14ನೇ ವಯಸ್ಸಿಗೆ ಶಾಲೆ ತೊರೆವ ಮಕ್ಕಳಿಗೂ ಕೌಶಲ್ಯ ತರಬೇತಿ ಅಗತ್ಯ: ಕೆ. ರತ್ನಪ್ರಭಾ
Team Udayavani, Mar 16, 2021, 3:24 PM IST
ಬೆಂಗಳೂರು: 14ನೇ ವಯಸ್ಸಿಗೆ ಮೊದಲೇ ಶಾಲೆ ತೊರೆಯುವ ಮಕ್ಕಳಿಗೆ ಆ ವಯಸ್ಸಿನಲ್ಲೇ ಕೌಶಲ್ಯ ತರಬೇತಿ ನೀಡುವ ಅಗತ್ಯವಿದೆ ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಅವರು ಅಭಿಪ್ರಾಯ ಪಟ್ಟರು.
ಕೌಶಲ್ಯ ತರಬೇತಿ ಪ್ರಾಧಿಕಾರವು ವಿವಿಧ ವಲಯಗಳ ಕೌಶಲ್ಯ ಕೌನ್ಸಿಲ್‌ನೊಂದಿಗೆ “ಕೌಶಲ್ಯ ತರಬೇತಿ ಇರುವ ಅವಕಾಶಗಳ” ಕುರಿತು ಮಂಗಳವಾರ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಿದ್ದ “ವಿಚಾರ ಗೋಷ್ಠಿ” ಹಾಗೂ ಸಂವಾದದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಹಲವು ಕಾರಣದಿಂದ ಮಕ್ಕಳು 10 ನೇ ತರಗತಿಗೆ ಓದು ನಿಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳ ವಯಸ್ಸು 14 ವರ್ಷ ಒಳಗಿರುವುದರಿಂದ ಕೌಶಲ್ಯ ತರಬೇತಿ ನೀಡಬೇಕೇ, ಬೇಡವೇ ಎಂಬುದು ಈಗಲೂ ಚರ್ಚಾ ವಿಷಯವೇ ಆಗಿದೆ. ಆದರೆ, ಆ ಸಂದರ್ಭದಲ್ಲೇ ಅಂಥ ಮಕ್ಕಳನ್ನು ಗುರುತಿಸಿ ಕೌಶಲ್ಯ ತರಬೇತಿ ನೀಡಿದರೆ ಪರಿಣಾಮಕಾರಿಯಾಗಿ ಮಕ್ಕಳ ಭವಿಷ್ಯ ರೂಪಿಸಲು ನೆರವಾಗಲಿದೆ. 18 ವರ್ಷ ತುಂಬುವವರೆಗೂ ಅವರಿಗೆ ಪೂರ್ಣಾವಧಿ ಕೆಲಸಕ್ಕೆ ನೇಮಿಸುವ ಬದಲು, ಅಲ್ಪಾವಧಿ ಕೆಲಸ ಮಾಡಿಸುವುದರಿಂದ ಅವರ ವಯಸ್ಸಿನ ಮೇಲೆ ಯಾವುದೇ ಒತ್ತಡ ಬೀರಿದಂತಾಗುವುದಿಲ್ಲ. ಅಲ್ಲದೆ, ಅವರು ಪ್ರೌಢಾವಸ್ಥೆಗೆ ಬರುವುದರೊಳಗೆ ಆ ಮಕ್ಕಳ ಅನುಭವದ ಜೊತೆಗೆ ಕೌಶಲ್ಯವನ್ನೂ ಮೈಗೂಡಿಸಿಕೊಳ್ಳಲಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾಗಳು ಕೌಶಲ್ಯ ತರಬೇತಿಯಂಥ ಹಲವು ಕಾರ್ಯಕ್ರಮಗಳನ್ನು ಉಚಿತವಾಗಿ ಆಯೋಜಿಸುತ್ತಿದೆ. ತರಬೇತಿ ನೀಡುವ ಕೆಲಸವೂ ನಡೆಯುತ್ತಿವೆ. ಆದರೂ, ಕೈಗಾರಿಕಾ ಸಂಸ್ಥೆಗಳು ಕೌಶಲ್ಯ ಹೊಂದಿರುವ ಯುವಕರು ಸಿಗುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಾವೆ. ಇತ್ತ ಯುವಕರೂ ಸಹ ಕೌಶಲ್ಯದಂತಹ ತರಬೇತಿ ನೀಡಿದರೆ ಪಡೆಯಲು ಸಿದ್ಧವೆಂದು ಹೇಳುತ್ತಾರೆ. ಇಷ್ಟಿದ್ದರೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಾಗಿದ್ದರೆ ಕೈಗಾರಿಕೆಗಳು ಹಾಗೂ ಯುವಕರ ಮಧ್ಯೆ ಅಂತರ ಉಂಟಾಗಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ. ಅದಕ್ಕಾಗಿಯೇ ಈಗಿರುವ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಅಪ್‌ಡೇಟ್ ಮಾಡಲು ಯೋಜಿಸಿದ್ದೇವೆ ಎಂದು ಹೇಳಿದರು.
ಮತ್ತೊಂದೆಡೆ ಸಂಬಂಧಪಟ್ಟ ಕೈಗಾರಿಕೆಗಳೇ ಯುವಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದು, ಇದಕ್ಕೆ ಬೇಕಾದ ಸಹಕಾರ ಸರ್ಕಾರ ನೀಡಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.