ವಿಜಯನಗರದಲ್ಲಿ ಸಿಂಗ್ ಈಸ್ ಕಿಂಗ್
Team Udayavani, Dec 10, 2019, 3:05 AM IST
ಬಳ್ಳಾರಿ: ವಿಜಯನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆನಂದ್‌ಸಿಂಗ್ ಮತ್ತೂಮ್ಮೆ ವಿಜಯ ಪತಾಕೆ ಹಾರಿಸಿದ್ದು, 30125 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮುನ್ನುಡಿ ಬರೆದಿದ್ದ ಆನಂದ್‌ಸಿಂಗ್, ಸಿಎಂ ಯಡಿಯೂರಪ್ಪ ಅವರಿಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.
2018ರ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಕೇವಲ 8228 ಮತಗಳ ಅಂತರದಿಂದ ಜಯ ಗಳಿಸಿದ್ದ ಆನಂದ್‌ಸಿಂಗ್ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರೂ, ವಿರೋಧದ ಅಲೆ ಮುಂದುವರೆಯಲಿದೆ ಎಂಬ ರಾಜಕೀಯ ಮುಖಂಡರ ಮಾತುಗಳಿಗೆ ದಾಖಲೆ ಗೆಲುವಿನ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಕ್ಷೇತ್ರದಲ್ಲಿ ಹಿಡಿತ ತಪ್ಪಿದ್ದ ಸಿಂಗ್‌ಗೆ ಉಪಚುನಾವಣೆ ದಾಖಲೆ ಗೆಲುವಿನಿಂದ ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮತ್ತೂಮ್ಮೆ ಸಾಬೀತು ಪಡಿಸಿದ್ದಾರೆ.
ಪುನಃ ಬಿಜೆಪಿ ಭದ್ರಕೋಟೆ: ದಶಕಗಳ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವಿಜಯನಗರ ಕ್ಷೇತ್ರ 2008ರಲ್ಲಿ ಆನಂದ್ ಸಿಂಗ್ ಗೆಲುವಿನಿಂದಾಗಿ ಬಿಜೆಪಿ ಭದ್ರಕೋಟೆಯಾಯಿತು. 2008, 2013ರಲ್ಲಿ ಎರಡು ಬಾರಿ ಸತತ ಬಿಜೆಪಿಯಿಂದ ಭರ್ಜರಿ ಜಯ ಗಳಿಸಿದ್ದ ಆನಂದ್ ಸಿಂಗ್, ಕಳೆದ ವರ್ಷ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ ಜಯ ಗಳಿಸಿದರಾದರೂ ಹಿಂದಿನ ಎರಡು ಚುನಾವಣೆಗಳಿಗೆ ಹೋಲಿಸಿದರೆ ಅಂತರ ಕಡಿಮೆ ಎನಿಸಿದ್ದು, ಆನಂದ್‌ಸಿಂಗ್‌ಗೆ ಬಿಸಿ ಮುಟ್ಟಿದ್ದನ್ನು ಅಲ್ಲಗಳೆಯುವಂತಿಲ್ಲ. ಇದರಿಂದ ಕ್ಷೇತ್ರದಲ್ಲೂ ಹಿಡಿತ “ಕೈ’ ತಪ್ಪಿದ್ದ ಆನಂದ್ ಸಿಂಗ್‌ಗೆ ಉಪ ಚುನಾವಣೆ ದಾಖಲೆ ಗೆಲುವಿನಿಂದ ವಿಜಯನಗರ ಕ್ಷೇತ್ರವನ್ನು ಪುನಃ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಲ್ಕು ಬಾರಿ ಗೆಲುವು: ಕಾಂಗ್ರೆಸ್‌ನ ವೆಂಕಟರಾವ್ ಘೋರ್ಪಡೆ ವಿರುದ್ಧ 30125 ಮತಗಳ ಅಂತರದಿಂದ ದಾಖಲೆ ಗೆಲುವು ಸಾಧಿ ಸಿದ್ದಾರೆ. ವಿಜಯನಗರ ಕ್ಷೇತ್ರದ ಮಟ್ಟಿಗೆ ಎರಡು ಸಲಕ್ಕಿಂತಲೂ ಹೆಚ್ಚು ಗೆದ್ದವರಿಲ್ಲ. ಈ ಹಿಂದೆ ಮಾಜಿ ಶಾಸಕ ದಿ.ಶಂಕರಗೌಡ ಅವರು ಎರಡು ಸಲ ಜಯಗಳಿಸಿದ್ದರು. ಮೂರನೇ ಬಾರಿಗೆ ಯಾರಿಗೂ ಕ್ಷೇತ್ರದ ಮತದಾರರು ಮನ್ನಣೆ ನೀಡಿರಲಿಲ್ಲ. ಆದರೆ, ಆನಂದ್ ಸಿಂಗ್ ಸತತವಾಗಿ ನಾಲ್ಕು ಬಾರಿ ಜಯ ಗಳಿಸಿದ ಏಕೈಕ ಶಾಸಕರಾಗಿದ್ದಾರೆ.
ಗೆದ್ದವರು
ಆನಂದ್ ಸಿಂಗ್ (ಬಿಜೆಪಿ)
ಪಡೆದ ಮತ: 85477
ಗೆಲುವಿನ ಅಂತರ: 30125
ಸೋತವರು
ವೆಂಕಟರಾವ್ ಘೋರ್ಪಡೆ(ಕಾಂಗ್ರೆಸ್)
ಮತ: 55352
ಕವಿರಾಜ ಅರಸ್ (ಪಕ್ಷೇತರ)
ಪಡೆದ ಮತ: 3950
ಗೆದ್ದದ್ದು ಹೇಗೆ?
-ಆನಂದ್‌ಸಿಂಗ್ ಮೂಲತಃ ಸ್ಥಳೀಯರಾಗಿದ್ದು, ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿರುವುದೇ ಆಗಿದೆ.
-ಕ್ಷೇತ್ರದ ಜನರ ನಾಡಿಮಿಡಿತ ಅರಿತಿರುವ ಆನಂದ್ ಸಿಂಗ್ ಪ್ರಚಾರ ಕಾರ್ಯದ ವೇಳೆ ಜನರ ಬಳಿ ತೆರಳಿ ಅನ್ಯೋನ್ಯವಾಗಿ ಬೆರೆತಿದ್ದು.
-ತನ್ನದೇ ಆದ ಯುವ ಕಾರ್ಯಕರ್ತರ ಪಡೆ ಹೊಂದಿರುವುದು
ಸೋತದ್ದು ಹೇಗೆ?
-ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಮೂಲತಃ ಸ್ಥಳೀಯರಲ್ಲ.
-ರಾಜಕೀಯವಾಗಿ ಪರಿಚಿತರೆನಿಸಿದರೂ ಕ್ಷೇತ್ರದ ಮತದಾರರಿಗೆ ಅವರು ಅಪರಿಚಿತರು.
-ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಕೊರತೆ, ಸಂಘಟಿತ ಪ್ರಚಾರ ಮಾಡದೇ ಇರುವುದು.
ಕ್ಷೇತ್ರದ ಮತದಾರರಿಗೆ ನನ್ನ ಅಭಿನಂದನೆ. ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಒಂದೊಮ್ಮೆ ವಿಜಯನಗರ ಜಿಲ್ಲೆ ಆಗದಿದ್ದರೆ ಮತ್ತೆ ರಾಜೀನಾಮೆಗೆ ಸಿದ್ಧ.
-ಆನಂದಸಿಂಗ್, ಬಿಜೆಪಿ ವಿಜೇತ ಅಭ್ಯರ್ಥಿ
55 ಸಾವಿರಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಅಭಿನಂದನೆ. ಈಗ ಬಿಜೆಪಿ ಟ್ರೆಂಡ್ ಇದೆ. ಪದೇ ಪದೇ ಉಪ ಚುನಾವಣೆ ನಡೆಯಬಾರದೆಂದು ಜನ ಈ ಫಲಿತಾಂಶ ನೀಡಿದ್ದಾರೆ.
-ವೆಂಕಟರಾವ್ ಘೋರ್ಪಡೆ, ಕಾಂಗ್ರೆಸ್ ಪರಾಜಿತ ಅಭ್ಯರ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.