ಕೂತಲ್ಲೇ ಆಸನ…
Team Udayavani, Jul 7, 2020, 4:48 AM IST
ಮೊದಲು ಎರಡೂ ಕಾಲನ್ನು ಮುಂದಕ್ಕೆ ಚಾಚಿ. ಎರಡೂ ಕೈಗಳನ್ನ ಮೇಲಕ್ಕೆ ಎತ್ತಿ. ಆಮೇಲೆ ನಿಧಾನಕ್ಕೆ ಕೆಳಗೆ ತಂದು, ಬಲಗಾಲು, ಎಡಗಾಲುಗಳ ಹೆಬ್ಬರಳನ್ನು ಹಿಡಿಯಲು ಪ್ರಯತ್ನಿಸಿ…
ಯೋಗ ಮಾಡೋದು ಅಂದರೆ ಬೆವರು ಸುರಿಸಿ ಸುಸ್ತಾಗಬೇಕು ಅಂತಲ್ಲ. ನೀವು ಕೂತಲ್ಲಿಯೇ ಆಸನ ಮಾಡಬಹುದು. ಇದನ್ನು ಬಾಡಿ ಸ್ಟ್ರೆಚ್ ಅಂತಲೂ ಕರೆಯುತ್ತಾರೆ. ಮೊದಲು ಎರಡೂ ಕಾಲನ್ನು ಮುಂದಕ್ಕೆ ಚಾಚಿ. ಎರಡೂ ಕೈಗಳನ್ನ ಮೇಲಕ್ಕೆ ಎತ್ತಿ. ಆಮೇಲೆ ನಿಧಾನಕ್ಕೆ ಕೆಳಗೆ ತಂದು, ಬಲಗಾಲು, ಎಡ ಗಾಲುಗಳ ಹೆಬ್ಬರಳನ್ನು ಹಿಡಿಯಲು ಪ್ರಯತ್ನಿಸಿ.
ಇದು, ಕುಳಿತು ಮಾಡುವ ಆಸನಗಳ ಬೇಸಿಕ್ ಅಡಿಪಾಯ. ಆಮೇಲೆ ನಿಧಾನಕ್ಕೆ ಸುಖಾಸನದಲ್ಲಿ ಕುಳಿತುಕೊಳ್ಳಿ. ಹಾಗೇ ಕಣ್ಣು ಮುಚ್ಚಿ ಎರಡೂ ಕೈಗಳನ್ನು ಮತ್ತೆ ಕಿವಿಯ ನೇರಕ್ಕೆ ತನ್ನಿ. ಬೆರಳುಗಳಿಂದ ಕೈಗಳನ್ನು ಲಾಕ್ ಮಾಡಿಕೊಂಡು, ಎಷ್ಟು ಸಾಧ್ಯವೋ ಅಷ್ಟು ಉದ್ದಕ್ಕೆ ಕೈ ಚಾಚಿ. ಹಾಗೇ, ನಾಲ್ಕೈದು ಸಲ ನಿಧಾನಕ್ಕೆ ಉಸಿರಾಡಿ. ಆನಂತರ, ಹಾಗೇ ಸೊಂಟವನ್ನೂ, ತಲೆಯ ಮೇಲೆ ಲಾಕ್ ಆಗಿರುವ ಕೈಯನ್ನೂ ಒಟ್ಟಿಗೆ ಒಮ್ಮೆ ಬಲಕ್ಕೆ, ಇನ್ನೊಮ್ಮೆ ಎಡಕ್ಕೆ ತಿರುಗಿಸಿ. ಕೈಗಳು ನೇರವಾಗಿಯೇ ಇರಲಿ.
ಹೀಗೆ ಮಾಡುವಾಗ ನಿಧಾನಕ್ಕೆ ಉಸಿರನ್ನು ಎಳೆದುಕೊಳ್ಳುವುದು, ಬಿಡುವುದನ್ನು ಮಾಡಬೇಕು. ಇದಾದ ನಂತರ, ಸೊಂಟ ಮತ್ತು ಕೈಗಳನ್ನು ಒಟ್ಟಿಗೆ ಬಲಕ್ಕೆ ಒಂದೆರಡು ಬಾರಿ, ಎಡಕ್ಕೆ ಒಂದೆರಡು ಬಾರಿ ವಾಲಿಸಿ. ಆನಂತರ, ಎರಡೂ ಕೈಗಳನ್ನು ಮೂಗಿನ ನೇರಕ್ಕೆ ತಂದು ನಿಧಾನಕ್ಕೆ ಉಸಿರಾಡಿ. ಹೀಗೆ ಮಾಡುವುದರಿಂದ ಸೊಂಟ ಹಾಗೂ ಮಂಡಿಯ ನೋವು ಕಡಿಮೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.