ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳ ಮನೆಗೆ ತೆರಳಿ ಪಾಲಕರಿಗೆ ಧೈರ್ಯ ಹೇಳಿದ ಸಿದ್ದು ಸವದಿ
Team Udayavani, Feb 27, 2022, 7:07 PM IST
ರಬಕವಿ-ಬನಹಟ್ಟಿ : ಉಕ್ರೇನ್‌ನಲ್ಲಿ ಸಿಲುಕಿದ ತಾಲೂಕಿನ ವಿದ್ಯಾರ್ಥಿಗಳ ಮನೆಗೆ ತೆರಳಿದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಸಿದ್ದು ಸವದಿ ಪಾಲಕರಿಗೆ ಧೈರ್ಯ ಹೇಳಿದರು.
ಅವರು ಭಾನುವಾರ ಜಗದಾಳದ ಕಿರಣ ಸಿಂಗಾಡಿ, ನಾವಲಗಿಯ ಕಿರಣ ಸವದಿ, ರಬಕವಿ ನಗರದ ಅಶ್ವತ ಗುರವ ವಿದ್ಯಾರ್ಥಿಗಳ ಮನೆಗೆ ಭೇಟ್ಟಿ ನೀಡಿ ಪಾಲಕರ ಜೊತೆ ಮಾತನಾಡಿ, ಶೀಘ್ರದಲ್ಲೇ ಕೇಂದ್ರ ಸಚಿವರು ಹಾಗೂ ಭಾರತ ಸರಕಾರದ ಜೊತೆ ಮಾತನಾಡಿ ಅವರನ್ನು ಸುರಕ್ಷಿತವಾಗಿ ಮರಳಿ ತರುವ ವ್ಯವಸ್ಥೆ ಮಾಡಲಾಗುವುದು ತಾವೆಲ್ಲರು ಧೈರ್ಯದಿಂದ ಇರಬೇಕು ಎಂದರು.
ನಾವು ಮುಖ್ಯ ಮಂತ್ರಿಗಳಿಗೆ, ಕೇಂದ್ರ ಮಂತ್ರಿ ಪ್ರಲ್ಹಾದ ಜೋಶಿಯವರಿಗೆ ಮನವಿ ಮಾಡಿದ್ದು, ಸರಕಾರ ಹೇಳಿದ ಪ್ರಕಾರ ಯಾವುದೇ ಭಯ ಪಡುವ ಅಗತ್ಯವಲ್ಲ. ಅವರು ಒಂದೇ ಜಾಗದಲ್ಲಿ ಇರಲಿಕ್ಕೆ ಹೇಳಿದ್ದಾರೆ. ಅಲ್ಲಿ ನಾಗರಿಕರ ಮೇಲೆ ಬಾಂಬ ಹಾಕುವುದನ್ನು ಮಾಡುವುದಿಲ್ಲ. ರಷ್ಯಾದ ಅಧ್ಯಕ್ಷರ ಜೊತೆ ನಮ್ಮ ಪ್ರಧಾನ ಮಂತ್ರಿಗಳು ಮಾತನಾಡಿದ್ದಾರೆ. ಈಗಾಗಲೇ 2 ವಿಮಾನಗಳ ಮೂಲಕ 400ಕ್ಕೂ ಹೆಚ್ಚಿನ ಜನರನ್ನು ಕರೆತರುವಂತಹ ಕೆಲಸ ಮಾಡಿದೆ. ಇಗಲೂ ಕೂಡಾ ಇನ್ನೂಳಿದವರನ್ನು ಕರೆ ತರುವ ಪ್ರಯತ್ನ ನಿರಂತರವಾಗಿ ಚಾಲ್ತಿಯಲ್ಲಿದ್ದು, ಯಾರು ದೃತಿಗೆಡುವ ಅವಶ್ಯಕತೆಯಿಲ್ಲ. ತಾವು ದೈರ್ಯದಿಂದ ಇರಿ, ಮಕ್ಕಳಿಗೆ ಧೈರ್ಯ ತುಂಬಿ ಎಂದರು.
ಇದೇ ವೇಳೆ ನಾವಲಗಿಯ ಕಿರಣ ಸವದಿ ಜೊತೆ ವಾಟ್ಸ್ ಆ್ಯಪ್ ಕರೆ ಮಾಡಿ ಮಾತನಾಡಿ, ವಿಷಯ ತಿಳಿದುಕೊಂಡರು. ಅಲ್ಲಿ ಊಟದ ವ್ಯವಸ್ಥೆ ಖಾಲಿಯಾಗಿದ್ದು, ನೀರಿಗೂ ಪರದಾಡುವಂತಾಗಿದೆ. ನಮ್ಮನ್ನು ಕೇಂದ್ರ ಎಂಬೆಸಿ ಸಂಪರ್ಕಿಸಿ ನಮಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಕಿರಣ ಹೇಳಿದಾಗ. ಈ ಕುರಿತು ಶೀಘ್ರವೇ ಮಾನ್ಯ ಮುಖ್ಯ ಮಂತ್ರಿಗಳು, ಸಂಸದರು ಹಾಗೂ ಕೇಂದ್ರ ಮಂತ್ರಿಗಳ ಜೊತೆ ಮಾತನಾಡಿ ತಮ್ಮನ್ನು ಆದಷ್ಟು ನಮ್ಮ ದೇಶಕ್ಕೆ ಕರೆತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಇದನ್ನೂ ಓದಿ :ಆಪರೇಷನ್ ಗಂಗಾ: ಉಕ್ರೇನ್ ನೆರೆ ರಾಷ್ಟ್ರಗಳಿಗೆ ಇನ್ನಷ್ಟು ವಿಮಾನಗಳು
ಈ ಸಂದರ್ಭದಲ್ಲಿ ಸುಬಾಸ ಉಳ್ಳಾಗಡ್ಡಿ, ಆನಂದ ಕಂಪು, ಯಲ್ಲಪ್ಪ ಕಟಗಿ, ಪಿ. ಜಿ. ಕಾಖಂಡಕಿ, ಲಕ್ಷ್ಮಣ ಸವದಿ ಸೇರಿದಂತೆ ಅನೇಕರು ಇದ್ದರು.
ತಾಲೂಕಿನ ಐದು ಜನ : ರಬಕವಿ-ಬನಹಟ್ಟಿ ತಾಲೂಕಿನ ಜಗದಾಳದ ಕಿರಣ ಸಿಂಗಾಡಿ, ನಾವಲಗಿ ಗ್ರಾಮದ ಕಿರಣ ಸವದಿ, ಹಳಿಂಗಳಿ ಗ್ರಾಮದ ಪ್ರಜ್ವಲ ಹಿಪ್ಪರಗಿ, ಮದಬಾವಿ ಗ್ರಾಮದ ಪ್ರಜ್ವಲಕುಮಾರ ತಿಮ್ಮಾಪುರ ಹಾಗು ರಬಕವಿಯ ಅಶ್ವಥಕುಮಾರ ಗುರವ ಉಕ್ರೇನ್‌ನಲ್ಲಿ ಸಿಲುಕಿದ ವಿದ್ಯಾರ್ಥಿಗಳಾಗಿದ್ದಾರೆ. ಎಲ್ಲ ಐವರು ಕುಟುಂಬಸ್ಥರು ತಮ್ಮ ತಮ್ಮ ಮಕ್ಕಳೊಂದಿಗೆ ಮೊಬೈಲ್ ಸಂಪರ್ಕದಲ್ಲಿದ್ದಾರೆ. ಕೆಲ ಹೊತ್ತು ಸಂಪರ್ಕಕ್ಕೆ ಸಿಕ್ಕರೆ, ಮತ್ತೊಂದು ಹೊತ್ತು ದೊರಕುತ್ತಿಲ್ಲ. ಹೀಗಾಗಿ ಕುಟುಂಬಸ್ಥರಲ್ಲಿ ಭಯ ಹೆಚ್ಚಾಗಿದೆ.
ರಾಯಭಾರಿ ಸಂಪರ್ಕವಿಲ್ಲ; ಕಳೆದ ಮೂರು ದಿನಗಳಾದರೂ ಭಾರತೀಯ ರಾಯಭಾರಿ ಕಚೇರಿಯಿಂದ ಯಾವದೇ ಸಂಪರ್ಕವಾಗುತ್ತಿಲ್ಲ. ಕೆಲವರು ಬಂಕರ್‌ನಲ್ಲಿ ಇನ್ನೂ ಕೆಲವರು ಮೆಟ್ರೋ ನಿಲ್ದಾಣದಲ್ಲಿದ್ದು, ಇದೀಗ ಊಟ, ನೀರಿನ ಕೊರತೆ ಹೆಚ್ಚಾಗಿದ್ದು, ಎಲ್ಲಿಂದಲೂ ಆಹಾರ ದೊರಕುತ್ತಿಲ್ಲವೆಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.