Sirsi: ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸ್ವಾಗತ ಮಾಡುತ್ತದೆ, ಬರುವವರು ಯಾವತ್ತೂ ಬರಬಹುದು
ಶಿರಸಿಯಲ್ಲಿ ಮಂಕಾಳು ವೈದ್ಯ ಪ್ರತಿಕ್ರಿಯೆ
Team Udayavani, Sep 16, 2023, 3:54 PM IST
ಶಿರಸಿ: ಶಾಸಕ ಶಿವರಾಮ ಹೆಬ್ಬಾರ್ ಅವರೇ ನಾವೆಲ್ಲಾ ನಿಮ್ಮ ಜೊತೆಯಲ್ಲೇ ಇದ್ದೇವೆ. ಬರುವವರು ಯಾವತ್ತೂ ಬರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.
ಸೆ.16ರ ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಎಲ್ಲರಿಗೂ ಸ್ವಾಗತ ಮಾಡುತ್ತದೆ. ಬಾಗಿಲು ತೆರೆದಿದ್ದೇವೆ ಎಂದ ಅವರು, ರಾಜ್ಯದ ಬರಗಾಲ ಸ್ಥಿತಿಯನ್ನು ಸರಕಾರ ನಿರ್ವಹಿಸುತ್ತದೆ ಎಂದರು.
ಮುಂದುವರೆದು ಮಾತನಾಡಿ, ಬರಗಾಲ ಪಟ್ಟಿಯಲ್ಲಿ ಇರದ ತಾಲೂಕಿನಲ್ಲಿ ಯಾವುದೇ ಸಮಸ್ಯೆ ಆದರೂ ಸರಕಾರ ಸ್ಪಂದಿಸಲಿದೆ. ಆದರೆ, ಬರಗಾಲವೇ ಬಾರದಿರಲಿ ಎಂದು ಮಠ, ಮಂದಿರಗಳ ತೆರಳಿ ಪ್ರಾರ್ಥಿಸಿದ್ದೇನೆ. ರೈತರು ಭಯಪಡಬೇಕಾಗಿಲ್ಲ ಎಂದರು.
ಲೋಕಸಭಾ ಟಿಕೆಟ್ ಯಾರಿಗೆ ಎಂಬುದು ಹೈ ಕಮಾಂಡ್ ಗೆ ಬಿಟ್ಟ ವಿಷಯ. ಜೆಡಿಎಸ್ ಬಿಜೆಪಿ ಮೈತ್ರಿ ಅವರಿಗೆ ಸಂಬಂಧಿಸಿದ್ದು. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ನ್ಯಾಯಾಲಯದಲ್ಲಿದೆ. 20ನೇ ತಾರೀಖಿಗೆ ಒಂದು ಹಂತದ ನಿರ್ಣಯ ಆಗಬಹುದು ಎಂದೂ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.