ಮಕ್ಕಳ ಪಾಲಿಗೆ ಗಂಭೀರ ಅನಾರೋಗ್ಯ ತರುತ್ತಿದೆ ಸಿಲಿಕಾನ್‍ವ್ಯಾಲಿ:ಹುಟ್ಟುವ ಮಕ್ಕಳ ಮೇಲೂ ಪರಿಣಾಮ
ವಾಯುಮಾಲಿನ್ಯಕ್ಕೆ ತುತ್ತಾದ ಗರ್ಭಿಣಿಯರಲ್ಲಿ 30 ಶೇಖಡಾ ಮಂದಿ ಅಕಾಲಿಕ ಹೆರಿಗೆಗೆ ಒಳಗಾಗುತ್ತಾರೆ
Team Udayavani, Apr 30, 2020, 10:34 PM IST
Representative Image
ಬೆಂಗಳೂರು : ಹೆಚ್ಚುತ್ತಿರುವ ವಾಯು ಮಾಲಿನ್ಯ ಹಾಗೂ ವಿಷಯುಕ್ತ ಗಾಳಿಯಿಂದಾಗಿ ಬೆಂಗಳೂರು ಮಹಾನಗರದ ನಿವಾಸಿಗಳನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಉಸಿರಾಟದ ಖಾಯಿಲೆಗೆ ತುತ್ತಾಗುವಂತೆ ಮಾಡಿದೆ ಎಂದು ಸಂಶೋಧನಾ ವರದಿಗಳು ತಿಳಿಸಿವೆ. `ಕಂಟೆಂಪರರಿ ಪೀಡಿಯಾಟ್ರಿಕ್ಸ್’ ಎಂಬ ಅಂತರಾಷ್ಟ್ರೀಯ ಪತ್ರಿಕೆಯ ಅಧ್ಯಯನ ವರದಿಯ ಪ್ರಕಾರ ಮಕ್ಕಳಲ್ಲಿ ಅಸ್ತಮಾಕ್ಕೆ ಕಾರಣವಾಗುವ ಪ್ರಮುಖ ಮೂರು ಕಾರಣಗಳಲ್ಲಿ ಧೂಮಪಾನವೂ ಒಂದಾಗಿದೆ. 2015ರಲ್ಲಿ ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ತೀವ್ರ ನಿಗಾ ಘಟಕದಲ್ಲಿದ್ದ 100 ಮಕ್ಕಳಲ್ಲಿ ನಡೆಸಿದ ಸಮೀಕ್ಷೆಯ ಮೂಲಕ ಈ ಅಂಶವನ್ನು ತಿಳಿಯಲಾಗಿದೆ.
ಇದೇ ಪತ್ರಿಕೆಯಲ್ಲಿ 2018ರ ನವೆಂಬರ್ ನಲ್ಲಿ ಪ್ರಕಟವಾದ ಇನ್ನೊಂದು ಸಂಶೋಧನಾ ವರದಿಯು ವಾಹನ ಸಂಚಾರದಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ, ಇಂಧನಗಳ ಬಳಕೆ, ನೈಸರ್ಗಿಕ ಉರುವಲುಗಳ ಬಳಕೆಯು ಅಸ್ತಮಾ ರೋಗಕ್ಕೆ ಪ್ರಮುಖ ಕಾರಣ ಎಂದಿದೆ.
ಈ ಅಂಶಗಳು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಬೆಂಗಳೂರು ಮೂಲದ ಮಕ್ಕಳ ಶ್ವಾಸಕೋಶ ತಜ್ಞ ಡಾ. ಹೆಚ್. ಪರಮೇಶ್ ದೃಢಪಡಿಸಿದ್ದಾರೆ. ಅವರ ಪ್ರಕಾರ `ಪಿಎಮ್2.5’ (ಗಾಳಿಯಲ್ಲಿ ಹರಡುವ 2.5 ಮೈಕ್ರೋಮೀಟರ್ ಗಿಂತ ಕಡಿಮೆ ಗಾತ್ರದ ಸಣ್ಣ ಸಣ್ಣ ಕಣಗಳು. ಇವು ಮನುಷ್ಯನ ತಲೆಕೂದಲಿನ ಅಗಲದ ಶೇ.3 ರಷ್ಟಿರುತ್ತದೆ) ಮತ್ತು `ಪಿಎಂ10’ ಗಳೇ ಮನುಷ್ಯನಿಗೆ ಅತ್ಯಂತ ಅಪಾಯಕಾರಿ. ಇವುಗಳನ್ನು ಮನುಷ್ಯ ಉಸಿರಾಡಿದಾಗ ಮತ್ತು ಅವು ರಕ್ತಪ್ರಸರಣದ ಜೊತೆಗೆ ಸೇರಿಕೊಂಡರೆ ದೇಹದಲ್ಲಿ ಆಮ್ಲಜನಕವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ಅವರು.
`ಪಿಎಮ್2.5’ ಹಾಗೂ `ಪಿಎಂ10’ ಸೂಕ್ಷ್ಮ ಗಾತ್ರದ ಕಣಗಳಾಗಿರುವುದರಿಂದ ಅವು ಸುಲಭವಾಗಿ ಉಸಿರಿನ ಮೂಲಕ ದೇಹ ಸೇರಿಕೊಳ್ಳುತ್ತದೆ ಎನ್ನುತ್ತಾರೆ ಸೆಂಟರ್ ಫಾರ್ ಸ್ಟಡಿ ಆಫ್ ಸಯನ್ಸ್, ಟೆಕ್ನಾಲಜಿ ಎಂಡ್ ಪಾಲಿಸಿಯ ಸಂಶೋಧನಾ ವಿಜ್ಞಾನಿ ಡಾ. ಪ್ರತಿಮಾ ಸಿಂಗ್. ಈ ಕಣಗಳು ಶ್ವಾಸಕೋಶದ ಆಳಕ್ಕೆ ತಲುಪುತ್ತದೆಯಾದ್ದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ ಅವರು.
ವಿಶೇಷವಾಗಿ ಮಕ್ಕಳು ಅಸ್ತಮಾ ರೋಗಲಕ್ಷಣಗಳಿಗೆ ಒಳಗಾಗುತ್ತಾರೆ. ಅವರ ಶ್ವಾಸಕೋಶವು ಸಂಪೂರ್ಣವಾಗಿ ಅಭಿವೃದ್ಧಿ ಹೊಂದದೇ ಇರುವುದು ಹಾಗೂ ಅವರ ಉಸಿರಾಟದ ಗತಿಯು ವೇಗವಾಗಿರುವುದರಿಂದ ರೋಗದ ಬೆಳವಣಿಗೆಗೂ ಹೆಚ್ಚಿನ ಅವಕಾಶವಿರುತ್ತದೆ. ಹೆಚ್ಚು ಕಲುಷಿತ ಪ್ರದೇಶಗಳಲ್ಲಿ ಬೆಳೆಯುವ ಮಕ್ಕಳ ಶ್ವಾಸಕೋಶದ ಕಾರ್ಯಚಟುವಟಿಕೆಯು ಕ್ಷೀಣಗೊಳ್ಳುತ್ತದೆ ಎನ್ನುತ್ತಾರೆ ಅವರು.
ಹುಟ್ಟುವ ಮಕ್ಕಳ ಮೇಲೂ ಪರಿಣಾಮ
ಹೆಚ್ಚುತ್ತಿರುವ ವಾಯುಮಾಲಿನ್ಯವು ಕಲುಷಿತ ಪ್ರದೇಶದಲ್ಲಿ ವಾಸಿಸುವ ಮಕ್ಕಳಿಗಷ್ಟೇ ಅಲ್ಲದೆ ಹುಟ್ಟುವ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ ಎಂದು ಡಾ. ಪರಮೇಶ್ ವಿವರಿಸುತ್ತಾರೆ. `ಮಗು ತಾಯಿಯ ಗರ್ಭದಲ್ಲಿದ್ದಾಗಲೂ ಭ್ರೂಣವು ಕಡಿಮೆ ಆಮ್ಲಜನಕ ಪಡೆಯುವುದರಿಂದ ತೊಂದರೆಗಳು ಉಂಟಾಗಬಹುದು. ಮಾಲಿನ್ಯಕಾರಕ ಗಾಳಿಯಿಂದಾಗಿ ಭ್ರೂಣಕ್ಕೆ ಪೋಷಣೆ ಮತ್ತು ಆಮ್ಲಜನಕವನ್ನು ಒದಗಿಸುವ ಹೊಕ್ಕುಳ ಬಳ್ಳಿಯು ತಾಯಿಯ ದೇಹದಲ್ಲಿನ ಆಮ್ಲಜನಕದ ಒತ್ತಡದಿಂದಾಗಿ ಹೆಪ್ಪುಗಟ್ಟುತ್ತದೆ’ ಎನ್ನುತ್ತಾರವರು.
ಹೆಚ್ಚಿನ ವಾಯುಮಾಲಿನ್ಯಕ್ಕೆ ತುತ್ತಾದ ಗರ್ಭಿಣಿಯರಲ್ಲಿ 30 ಶೇಖಡಾ ಮಂದಿ ಅಕಾಲಿಕ ಹೆರಿಗೆಗೆ ಒಳಗಾಗುತ್ತಾರೆ ಮತ್ತು ಹುಟ್ಟಿದ ಮಕ್ಕಳು ನಿರಂತರ ಔಷಧಿ ಹಾಗೂ ಆರೋಗ್ಯದ ನಿಗಾದೊಂದಿಗೆ ಬೆಳೆಯುವಂತಾಗುತ್ತದೆ. ಮಾತ್ರವಲ್ಲದೇ ಈ ಮಕ್ಕಳಲ್ಲಿ ಉಬ್ಬಸದ ಪ್ರಮಾಣವೂ ಅಧಿಕವಾಗಿರುತ್ತದೆ ಎನ್ನುತ್ತಾರೆ ಡಾ. ಪರಮೇಶ್.
`ಇತ್ತೀಚಿಗಿನ ವರ್ಷಗಳಲ್ಲಿ ಅಸ್ತಮಾ ಲಕ್ಷಣಗಳೊಂದಿಗೆ ನನ್ನ ಬಳಿಗೆ ಬರುವ ಮಕ್ಕಳ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿದೆ’ ಎನ್ನುವ ಅವರು `1975ರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 9 ಶೇಖಡಾ ಮಕ್ಕಳಲ್ಲಿ ಅಸ್ತಮಾವಿದ್ದರೆ, 2016ರಲ್ಲಿ ಈ ಸಂಖ್ಯೆಯು ಬೆಂಗಳೂರಿನಲ್ಲಿ 26.5% ಕ್ಕೆ ಏರಿಕೆಯಾಗಿತ್ತು. ಮಾತ್ರವಲ್ಲದೇ 1975ರ ಅಪ್ರಾಪ್ತರ ಅಸ್ತಮಾ ಪ್ರಮಾಣದಲ್ಲಿನ ಶೇ. 20 ಮಂದಿ ತೀವ್ರ ತೆರೆನಾದ ಅಸ್ತಮಾದಲ್ಲಿದ್ದರೆ ಈಗ ಆ ಪ್ರಮಾಣವು 60 ರಿಂದ 70
ಶೇಖಡಕ್ಕೇರಿದೆ.
ಸಂಶೋಧನಾ ವರದಿಗಳು ಇನ್ನಷ್ಟು ಆತಂಕಕಾರಿ ಮಾಹಿತಿಯನ್ನು ನೀಡುತ್ತವೆ. ಅವುಗಳಲ್ಲಿ ಒಂದರ ಪ್ರಕಾರ 2015ರಲ್ಲಿ ಬೆಂಗಳೂರು ನಗರದ ವೈದ್ಯರ ಬಳಿಗೆ ಬಂದ ಅಸ್ತಮಾ ರೋಗಿಗಳ ಸಂಖ್ಯೆ 2016ರಲ್ಲಿ ಶೇ.80ಕ್ಕಿಂತಲೂ ಹೆಚ್ಚಳವನ್ನು ಕಂಡಿದೆ. `ಪ್ರಾಕ್ಟೋ’ ಎಂಬ ರೋಗಿಗಳಿಗೆ ವೈದ್ಯರ ಭೇಟಿಯನ್ನು ನಿಗದಿಗೊಳಿಸುವ ಜಾಲತಾಣವೊಂದು 2017ರಲ್ಲಿ ತನ್ನಲ್ಲಿರುವ ಮಾಹಿತಿಯನ್ನು ಆಧರಿಸಿ, ಸಂಶೋಧನೆ ನಡೆಸುವ ಮೂಲಕ ಈ ಮಾಹಿತಿಯು
ಬೆಳಕಿಗೆ ಬಂದಿದೆ. ಇದರ ಜೊತೆಗೆ ಪ್ರಾಕ್ಟೋ ಬಿಡುಗಡೆ ಮಾಡಿದ `2ನೇ ವಾರ್ಷಿಕ ಆರೋಗ್ಯ ಮ್ಯಾಪ್’ ವರದಿಯ ಪ್ರಕಾರ ದೇಶದಲ್ಲೇ ವರ್ಷದಿಂದ ವರ್ಷಕ್ಕೆ ಅಸ್ತಮಾ ರೋಗಿಗಳ ಸಂಖ್ಯೆಯು ಬೆಂಗಳೂರು ನಗರದಲ್ಲಿ ಗಣನೀಯವಾಗಿ ಏರಿಕೆ ಕಾಣುತ್ತಿದೆ. ದೇಶದ ಒಟ್ಟು ಏರಿಕೆಯಲ್ಲಿಯೇ ಬೆಂಗಳೂರಿನ (62%) ಪ್ರಮಾಣವು ಆತಂಕಕಾರಿಯಾಗಿ ಏರಿಕೆ ಕಂಡಿದ್ದು, ಉಳಿದಂತೆ ಮುಂಬಯಿ 64%, ದೆಹಲಿಯು 50% ಶೇಖಡಾ ಏರಿಕೆಯನ್ನು ದಾಖಲಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.