ಕೋವಿಡ್ ನಿಂದ ರಕ್ಷಣೆಗೆ ಸರಳ ಸೂತ್ರಗಳನ್ನು ಪಾಲಿಸಿ


Team Udayavani, Apr 17, 2021, 2:00 AM IST

dcm

ಇಡೀ ಜಗತ್ತು ಎದುರಿಸುತ್ತಿರುವಂತೆ ಕರ್ನಾಟಕವು ಕೊರೊನಾ ಸಂಕಷ್ಟ ವನ್ನು ಎದುರಿಸುತ್ತಿದೆ. ಸ್ವಲ್ಪ ಜಾಸ್ತಿಯೇ ಸವಾಲನ್ನು ಎದುರಿಸುತ್ತಿದೆ ಎಂದು ಹೇಳಬಹುದು. ಆದರೆ ಹೆದರುವ ಇಲ್ಲವೇ ಆತಂಕಕ್ಕೆ ಗುರಿಯಾಗುವ ಅಗತ್ಯವಂತೂ ಖಂಡಿತಾ ಇಲ್ಲ.
ಯಾಕೆಂದರೆ ಕೋವಿಡ್‌ ಸೋಂಕನ್ನು ಎದುರಿಸುವಂಥ ವ್ಯಾಪಕ ವ್ಯವಸ್ಥೆಯನ್ನೂ ನಾವು ಈಗ ಹೊಂದಿದ್ದೇವೆ. ಅದು ಕೋವಿಡ್‌ ಪರೀಕ್ಷೆ ಇರಬಹುದು, ಚಿಕಿತ್ಸೆ ಇರಬಹುದು, ತುರ್ತು ನಿಗಾ ವ್ಯವಸ್ಥೆ ಇರಬಹುದು, ಲಸಿಕೆ ಇರಬಹುದು.. ಹೀಗೆ ಎಲ್ಲ ಅಂಶಗಳನ್ನು ನೋಡುತ್ತಾ ಬಂದರೆ ಇವತ್ತು ಗಾಬರಿಯ ಪರಿಸ್ಥಿತಿಯಂತೂ ಇಲ್ಲ. ನಮಗಿರುವ ಅನುಭವದ ಮೇಲೆಯೇ ನಾವು ಕಾರ್ಯನಿರ್ವಹಿಸಬೇಕಾಗಿದೆ.

ಹಾಗಂತ ನಾವು ಬೇಕಾಬಿಟ್ಟಿ ಓಡಾಡಿಕೊಂಡು ಸೋಂಕನ್ನು ಮೈಮೇಲೆ ಎಳೆದುಕೊಳ್ಳಬಹುದೇ? ಇಲ್ಲ, ಅದು ನಿಜಕ್ಕೂ ತಪ್ಪಾಗುತ್ತದೆ. ನಾಗರಿಕರಾಗಿ ನಾವು ನಮ್ಮ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳುವುದು ದೊಡ್ಡ ಜವಾಬ್ದಾರಿ ಮಾತ್ರವಷ್ಟೇ ಅಲ್ಲ, ನಮ್ಮಂತೆಯೇ ಇತರರು ಆರೋಗ್ಯವಾಗಿರಬೇಕು ಎಂಬ ಸಾಮಾನ್ಯ ಪ್ರಜ್ಞೆ ಇದ್ದರೆ ಸಾಕು, ಅದೆಂಥ ವೈರಸ್‌ ಅನ್ನಾದರೂ ತಡೆಯಬಹುದು. ಇಂಥ ಮನೋಭಾವನೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಇದು ನನ್ನ ಕಳಕಳಿಯ ಮನವಿ.

ಕೊರೊನಾ ಸೋಂಕಿನ ಕಾಯಿಲೆ ಎನ್ನುವುದು ಎಲ್ಲರೂ ಬಲ್ಲ ಸಂಗತಿ. ಒಬ್ಬರಿಂದ ಒಬ್ಬರಿಗೆ ಹರಡುವಂಥ ವೈರಸ್‌ ಇದು. ಕಳೆದ ಒಂದು ವರ್ಷದಿಂದ ಇದು ನಮ್ಮ ನಡುವೆಯೇ ಇದೆ, ಎಷ್ಟೇ ಪ್ರಯತ್ನಪಟ್ಟರೂ ಹೋಗುತ್ತಿಲ್ಲ, ಹೋಗಲಾಡಿಸಲು ನಾವು ಮಾಡುತ್ತಿರುವ ಪ್ರಯತ್ನ ಅಷ್ಟಿಷ್ಟಲ್ಲ. ಸಮಾಧಾನಕರ ಸಂಗತಿ ಎಂದರೆ ಕಳೆದ ಇದೇ ಮಾರ್ಚ್‌-ಎಪ್ರಿಲ್‌ ಹೊತ್ತಿಗೆ ಗಾಬರಿಪಡುವಂಥ ಸ್ಥಿತಿ ಇತ್ತು. ಈಗಲೂ ಅದರ ತೀವ್ರತೆ ಹೆಚ್ಚಿದ್ದರೂ ಆತಂಕದ ಸ್ಥಿತಿಯಂತೂ ಇಲ್ಲವೇ ಇಲ್ಲ. ಅದರ ತೀವ್ರತೆ ಕಡಿಮೆಯಾಗಿದೆ. ಇಷ್ಟಾಯಿತಲ್ಲ ಎಂದು ಯಾರೂ ನಿರ್ಲಕ್ಷಿಸುವುದು ಖಂಡಿತಾ ಬೇಡ. ಯಾಕೆಂದರೆ, ವೈರಸ್‌ ಎನ್ನುವುದು ಯಾವ ಕ್ಷಣದಲ್ಲಿ ಹೇಗೆ ವರ್ತಿಸುತ್ತದೋ ಹೇಳುವುದು ಕಷ್ಟ. ಮೈ ಮರೆಯುವುದು ತರವಲ್ಲ.

ಬಹುಮುಖ್ಯ ಸಂಗತಿ ಎಂದರೆ ಕೋವಿಡ್‌ಗೆ ಲಸಿಕೆಯೇ ಇರಲಿಲ್ಲ. ವ್ಯಾಕ್ಸಿನ್‌ ಬರುವ ತನಕ ಅದರ ಬಗ್ಗೆ ಅತೀವ ಕುತೂಹಲವಿತ್ತು. ಎಲ್ಲರಿಗೂ ಅದನ್ನು ಪಡೆದುಕೊಳ್ಳುವ ಆಕಾಂಕ್ಷೆ ಇತ್ತು. ಈಗ ಲಸಿಕೆ ಬಂದಿದೆ. 45 ವರ್ಷ ಮೇಲ್ಪಟ್ಟು ಎಲ್ಲರಿಗೂ ಕೊಡಲಾಗುತ್ತಿದೆ. ಸ್ವಇಚ್ಛೆಯಿಂದ ಎಲ್ಲರೂ ಲಸಿಕೆ ಪಡೆದರೆ ಕೋವಿಡ್‌ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲೂ ಎಲ್ಲರೂ ಭಾಗಿಯಾದಂತೆಯೇ ಲೆಕ್ಕ.

ಸರಳ ಸೂತ್ರಗಳನ್ನು ಪಾಲಿಸೋಣ: ಒಂದು ಅಂಶದ ಮೇಲೆ ಎಲ್ಲರೂ ಗಮನವಿರಿಸಬೇಕು. ಯಾರಿಗೆ ಆಗಲಿ ಜ್ವರ, ಶೀತ, ಕೆಮ್ಮು, ವಾಸನೆ ಗ್ರಹಿಕೆ ಆಗದಿರುವುದು ಇತ್ಯಾದಿ ಲಕ್ಷಣಗಳಿದ್ದರೆ ಅಂಥವರು ವಿಳಂಬ ಮಾಡದೇ ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಂಥವರು ಯಾರಾದರೂ ಇದ್ದರೆ ನಿರ್ಲಕ್ಷ್ಯ ಮಾಡದೇ ಪರೀಕ್ಷೆ ಮಾಡಿಸಿಕೊಂಡರೆ ಅದಕ್ಕಿಂತ ಉತ್ತಮ ಕಾರ್ಯ ಇನ್ನೊಂದಿಲ್ಲ.

ನನ್ನ ಪ್ರಕಾರ ಈ ಮೂರು ಅಂಶಗಳು ಕೋವಿಡ್‌ ಸರಪಳಿಯನ್ನು ಪರಿಣಾಮಕಾರಿಯಾಗಿ ತುಂಡರಿಸಬಲ್ಲವು. 1.ರೋಗ ಲಕ್ಷಣ ಕಾಣಿಸಿಕೊಂಡ ತತ್‌ಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು. 2.ಕ್ಷಿಪ್ರವಾಗಿ ಪರೀಕ್ಷೆಯ ಫಲಿತಾಂಶ ನೀಡುವುದು. 3. ಫಲಿತಾಂಶ ಪಾಸಿಟಿವ್‌ ಬಂದರೆ ಕೂಡಲೇ ಚಿಕಿತ್ಸೆ ಆರಂಭಿಸುವುದು. ಸೋಂಕು ಕಂಡುಬಂದ ತತ್‌ಕ್ಷಣವೇ ಚಿಕಿತ್ಸೆ ನೀಡಿದರೆ ರೋಗವು ಉಲ್ಬಣ ಸ್ಥಿತಿಗೆ ಹೋಗುವುದಿಲ್ಲ. ಆಗ ಆಸ್ಪತ್ರೆ, ಐಸಿಯು, ಆಕ್ಸಿಜನ್‌ ಮುಂತಾದವು ಬೇಕಾಗುವುದಿಲ್ಲ.

ಲಸಿಕೆ ಪಡೆಯುವುದು ಒಂದು ಕರ್ತವ್ಯ: ಬಹಳಷ್ಟು ಜನ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ನಿಜಕ್ಕೂ ನೋವಿನ ವಿಚಾರ. ನನ್ನ ಪ್ರಕಾರ ಲಸಿಕೆ ಪಡೆಯುವುದು ಒಂದು ಮುಖ್ಯ ಕರ್ತವ್ಯ. ಕಾರಣವಿಷ್ಟೇ, ಕೋವಿಡ್‌ ಬಂದಾಗಿನಿಂದ ಈ ದಿನದವರೆಗೆ ನಾವೆಲ್ಲ ಎದುರಿಸಿದ ಎಲ್ಲ ಕ್ಷಣಗಳನ್ನು ಒಮ್ಮೆ ಕಣ್ಣಮುಂದೆ ತಂದುಕೊಂಡರೆ ಲಸಿಕೆ ಪಡೆಯುವುದು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ.

ನಾನು ಕೂಡ ಸೋಂಕಿತನಾಗಿದ್ದೆ: ಸಾರ್ವಜನಿಕ ಸೇವೆಯಲ್ಲಿರುವ ನಾನೂ ಕೋವಿಡ್‌ ಸೋಂಕಿಗೆ ಒಳಗಾಗಿದ್ದೆ. ಕೆಲವು ದಿನ ಮನೆಯಲ್ಲೇ ಕ್ವಾರಂಟೈನ್‌ ಆಗಿದ್ದೆ. ವೈದ್ಯರು ಹೇಳಿದ ಚಿಕಿತ್ಸೆಯನ್ನು ಪಡೆದು, ಅವರು ಕೊಟ್ಟ ಸಲಹೆ- ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿದೆ. ಅದು ನನ್ನನ್ನು ತೀವ್ರ ತೊಂದರೆಗೀಡು ಮಾಡಿತ್ತು. ಆದರೂ ನಾನು ಭಯಗೊಳ್ಳದೆ ಪರಿಸ್ಥಿತಿ ಯನ್ನು ಎದುರಿಸಿದೆ. ಹಾಗೆ ನೋಡಿದರೆ ನಾನು ಎರಡು ಸಲ ಕ್ವಾರಂಟೈನ್‌ ನಲ್ಲಿದ್ದೆ. ಅದೊಂದು ವಿಕ್ಷಿಪ್ತ ಅನುಭವ. ಎದುರಿಸಲೇಬೇಕು. ನನ್ನ ಅನುಭವ ದಿಂದಲೇ ಹೇಳುವುದಾದರೆ ಯಾರಿಗೂ ಅಂಥ ನೋವು ಆಗಬಾರದು. ಕೊನೆಯಲ್ಲಿ ನಾನು ಹೇಳುವುದು ಇಷ್ಟೇ. ಕೋವಿಡ್‌ ಎನ್ನುವ ಮಹಾಮಾರಿ ಇಡೀ ಜಗತ್ತಿನ ಸಮೀಕರಣಗಳನ್ನೇ ಬದಲಾಯಿಸಿ ಬಿಟ್ಟಿದೆ. ಬಲಿಷ್ಠ ದೇಶ ಗಳನ್ನೇ ಅಲುಗಾಡಿಸಿಬಿಟ್ಟಿದೆ. ಹಾಗೆಯೇ ಹೊಸ ಹೊಸ ಸಾಧ್ಯತೆಗಳನ್ನೂ ತೆರೆ ದಿಟ್ಟಿದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು.

– ಡಾ|ಸಿ.ಎನ್‌. ಅಶ್ವತ್ಥನಾರಾಯಣ, ಶಾಸಕ, ಮಲ್ಲೇಶ್ವರ ಉಪ ಮುಖ್ಯಮಂತ್ರಿ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.