ಸೀತೆಯ ಅಂತರಾಳವನ್ನು ತೆರೆದಿಡುವ ಕೃತಿ

Team Udayavani, Nov 22, 2020, 6:56 AM IST

ಸೀತೆಯ ಅಂತರಾಳವನ್ನು ತೆರೆದಿಡುವ ಕೃತಿ

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

ಸೃಜನ್‌ ಗಣೇಶ್‌ ಹೆಗಡೆ ಅವರು ಬರೆದಿರುವ “ಮಿಥಿಲೆಯ ಮೊಗ್ಗು’ ಕಾದಂಬರಿಯು ಹಿರಿಯ – ಕಿರಿಯ ಸಾಹಿತ್ಯ ಪ್ರೇಮಿಗಳಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ.

ಅಚಲ ಪ್ರಕಾಶನದಿಂದ ಪ್ರಕಾಶಿತವಾದ ಈ ಕೃತಿಯು ಲೇಖಕರ ಪ್ರಕಟಿತ ಚೊಚ್ಚಲ ಕಾದಂಬರಿಯಾಗಿದೆ. ಇದರಲ್ಲಿ ಭಾರತದ ಮಹಾಕಾವ್ಯಗಳಲ್ಲಿ ಒಂದಾಗಿರುವ ವಾಲ್ಮೀಕಿ ರಾಮಾಯಣವನ್ನು ಭಿನ್ನ ರೀತಿಯಲ್ಲಿ ನಿರೂಪಿಸುವ ಪ್ರಯತ್ನ ಮಾಡಲಾಗಿದೆ. ಅದರಲ್ಲೂ ಸೀತೆಯ ಪಾತ್ರ ವನ್ನು ಪ್ರಧಾನವಾಗಿ ಇರಿಸಿ ಕೊಂಡು ಆಕೆಯ ತವರಿನ ಸಂವೇದನೆಗೆ ಹೆಚ್ಚು ಒತ್ತು ನೀಡಲಾಗಿದೆ. ಇದು ಕೇವಲ ಕಾದಂಬರಿಯ ರೂಪದಲ್ಲಿ ರದೆ, ಕಾವ್ಯ – ಕಾದಂಬರಿ ಸ್ವರೂಪದಲ್ಲಿದೆ.

“ಕಾದಂಬರಿ ಸಾಹಿತ್ಯ ಲೋಕದಲ್ಲಿ ಅಲ್ಲಲ್ಲಿ ಇಂಥ ಪ್ರಯತ್ನ ನಡೆದದ್ದಿದೆ. ಆದರೆ ಇಲ್ಲಿ ಅತ್ಯಪೂರ್ವವಾಗಿ ಮೂಡಿಬಂದಿದೆ’ ಎಂದು ಸ್ವತಃ ಲೇಖಕರೇ ಈ ಕೃತಿಯ ಕಾವ್ಯ – ಕಾದಂ ಬರಿ ಸ್ವರೂಪದ ಬಗ್ಗೆ ಹೇಳಿಕೊಂಡಿದ್ದಾರೆ.

ಲೇಖಕರ ನಿರಂತರ ಅಧ್ಯಯನ, ಅಧ್ಯ ಯನದ ಮೇಲಿರಬಹುದಾದ ಶ್ರದ್ಧೆ ಹಾಗೂ ಬರಹದ ಸತ್ವವು ಈ ಕೃತಿಯಲ್ಲಿ ಕಂಡು ಬರುತ್ತದೆ. ಒಂದು ಮಹಾಕಾವ್ಯವನ್ನು ಇಷ್ಟು ಸಂಕ್ಷಿಪ್ತಗೊಳಿಸಿ ಅದರ ಭಾವಕ್ಕೆ ಇಳಿದು ಬರೆಯುವುದು ಸುಲಭವೇನಲ್ಲ. ಜತೆಗೆ ಇತ್ತೀ ಚಿನ ದಿನಗಳಲ್ಲಿ ಮಹಾಕಾವ್ಯಗಳ ಕುರಿತಾದ ಚಿಂತನೆಗಳು ಧಾರಾವಾಹಿಗಳ ಚಿತ್ರಣದಲ್ಲಿ ಚಿತ್ರ -ವಿಚಿತ್ರತೆಗೆ ಒಳಗಾಗುತ್ತಿರುವಾಗ, ಮೂಲದ ಅಧ್ಯಯನ ಮತ್ತು ಅದಕ್ಕೆ ಸಂಬಂಧಿ ಸಿದಂತೆ ಹಲವು ಕೃತಿಗಳ ಅಧ್ಯಯನ ಮಾಡಿ ದ್ದರೆ ಮಾತ್ರ ಇಂತಹ ಕೃತಿ ಮೂಡಿಬರಲು ಸಾಧ್ಯ. ಖಂಡಿತಕ್ಕೂ ಈ ಸಂಪೂರ್ಣ ಬರಹ ದಲ್ಲಿ ಅಂಥ¨ªೊಂದು ಅಧ್ಯಯನದ ಸಾಧ್ಯತೆ ಕಂಡುಬರುತ್ತದೆ. ಇಡೀ ಕಾದಂಬರಿಯನ್ನು ಸೂಕ್ಷ್ಮವಾಗಿ ಗಮನಿಸಿ ಓದಿದರೆ, ಕಾವ್ಯದಲ್ಲಿನ ಕಥೆಯ ಆಳಕ್ಕೆ ಇಳಿದು ಆಧ್ಯಾತ್ಮಿಕ, ವೈಚಾರಿಕ ಹಾಗೂ ತಾತ್ವಿಕವಾಗಿಯೂ ಬರೆದಿರುವ ಪ್ರಯತ್ನ ಕಂಡುಬರುತ್ತದೆ.

ಹೆಣ್ಣಿನ ಮೇಲೆ ತೀವ್ರವಾದ ಶೋಷಣೆ ನಡೆಯುತ್ತಿರುವ ಈ ಕಾಲದಲ್ಲಿ ಒಬ್ಬ ಲೇಖಕರು ಹೆಣ್ಣಿನ ಮನದ ಮಾತನ್ನು ಇಷ್ಟು ಗಾಢವಾಗಿ ಹೊರತೆಗೆದು ತೋರಿರುವುದು ಶ್ಲಾಘನೀಯ. ಹೆಣ್ಣಿನ ಭಾವಕ್ಕೆ ಮತ್ತು ಬದುಕಿಗೆ “ಮೊಗ್ಗು’, “ಹೂವು’ ಜೀವ ಭಾವ ವನ್ನು ಸಮೀಕರಿಸಿ ತೋರಿರುವ ಪ್ರಯತ್ನವೂ ಶ್ಲಾಘನೀಯ. ಹಾಗೆಂದು ಇಲ್ಲಿ ಕೇವಲ ಹೆಣ್ಣಿನ ಭಾವದ ಚಿತ್ರ ಎಂದು ಮಾತ್ರವಲ್ಲ ಶ್ರೀರಾಮನ ಭಾವವನ್ನೂ ಸೆರೆ ಹಿಡಿಯುವ ಪ್ರಯತ್ನ ಮಾಡಲಾಗಿದೆ.

ವಿಶೇಷವಾಗಿ ಈ ಕಾದಂ ಬರಿಯಲ್ಲಿ ಹನುಮಂತನ ಪಾತ್ರ ಚಿತ್ರಣವು ಕಾವ್ಯದ ಪರಿಪಾಕವಾಗಿ ಕಂಡುಬರು ತ್ತದೆ. ಮೂಲತಃ ಆಂಜನೇ ಯನು ಕರ್ನಾಟಕದ ಕುಡಿಯಾಗಿ ಕಾಣು ವಾಗ, ಅದನ್ನಷ್ಟೇ ಸೊಗಸಾಗಿ ಕಟ್ಟಿಕೊಟ್ಟಿರು ವುದು ಗಮನಿಸಬೇಕಾದುದು.
ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀ ಚಿನ ದಿನಗಳಲ್ಲಿ ಯುವ ಮನಸ್ಸುಗಳು ಓದು, ಬರಹ, ಜ್ಞಾನದ ಅರಿವಿನಿಂದ ದೂರ ಸರಿದು ಅಗತ್ಯವಿಲ್ಲದ ಯಾವುದೋ ಸಂಗತಿಗಳಿಗೆ ಮನಸ್ಸನ್ನು ಒಡ್ಡುತ್ತಿರುವಾಗ ಇನ್ನೂ 23ರ ಹರೆಯದ ಲೇಖಕರ ಯುವ ಮನಸ್ಸು ಇಂಥ ಸಾಧನೆಯನ್ನು ಮಾಡುತ್ತಿರುವುದು ಸಂತೋಷದ ವಿಚಾರ.

ಬಹಳ ಸುಂದರವಾದಂಥ ಈ ಕೃತಿಗೆ ಒಪ್ಪುವಂಥ ಆಕರ್ಷಕ ಮುಖಪುಟದ ಚಿತ್ರ ವನ್ನು ಕಾವ್ಯಾ ಸಾಮಕ್‌ ಅವರು ನೀಡಿ¨ªಾರೆ. ಇಡೀ ಕೃತಿಯ ಅಂತರಾಳವನ್ನು ಮುಖ ಪುಟವು ಸೂಕ್ಷ್ಮವಾಗಿ ನಮಗೆ ತಿಳಿಸಿ ಕೊಡು ತ್ತದೆ. ಈ ಕೃತಿಯ ಓದು ಎಂಥ‌ವರಿಗೂ ಒಂದು ಆನಂದವನ್ನು ನೀಡುತ್ತದೆ. ಜತೆಗೆ ಹೊಸ ತಲೆಮಾರಿನ ಲೇಖಕರ ಬಗ್ಗೆ ಭರವಸೆಯನ್ನೂ ತುಂಬಿಕೊಳ್ಳಲು ಸಹಕಾರಿಯಾಗುತ್ತದೆ.

– ಭಾಗ್ಯಶ್ರೀ, ಶಿವಮೊಗ್ಗ

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.