ಇನ್ಸುಲಿನ್‌ಗಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಾದ ಸಿದ್ದರಾಮಯ್ಯ!
Team Udayavani, Oct 20, 2020, 10:28 AM IST
ಬೆಳಗಾವಿ: ಮಧುಮೇಹ ಕಾಯಿಲೆಗೆ ಇನ್ಸುಲಿನ್ ತೆಗೆದುಕೊಳ್ಳುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇನ್ಸುಲಿನ್‌ಗಾಗಿ ಗಂಟೆಗಳ ಕಾಲ ಕಾಯ್ದು ಕುಳಿತ ಘಟನೆ ನಡೆಯಿತು. ಬೆಂಗಳೂರಿನಿಂದ ಬೆಳಿಗ್ಗೆ ಬೆಳಗಾವಿಗೆ ಬಂದ ಸಿದ್ದರಾಮಯ್ಯ ಅವರು ಇನ್ಸುಲಿನ್ ಮರೆತು ಬಂದಿದ್ದರು. ವಿಮಾನ ನಿಲ್ದಾಣದಲ್ಲಿ ಬಂದ ನಂತರ ಇನ್ಸುಲಿನ್‌ಗಾಗಿ ಹುಡುಕಾಡಿದ ಸಿದ್ದರಾಮಯ್ಯ, ಇನ್ಸುಲಿನ್ ತರಿಸಲು ಮಾಜಿ ಶಾಸಕ ಅಶೋಕ್ ಪಟ್ಟಣ ಅವರಿಗೆ ಹೇಳಿದರು.
ಇದಕ್ಕೆ ಪಟ್ಟಣ ಅವರು ಹರಸಾಹಸ ಪಡಬೇಕಾಯಿತು. ನಂತರ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಇನ್ಸುಲಿನ್ ತಂದು ಕೊಟ್ಟ ಬಳಿಕ ಸಿದ್ದರಾಮಯ್ಯ ವಿಮಾನ ನಿಲ್ದಾಣದಿಂದ ಹೊರಗಡೆ ಬಂದರು.
ರಾಜ್ಯದಲ್ಲಿ ಪರ್ಸೆಂಟೇಜ್ ಸರ್ಕಾರ: ಸಿದ್ದು
ಬೆಳಗಾವಿ: ರಾಜ್ಯದಲ್ಲಿ ಪರ್ಸಂಟೇಜ್ ಸರ್ಕಾರ ನಡೆಯುತ್ತಿದೆ. ಶಾಸಕರು ಅನುದಾನ ಪಡೆದುಕೊಳ್ಳಲು ಲಂಚ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದಾರಾಮಯ್ಯ ಆರೋಪಿಸಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರ ಜತೆ
ಮಾತನಾಡಿದ ಅವರು, ಈ ಸರ್ಕಾರ ಲಂಚ ಕೊಡುವವರಿಗೆ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ. ಹಣ ಕೊಡದೆ ಸರ್ಕಾರದ ವಿವಿಧ ಕಾಮಗಾರಿಗಳ ಅನುದಾನವೂ ಬಿಡುಗಡೆಯಾಗುತ್ತಿಲ್ಲ. ಸ್ವಪಕ್ಷದ ಶಾಸಕರಿಂದಲೇ ಅನುದಾನಕ್ಕೆ ಹಣ
ಪಡೆಯುತ್ತಿರುವುದು ಇದೇ ಮೊದಲು. ಪ್ರವಾಹ ಹಾಗೂ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಲ್ಲಿ ಯಾರಿಗೂ ಹಣ ನೀಡಿಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದ್ದರೆ ಅದು ಸಂತ್ರಸ್ತರಿಗೆ ತಲುಪಬೇಕಿತ್ತಲ್ಲ. ತಲುಪಿಲ್ಲ ಎಂದರೆ ಹಣ ಇಲ್ಲ ಎಂದೇ ಅರ್ಥ ಎಂದರು.
ನಳಿನಕುಮಾರ ಬಿಜೆಪಿ ಅಧ್ಯಕ್ಷರಾಗಿ ಬಹಳ ಜವಾಬ್ದಾರಿಯಿಂದ ಮಾತನಾಡಬೇಕು. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಎರಡು ಬಾರಿ ಗೋಲಿಬಾರ್ ಆಗಿದೆ. ನೇಕಾರರು ಹಾಗೂ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ. ಹೀಗಿರುವಾಗ ಕಾಂಗ್ರೆಸ್‌ನ್ನು ಸಮುದ್ರಕ್ಕೆ ಎಸೆಯಬೇಕು ಎಂದು ಹೇಳುವುದು ಸರಿಯಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
MUST WATCH
ಹೊಸ ಸೇರ್ಪಡೆ
Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು
NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ
Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.