ಸಿದ್ದು ನಾಮಫಲಕ ತೆರವು-ಅಳವಡಿಕೆ
Team Udayavani, Oct 21, 2019, 3:07 AM IST
ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಾಸವಾಗಿರುವ “ಕಾವೇರಿ’ ನಿವಾಸದ ಮುಂದೆ ಹಾಕಿರುವ ಅವರ ನಾಮಫಲಕವನ್ನು ಲೋಕೋಪಯೋಗಿ ಅಧಿಕಾರಿಗಳು ಭಾನುವಾರ ಬೆಳಗ್ಗೆ ತೆಗೆದು, ಸಂಜೆಗೆ ಮತ್ತೆ ನಾಮಫಲಕ ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು “ಕಾವೇರಿ’ ನಿವಾಸಕ್ಕೆ ತೆರಳಿ, ಆದಷ್ಟು ಬೇಗ ಮನೆ ಖಾಲಿ ಮಾಡಿಕೊಡುವಂತೆ ಸೂಚನೆ ನೀಡಿದ್ದು, ಮನೆಯ ಕಾಂಪೌಂಡ್‌ಗೆ ಹಾಕಿದ್ದ ಸಿದ್ದರಾ ಮಯ್ಯ ಅವರ ನಾಮಫಲಕವನ್ನು ಕಿತ್ತು ಹಾಕಿದ್ದರು.
ಸಿದ್ದರಾಮಯ್ಯ ಅವರ ನಾಮಫಲಕ ಕಿತ್ತು ಹಾಕಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ನಂತರ ಸಂಜೆ ವೇಳೆಗೆ ಅಧಿಕಾರಿಗಳು ಆಗಮಿಸಿ ಮತ್ತೆ “ಸಿದ್ದರಾಮಯ್ಯ, ವಿಧಾನಸಭೆ ಪ್ರತಿಪಕ್ಷದ ನಾಯಕ’ ಎಂಬ ನಾಮಫಲಕವನ್ನು “ಕಾವೇರಿ’ ನಿವಾಸದ ಕಾಂಪೌಂಡ್ ಗೋಡೆಗೆ ಹಾಕಿರುವುದು ಚರ್ಚೆಗೆ ಗ್ರಾಸವಾಗಿದೆ. ಹೊಸ ನಾಮಫಲಕವನ್ನು ಅಳವಡಿಸುವ ದೃಷ್ಟಿಯಿಂದ ಹಳೆಯ ನಾಮಫಲಕವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದರೆಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.
ಈಗಾಗಲೇ ಕಾವೇರಿ ನಿವಾಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಂಚಿಕೆ ಮಾಡಿ, ಸಿದ್ದರಾಮಯ್ಯ ಅವರಿಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ರೇಸ್ ವ್ಯೂ ಕಾಟೇಜ್-2ನ್ನು ಹಂಚಿಕೆ ಮಾಡಲಾಗಿದೆ. ಆದರೆ, ಸಿದ್ದರಾಮಯ್ಯನವರು ಕಾವೇರಿ ನಿವಾಸವನ್ನೇ ತಮಗೆ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ, ಅವರ ಮನವಿಗೆ ಸ್ಪಂದನೆ ದೊರೆತಿಲ್ಲ.
ಸಿಎಂ ಮೇಲೆ ಅನರ್ಹರ ಒತ್ತಡ: ಅನರ್ಹ ಶಾಸಕರು ಸಿದ್ದರಾಮಯ್ಯ ಅವರನ್ನು ಕಾವೇರಿಯಿಂದ ಸ್ಥಳಾಂತರಿಸ ಬೇಕೆಂದು ಸಿಎಂ .ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆಂದು ತಿಳಿದು ಬಂದಿದೆ. ರಮೇಶ್ ಜಾರಕಿಹೊಳಿ, ಎಂ.ಟಿ.ಬಿ ನಾಗರಾಜ್, ಬಿ.ಸಿ.ಪಾಟೀಲ್ ಸೇರಿ ಅನರ್ಹ ಶಾಸಕರು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನವರಿಗೆ “ಕಾವೇರಿ’ಯಲ್ಲಿ ಇರಲು ಅವಕಾಶ ನೀಡಬಾರದು ಎಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ತೆರವುಗೊಳಿಸುವ ಅಗತ್ಯ ಏನಿತ್ತು?
ಮೈಸೂರು: “ಕಾವೇರಿ’ ನಿವಾಸ ದಲ್ಲಿ ತಮ್ಮ ಹೆಸರಿದ್ದ ಬೋರ್ಡ್ ತೆರವುಗೊಳಿಸಿರುವು ದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿ, “ಬೋರ್ಡ್ ತೆರವುಗೊಳಿಸುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ. ಸಿಎಂ ಆಗಿದ್ದಾಗಿನಿಂದಲೂ ಕಾವೇರಿಯಲ್ಲಿ ವಾಸವಾಗಿದ್ದೇನೆ. ಈಗ ಪ್ರತಿಪಕ್ಷ ನಾಯಕನಾಗಿರುವುದರಿಂದ ಅದೇ ಮನೆಯನ್ನು ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ.
ಆದರೆ, ಈಗ ನನ್ನ ಹೆಸರಿನ ಬೋರ್ಡ್ ತೆರವುಗೊಳಿಸಿರುವುದು ಏಕೆ ಎಂಬುದು ಗೊತ್ತಿಲ್ಲ. ಒಂದು ವೇಳೆ, ಹೇಳಿದ್ದರೆ ಮನೆ ಬಿಟ್ಟು ಕೊಡುತ್ತಿದ್ದೆ ಎಂದು ಪ್ರತಿಕ್ರಿಯಿಸಿದರು. ಅದು ಸರ್ಕಾರಿ ಬಂಗಲೆ, ಯಾವತ್ತಿದ್ದರೂ ಖಾಲಿ ಮಾಡಲೇ ಬೇಕು. ಹಿಂದೆ ಜಾರ್ಚ್ ಅವರಿಗೆ “ಕಾವೇರಿ’ ನಿಗದಿಪಡಿಸಲಾಗಿತ್ತು. ಆದರೆ, ಸಿಎಂ ಆಗಿ ಅದೇ ಬಂಗಲೆಯಲ್ಲಿ ಇದ್ದುದ್ದರಿಂದ ನಾನೇ ಇರುತ್ತೇನೆಂದು ಜಾರ್ಜ್ ಅವರಲ್ಲಿ ಕೇಳಿದ್ದರಿಂದ ಅವರು ಬಂದಿರಲಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.