗಗಳಲ್ಲಿ ಸಮ್ಮೇಳನಗಳ ಸಂಘಟನೆ, ಸಾಹಿತ್ಯಾತ್ಮಕ ಕಾರ್ಯಕ್ರಮಗಳು ಹಮ್ಮಿಕೊಂಡಾಗ ಜನರಲ್ಲಿ ಕನ್ನಡ ಸಾಹಿತ್ಯ ದ ಬಗ್ಗೆ ಸ್ವಪ್ರೇರಣೆ ಉಂಟಾಗುತ್ತದೆ. ಸಾಹಿತ್ಯ ಪರಿಷತ್ತು ನಿರ್ವಹಣೆಯಲ್ಲಿ ಪಾರದರ್ಶಕವಾಗಿರಬೇಕು ಎಂದು ಎಚ್ಚರಿಸಿದರು.ಕವಿ ಕುವೆಂಪುರ ಕಾದಂಬರಿ ಕೃತಿಗಳನ್ನು ಹೆಚ್ಚು ಅಧ್ಯಯನ ಮಾಡಿದ್ದರಿಂದ ದಿನ ನಿತ್ಯ ಕನ್ನಡ ಭಾಷೆ ಬಳಕೆಯಲ್ಲಿ ಅನ್ಯ ಭಾಷೆಗಳ ಪದಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ಸಾಹಿತ್ಯ ಚಟುವಟಿಕೆಗಳ ಹೆಚ್ಚಿಸಿ:-
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಹೆಚ್. ನಾಗರಾಜ ಮಾತನಾಡಿ ಕುವೆಂಪು ಅವತು ನೇಗಿಲ ಮೇಲೆ ನಿಂತಿದೆ ಧರ್ಮ. ರೈತರು ಸಮಾಜದಲ್ಲಿ ಪ್ರಥಮ ಗೌರವಕ್ಕೆ ಅರ್ಹರು, ಕನ್ನಡ ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ವೈಚಾರಿಕತೆ ಮತ್ತು ಮಾನವೀಯತೆಗೆ ಸ್ಪರ್ಶ ನೀಡಿದ ಕಿರ್ತಿ ಕುವೆಂಪುಗೆ ಸಲ್ಲುತ್ತದೆ. ಹಾಗಾಗಿ ಕನ್ನಡಿಗರು ಕುವೆಂಪುರವರ ವಿಚಾರ ಧಾರೆಗಳನ್ನು ಮೈಗೂಡಿಸಿಕೊಂಡು ಹಾಗೂ ಅವರ ಕೃತಿ ಕಾದಂಬರಿಗಳ ಅಧ್ಯಯನ ಮಾಡಿ ನಾವೆಲ್ಲರೂ ವಿಶ್ವ ಮಾನವರಾಗಲು ಗ್ರಾಮೀಣ ಭಾಗಗಳಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿ ನೂತನ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ ಕನ್ನಡ ಸಾಹಿತ್ಯ ಪರಿಷತ್ತು ಮೂಲ ಉದ್ದೇಶಗಳಿಗೆ ಧಕ್ಕೆಯಾಗದಂತೆ ಹಾಗೂ ಜಿಲ್ಲಾ ಅಧ್ಯಕ್ಷರ ಹಾಗೂ ಹಿರಿಯ ಸಾಹಿತಿಗಳ ಮಾರ್ಗದರ್ಶನ ಹಾಗೂ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಹಕಾರದಿಂದ ಕಸಾಪವನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸ, ಮಕ್ಕಳಲ್ಲಿ ಸಾಹಿತ್ಯಾಭಿರುಚಿ, ಸೃಜನಶೀಲಾ ಬರವಣಿಗೆ, ಪರಿಸರ ಸಂರಕ್ಷಣೆ, ಸಹಬಾಳ್ವೆ ಮತ್ತು ದೇಶಾಭಿಮಾನ ಮೂಡಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮರಿಬಸಪ್ಪ, ನಿವೃತ್ತ ಪ್ರಾಂಶುಪಾಲ ಜಿ.ಎಚ್. ಮಹಾದೇವಪ್ಪ, ನಿಕಟ ಪೂರ್ವ ಅದ್ಯಕ್ಷ ಎಸ್.ಕೆ ನಾಗರಾಜು, ಜಿ.ಆರ್. ಪ್ರತಾಪರುದ್ರ, ನರಸಿಂಹಮೂರ್ತಿ, ಕಾರ್ಯದರ್ಶಿ ಕೆ.ಎಸ್ ಶ್ರೀನಿವಾಸ ಮೂರ್ತಿ,ಶಿವಾನಂದ, ಪ್ರಾಂಶುಪಾಲ ಕೆ.ಎಸ್.ಈರಣ್ಣ, ಮಹಿಳಾ ಪ್ರತಿನಿಧಿ ಹೇಮಲತಾ, ನಿವೃತ್ತ ಶಿಕ್ಷಕ ಬಿ.ಎಚ್.ಹನುಮಂತರೆಡ್ಡಿ, ಬೆಸ್ಕಾಂ ಪುಟ್ಟಣ್ಣ, ದಾಡಿ ವೆಂಕಟೇಶ್ ಮೂರ್ತಿ ಸೇರಿ ಸದಸ್ಯರು ಹಾಜರಿದ್ದರು.
ಇದನ್ನೂ ಓದಿ : ಹಂಪನಕುಪ್ಪೆ ಗ್ರಾಮವನ್ನು ಮತ್ತೆ ಕಿರಗಡಲು ಗ್ರಾಮದ ದಾಖಲೆಗೆ ಸೇರಿಸಿ : ಗ್ರಾಮಸ್ಥರ ಮನವಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.