L’OREAL: 8.32 ಲಕ್ಷ ಕೋಟಿ ಹೊಂದಿದ ಜಗತ್ತಿನ ಮೊದಲ ಮಹಿಳಾ ಸಿರಿವಂತೆ ಮೇಯರ್
ಬ್ಲೂಮ್ಬರ್ಗ್ ಸಿರಿವಂತರ ಪಟ್ಟಿಯಲ್ಲಿ ಫ್ರಾನ್ಸ್ ಉದ್ಯಮಿ ಸಾಧನೆ- ಜಗತ್ತಿನ ಸಿರಿವಂತರ ಪಟ್ಟಿಯಲ್ಲಿ 12ನೇ ಸ್ಥಾನ
Team Udayavani, Dec 29, 2023, 8:37 PM IST
ವಾಷಿಂಗ್ಟನ್: ಫ್ರಾನ್ಸ್ ಮೂಲದ ಸೌಂದರ್ಯವರ್ಧಕಗಳ ಕಂಪನಿ “ಲೋರಿಯಲ್”ನ ಉಪಾಧ್ಯಕ್ಷೆ, ಉದ್ಯಮಿ ಫ್ರಾಂಕೋಯಿಸ್ ಬೆಟೆನ್ಕೋರ್ಟ್ ಮೇಯರ್ ಅವರು 8.32 ಲಕ್ಷ ಕೋಟಿ ರೂ. (100 ಬಿಲಿಯನ್ ಡಾಲರ್ ) ಆಸ್ತಿ ಹೊಂದಿರುವ ವಿಶ್ವದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಬ್ಲೂಮ್ಬರ್ಗ್ ವರದಿಯ ಪ್ರಕಾರ, ಮೇಯರ್ ಅವರ ಆಸ್ತಿ ಮೌಲ್ಯವು ಗುರುವಾರ 100.1 ಬಿಲಿಯನ್ ಡಾಲರ್ಗಳಿಗೆ(83.29 ಲಕ್ಷ ಕೋಟಿ ರೂ.) ಏರಿಕೆಯಾಗಿದೆ. ಲೋರಿಯಲ್ ಕಂಪನಿಯ ಷೇರುಗಳ ಮಾರುಕಟ್ಟೆ ಮೌಲ್ಯ ಏರಿಕೆ ಹಿನ್ನೆಲೆಯಲ್ಲಿ ಮೇಯರ್ ಆಸ್ತಿ ಹೆಚ್ಚಳಕ್ಕೆ ಕಾರಣವಾಯಿತು. ಪ್ರಸ್ತುತ ಮೇಯರ್ ಅವರು ಪ್ರಪಂಚದ 12ನೇ ಶ್ರೀಮಂತರಾಗಿದ್ದಾರೆ.
1909ರಲ್ಲಿ ಮೇಯರ್ ಅವರ ತಾತ ಯುಜೀನ್ ಶುಲ್ಲರ್ ಅವರು ಲೋರಿಯಲ್ ಗ್ರೂಪ್ ಅನ್ನು ಸ್ಥಾಪಿಸಿದರು. ಮೇಯರ್ ಅವರು ಲೋರಿಯಲ್ ಗ್ರೂಪ್ನ ಉತ್ತರಾಧಿಕಾರಿಯಾಗಿದ್ದಾರೆ.
1998ರ ನಂತರ ಇದೇ ಮೊದಲ ಬಾರಿಗೆ ಲೋರಿಯಲ್ ಕಂಪನಿಯ ಆದಾಯ ದಾಖಲೆಯ ಏರಿಕೆ ಕಂಡಿದೆ. ಪ್ರಸ್ತುತ ಕಂಪನಿಯ ಮಾರುಕಟ್ಟೆ ಮೌಲ್ಯ 223 ಲಕ್ಷ ಕೋಟಿ ರೂ (268 ಬಿಲಿಯನ್ ಡಾಲರ್) ಆಗಿದೆ. ಮೇಯರ್(70) ಮತ್ತು ಅವರ ಕುಟುಂಬದವರು ಕಂಪನಿಯ ಷೇರುದಾರರಾಗಿದ್ದಾರೆ. ಗರಿಷ್ಠ ಶೇ.35ರಷ್ಟು ಷೇರುಗಳನ್ನು ಮೇಯರ್ ಹೊಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.