![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 24, 2022, 7:44 PM IST
ಶಿರಸಿ: ನಮ್ಮೂರು ಜಾತ್ರೆಯ ಅಭಿಮಾನ ಮೂಡಿಸಿ ಕೆಲಸ ಮಾಡಬೇಕು. ನಮ್ಮದು ಎಂದಾದಾಗ ಸಣ್ಣಪುಟ್ಟ ಲೋಪದೋಷಗಳು ಕೂಡ ದೊಡ್ಡದಾಗುವುದಿಲ್ಲ ಎಂದು ಸ್ಪೀಕರ್, ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ಗುರುವಾರ ನಗರದ ಮಿನಿ ವಿಧಾನ ಸೌಧದಲ್ಲಿ ಮಾರಿಕಾಂಬಾ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾ.15 ರಿಂದ 23 ರ ತನಕ ಜಾತ್ರೆಗೆ ಭಕ್ತರು ಶ್ರದ್ದೆ ಭಕ್ತಿಯಿಂದ ಮಾರಿಕಾಂಬಾ ದೇವಿಯ ದರ್ಶನಕ್ಕೆ ಜಾತ್ರೆಗೆ ಬರುತ್ತಾರೆ. ಭಾವನಾತ್ಮಕ ನಂಬಿಕೆಯಿಂದ ಬರುವ ಜನರಿಗೆ ತೊಂದರೆ ಆಗಬಾರದು. ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ನಡೆಯುವ ಗದ್ದುಗೆ ಎದುರು ಹಾಗೂ ಮಂಟಪದಲ್ಲಿ ಒಂದೊಳ್ಳೆ ವಾತಾವರಣ ಆಗಬೇಕು ಎಂದರು.
ಆತಿಥ್ಯ ನೀಡುವ ಊರಾಗಿ ನಾವೂ ಭಾವನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಒಬ್ಬರ ಮೇಲೆ ಒಬ್ಬರು ದೂಷಿಸದೇ ಕೆಲಸ ಆಗಬೇಕು. ಕೊರೋನಾ ಮುನ್ನೆಚ್ಚರಿಕೆ ಜೊತೆ ಜಾತ್ರೆ ಮಾಡಬೇಕು. ಸೌಲಭ್ಯ ನೀಡಲು, ವ್ಯವಸ್ಥೆ ನಿರ್ವಹಿಸಲೂ ಕಷ್ಟವಾಗುತ್ತದೆ. ನಾಲ್ಕು ಅಂಗಡಿ ಕಡಿಮೆ ಆದರೆ ತೊಂದರೆ ಇಲ್ಲ ಎಂದರು.
ಕೊರೋನಾ ಜಾಗೃತಿ ಎಲ್ಲರೂ ವಹಿಸಿಕೊಳ್ಳಬೇಕು. ವ್ಯವಸ್ಥೆ ಸಡಿಲತೆ ಆಗದಂತೆ ನೋಡಿಕೊಂಡು ಕೆಲಸ ಮಾಡಬೇಕು ಎಂದ ಅವರು ಆರ್ಥಿಕ ಗುರಿ ಇಟ್ಟುಕೊಂಡು ಕೆಲಸ ಮಾಡಬೇಡಿ ಎಂದರು.
ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಮುನ್ನೆಚ್ಚೆರಿಕೆಯಲ್ಲಿ ನಡೆಬೇಕಿದೆ. ಆದರೆ ಎಚ್ಚರಿಕೆ ಮರೆಯಬಾರದು. ಸಿದ್ದತೆ ದೃಷ್ಟಿಯಿಂದ ವೇಗವಾಗಿ ಯೋಚಿಸಿ ಮುಂದೆ ಹೋಗಬೇಕು. ಶಿರಸಿ ನಗರಸಭೆ, ವಿವಿಧ ಇಲಾಖೆ, ದೇವಸ್ಥಾನ ಕಡೆಯಿಂದಲೂ ಜಾತ್ರೆ ಸಿದ್ದತೆ ಆಗುತ್ತಿದೆ ಎಂದೂ ಹೇಳಿದರು.
ಮರ ಕಡಿಯುವಿಕೆ ಸರಕಾರದ ಕಾನೂನು ಪಾಲನೆಯ ಜೊತೆ ದೇವಾಲಯದ ಆಚರಣೆಗಳೂ ಪೂರ್ಣಗೊಳ್ಳುವ ಮಾದರಿಯಲ್ಲಿ ಯೋಜನೆ ಹಾಕಿಕೊಳ್ಳಬೇಕು. ಭಕ್ತರ ಭಾವನೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಿದೆ ಎಂದ ಕಾಗೇರಿ, ಖಾಲಿ ಇರುವ ಇಲಾಖೆಗಳ ಅಧಿಕಾರಿಗಳನ್ನೂ ಜಾತ್ರೆ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಸರಕಾರ ಒಳ್ಳೆಯ ಕೆಲಸಮಾಡಲು ಅಸಾಹಾಯಕ ಆಗಬಾರದು ಎಂದೂ ಸೂಚಿಸಿದರು.
ಶಿರಸಿ ಕುಮಟಾ ರಸ್ತೆ ಕಮಗಾರಿ ನಿಧಾನ ಆಗಿದೆ. ಕರಾವಳಿ ಭಾಗದಿಂದ ಅತಿ ಹೆಚ್ಚು ಭಕ್ತರು ಆಗಮಿಸುತ್ತಾರೆ. ಹೊಂಡ ತುಂಬುವ ಕಾರ್ಯ ತಕ್ಷಣ ಆಗಬೇಕು ಎಂದು ಸೂಚಿಸಿದರು.
ಪೊಲೀಸ್ , ಟ್ರಾಫಿಕ್ ಸಲುವಾಗಿ ಹೊರ ತಾಲೂಕು ಪೊಲೀಸ್ ಬಳಸಿಕೊಳ್ಳಬೇಕಿದೆ. ಕಳೆದ ಅವಧಿಯಲ್ಲಿ ಕೆಲಸ ಮಾಡಿದ ಪೊಲೀಸರನ್ನೇ ಬಳಸಿಕೊಳ್ಳುವಂತೆ ಸೂಚಿಸಿದರು.
ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ರವೀಂದ್ರ ನಾಯ್ಕ, ಜಾತ್ರಾ ಚಪ್ಪರದ ಸಿದ್ದತೆ ಆಗುತ್ತಿದೆ. ಹೊರಬೀಡ ಒಂದಾಗಿದೆ. ಉಳಿದ ಹೊರಬೀಡು ನಿಗದಿತ ದಿನದಿಂದ ನಡೆಯಲಿದೆ. ಮಧ್ಯಾಹ್ನ 10 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ. ಜಾತ್ರೆಯ ಸಿದ್ದತೆ ನಡೆದಿದೆ ಎಂದರು. ಬಾಬುದಾರ ಪ್ರಮುಖ ಜಗದೀಶ ಗೌಡ, ದೇವಿ ದರ್ಶನಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಎಸಿ ದೇವರಾಜ್ ಆರ್, ಡಿವೈಎಸ್ ಪಿ ರವಿ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಡಿಎಪ್ ಓ ಎಸ್.ಜಿ.ಹೆಗಡೆ, ಅಧಿಕಾರಿಗಳಾದ ಕೃಷ್ಣ ರೆಡ್ಡಿ, ಉಮೇಶ ಎಸ್, ಡಾ. ವಿನಾಯಕ ಕಣ್ಣಿ, ಡಾ. ಗಜಾನನ ಭಟ್ಟ, ಸಿಪಿಐ ರಾಮಚಂದ್ರ ನಾಯಕ, ಉಪಾಧ್ಯಕ್ಷ ಸುದೇಶ ಜೋಗಳೆಕರ್, ಧರ್ಮದರ್ಶಿ ಮಂಡಳಿಯ ಸುಧೀರ ಹಂದ್ರಾಳ, ಶಿವಾನಂದ ಶೆಟ್ಟಿ, ವತ್ಸಲಾ ಹೆಗಡೆ ಇತರರು ಇದ್ದರು.
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.