ಶೇಖ್ ಫಾಝಿಲ್ ಯಾರೆಂದು ನನಗೆ ಗೊತ್ತಿಲ, ಸಾಕ್ಷಿ ಇದ್ದರೆ ಕ್ರಮ ಕೈಗೊಳ್ಳಲಿ : ಸಿದ್ದು
Team Udayavani, Sep 15, 2020, 2:51 PM IST
ಬಾಗಲಕೋಟೆ: ಡ್ರಗ್ಸ್ ಆರೋಪಿ ಶೇಖ್ ಫಾಝಿಲ್ ಯಾರೆಂದು ನನಗೆ ಗೊತ್ತಿಲ್ಲ. ಐ ಡೋಂಟ್ ನೊ ಹೂ ಹೀ ಇಜ್. ಯಾರೋ ಬಂದು ಫೋಟೋ ತಗೋತಾರೆ, ಏನ್ ಮಾಡಲು ಆಗುತ್ತದೆ. ಯಾರ ಜತೆಗೆ ಫೋಟೋ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಇದ್ದಾರಾ ಅನ್ನೋದು ಮುಖ್ಯ ಎಂದು ಮಾಜಿ ಸಿಎಂ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಶೇಖ್ ಫಾಝಿಲ್ ಯಾರೆಂದು ನನಗೆ ಗೊತ್ತಿಲ್ಲ. ಪುರಾವೆ ಇದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ. ಶಾಸಕ ಜಮೀರ್ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂಬುದಕ್ಕೆ ಪುರಾವೆ ಇಲ್ಲ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಬಿಜೆಪಿಯ ಪ್ರಚಾರಕ್ಕೆ ಹೋಗಿದ್ದರು. ಅದಕ್ಕೆ ಏನೆಂದು ಕರೆಯಬೇಕು. ಯಡಿಯೂರಪ್ಪ ಪುತ್ರ ವಿಜಯೇಂದ್ರ ಜತೆಗೆ ಕೆ.ಆರ್. ಪೇಟೆಯಲ್ಲಿ ಕ್ಯಾಂಪೇನ್ ಮಾಡ್ತಾ ಇದ್ದರು.
ಬಿಜೆಪಿ ಸದಸ್ಯೆ ಆಗಿದ್ದಾಳೆ. ಹಾಗಂತ ಡ್ರಗ್ಸ್ ಜಾಲದಲ್ಲಿ ವಿಜಯೇಂದ್ರ ಇದ್ದಾನೆಂದು ನಾನು ಹೇಳಲಾ? ಹಾಗೆ ಹೇಳಲು ಆಗುತ್ತದೆಯೇ? ನಟಿ ರಾಗಿಣಿ ಬಿಜೆಪಿಯ ಪ್ರಚಾರಕ್ಕೆ ಹೋಗಿರಬಹುದು. ಡ್ರಗ್ಸ್ ಜಾಲದಲ್ಲಿ ವಿಜಯೇಂದ್ರ ಇದ್ದ ಎಂಬುದಕ್ಕೆ ಸಾಕ್ಷಿ ಬೇಕಲ್ಲ. ಯಾರದೋ ಫೋಟೋ ಜತೆಗೆ ಇದ್ದರೆ ತಪ್ಪಿತಸ್ಥರು ಎಂದರ್ಥವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಡ್ರಗ್ಸ್ ಮಟ್ಟಹಾಕದೆ ಹೋದರೆ ರಾಜ್ಯ ಮತ್ತೊಂದು ಉಡ್ತಾ ಪಂಜಾಬ್ ಆಗಲಿದೆ: ಖಂಡ್ರೆ
ಗಮನ ಬೇರೆಡೆ ಸೆಳೆಯುವ ತಂತ್ರ: ರಾಜ್ಯದಲ್ಲಿ ಪ್ರವಾಹ, ಕೋವಿಡ್ ಸಂದರ್ಭದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಡ್ರಗ್ಸ್ ವಿಷಯ ಹೈಲೆಟ್ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಸಂಬಳ ಕೊಡುವುದಕ್ಕೂ ಹಣವಿಲ್ಲ. ಅಭಿವೃದ್ಧಿ ಕೆಲಸಕ್ಕೆ ಹಣವಿಲ್ಲ. ಕೇಂದ್ರದವರು ಜಿಎಸ್‌ಟಿ ಸಹಾಯಧನ ಕೊಡಲಿಲ್ಲ. ಸಾಲ ಮಾಡಿ ಹಣ ಖರ್ಚು ಮಾಡಬೇಕಾಗಿದೆ. ಪ್ರತಿದಿನ ಸಾವಿರಾರು ಜನ ಸಾಯುತ್ತಿದ್ದಾರೆ. ಇದಕ್ಕೆ ಪರಿಹಾರ ಮಾಡಲು ಆಗಿಲ್ಲ. ರಾಜ್ಯದ ಹಣಕಾಸಿನ ಪರಿಸ್ಥಿತಿ ಕೆಟ್ಟು ಹೋಗಿದೆ. ಅದಕ್ಕೆ ಡ್ರಗ್ಸ್‌ನಂತಹ ಪ್ರಕರಣಗಳ ಹೆಚ್ಚು ಹೈಲೈಟ್ ಮಾಡಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದರು.
ದೇವರು ಹೇಗೆ ಹೊಣೆ ಆಗ್ತಾರೆ: ಆರ್ಥಿಕ ಕುಸಿತಕ್ಕೆ ದೇವರೆ ಹೊಣೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ದೇವರು ಯಾಕೆ ಹೊಣೆ ಆಗುತ್ತಾರೆ. ಪ್ರವಾಹ ಈಗ ಬಂದಿದೆಯಾ, ಕೋವಿಡ್ ಈಗ ಬಂದಿರುವುದು ನಿಜ. ಇಡೀ ದೇಶ-ಜಗತ್ತಿನಲ್ಲಿ ಕೊರೊನಾ ಇದೆ. ಎಲ್ಲ ರಾಷ್ಟ್ರದವರು ದೇವರೇ ಹೊಣೆ ಎಂದು ಹೇಳಿದ್ದಾರಾ? ನಿರ್ಮಲಾ ಸೀತಾರಾಮನ್ ತರಹ ಅಮೆರಿಕ, ಚೀನಾ, ಜಪಾನ್, ಫ್ರಾನ್ಸ್ ಹೇಳಿವೆಯಾ ಎಂದು ಪ್ರಶ್ನಿಸಿದರು.
ಡ್ರಗ್ಸ್ ಯಾರೇ ತೆಗೆದುಕೊಂಡರೂ ಅದೊಂದು ಸಾಮಾಜಿಕ ಕಂಟಕ. ಯಾರೇ ತೆಗೆದುಕೊಳ್ಳಲಿ, ಸರಬರಾಜು ಮಾಡಲಿ ಅದು ಅಪರಾಧ. ಅದಕ್ಕೆ 10ರಿಂದ 20 ವರ್ಷ ಶಿಕ್ಷೆ. ಇದೂವರೆಗೂ ಎಷ್ಟು ಜನರಿಗೆ ಶಿಕ್ಷೆ ಆಗಿದೆ? ರಾಜ್ಯ ಅಷ್ಟೇ ಅಲ್ಲ, ದೇಶದಲ್ಲೇ ಡ್ರಗ್ಸ್ ಜಾಲವಿದೆ. ಇದಕ್ಕೆ ಯಾರು ಜವಾಬ್ದಾರಿ| ಈಗ ಸಿಕ್ಕಿಹಾಕಿಕೊಂಡವರ ಮೇಲೆ ಕ್ರಮ ಆಗಲಿ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸುತ್ತೇನೆ.
– ಸಿದ್ದರಾಮಯ್ಯ ವಿಪಕ್ಷ ನಾಯಕ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.