ಸಿದ್ದಾಪುರ : ಪೊಲೀಸ್‌ಗೆ ಪಾಸಿಟಿವ್ ಶಂಕೆ ಹಿನ್ನೆಲೆಯಲ್ಲಿ ಮರು ಪರೀಕ್ಷೆ
Team Udayavani, Jun 3, 2020, 7:33 AM IST
ಸಿದ್ದಾಪುರ: ಶಂಕರನಾರಾಯಣ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಅವರ ಕೋವಿಡ್ ಸೋಂಕು ಪರೀಕ್ಷೆಯ ಪ್ರಥಮ ವರದಿ ಪಾಸಿಟಿವ್ ಬಂದಿದ್ದು, ಶಂಕೆ ಹಿನ್ನೆಲೆಯಲ್ಲಿ ಮರಳಿ ಪರೀಕ್ಷೆಗೆ ಕಳುಹಿಸಲಾಗಿದೆ.
ಠಾಣೆಯ ಎಲ್ಲ ಸಿಬಂದಿಯ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳೆದ 10 ದಿನಗಳ ಹಿಂದೆ ಕಳುಹಿಸಲಾಗಿದ್ದು, ಅನೇಕ ಸಿಬಂದಿಯ ವರದಿ ಬರಬೇಕಾಗಿದೆ. ಮೇ 31ರಂದು ಮಹಿಳಾ ಸಿಬಂದಿಯ ವರದಿ ಬಂದಿದ್ದು, ಕೋವಿಡ್ ಪಾಸಿಟಿವ್ ಆಗಿದೆ. ವರದಿ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಸೋಮವಾರ ಮರು ಪರೀಕ್ಷೆಗೆ ಕಳುಹಿಸಲಾಗಿದೆ.
ಮಹಿಳಾ ಸಿಬಂದಿಯ ಸಂಪರ್ಕದಲ್ಲಿದ್ದ 18 ಪೊಲೀಸ್ ಸಿಬಂದಿಯನ್ನು ಶಂಕರನಾರಾಯಣ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದು, ಅಲ್ಲಿ ಮೂಲ ಸೌಕರ್ಯದ ಕೊರತೆಯಿದ್ದು, ಸಿಬಂದಿ ಪರದಾಡುವಂತಾಗಿದೆ ಎಂಬ ಆರೋಪವಿದೆ.
ಕೆಎಸ್‌ಆರ್‌ಪಿ ಸಿಬಂದಿಗೆ ಆತಂಕ
ನಕ್ಸಲ್ ಪೀಡಿತ ಪ್ರದೇಶದ ಶಂಕರನಾರಾಯಣ ಪೊಲೀಸ್ ಠಾಣೆಗೆ ಭದ್ರತೆಗಾಗಿ ಬಂದಿದ್ದ ಕೊಪ್ಪಳದ ಮುನಿರಾಬಾದ್‌ನ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನ 8 ಮಂದಿ ಸಿಬಂದಿ ಠಾಣೆಯ ಮೇಲ್ಭಾಗದ ಕೊಠಡಿಯಲ್ಲಿ ವಾಸ್ತವ್ಯವಿದ್ದು, ಅವರಿಗೂ ಆತಂಕ ಶುರುವಾಗಿದೆ. ಇವರನ್ನು ಜೂ. 2ರಂದು ಠಾಣೆಯಿಂದ ಬಿಡುಗಡೆಗೊಳಿಸಲಾಗಿದ್ದು, ಮುನಿ ರಾಬಾದ್‌ನಲ್ಲಿರುವ ಇಂಡಿಯನ್ ರಿಸರ್ವ್ ಬೆಟಾಲಿಯನ್‌ನಲ್ಲಿ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ ಎನ್ನುವ ಮಾಹಿತಿ ದೊರಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Naxal Encounter: ದಕ್ಷಿಣ ಭಾರತದಲ್ಲಿ ಇನ್ನುಳಿದಿರುವುದು ಎಂಟೇ ಮಂದಿ ನಕ್ಸಲರು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.