“ಸ್ಲಿಪ್‌ ಫೀಲ್ಡಿಂಗ್‌ ಸುಧಾರಿಸಬೇಕು’: ರಾಹುಲ್‌ ದ್ರಾವಿಡ್‌

Team Udayavani, Feb 6, 2023, 7:45 AM IST

“ಸ್ಲಿಪ್‌ ಫೀಲ್ಡಿಂಗ್‌ ಸುಧಾರಿಸಬೇಕು’: ರಾಹುಲ್‌ ದ್ರಾವಿಡ್‌

ನಾಗ್ಪುರ: ನಿರಂತರವಾಗಿ ಸೀಮಿತ್‌ ಓವರ್‌ಗಳ ಪಂದ್ಯಗಳನ್ನೇ ಆಡುತ್ತ ಬಂದ ಭಾರತವಿನ್ನು ಒಮ್ಮೆಲೇ ಟೆಸ್ಟ್‌ ಪಂದ್ಯಕ್ಕೆ ಹೊಂದಿಕೊಳ್ಳಬೇಕಿದೆ. ಇಷ್ಟು ದಿನಗಳ ಕಾಲ ಹೊಡಿಬಡಿ ಕ್ರಿಕೆಟ್‌ ಆಡಿದವರು ಇನ್ನು ನಿಂತು ಆಡಲು ಮುಂದಾಗಬೇಕಿದೆ. ಜತೆಗೆ ಫೀಲ್ಡಿಂಗ್‌ ಮಟ್ಟವನ್ನೂ ಸುಧಾರಿಸಿಕೊಳ್ಳಬೇಕಿದೆ.

ಈ ಕುರಿತು ಟೀಮ್‌ ಇಂಡಿಯಾದ ಕೋಚ್‌ ರಾಹುಲ್‌ ದ್ರಾವಿಡ್‌ ಪ್ರತಿಕ್ರಿ ಯಿಸಿದ್ದು, ಸ್ಲಿಪ್‌ ಫೀಲ್ಡಿಂಗ್‌ನತ್ತ ಹೆಚ್ಚಿನ ಗಮನ ನೀಡಬೇಕಾಗಿದೆ ಎಂದರು.

“ಆಸ್ಟ್ರೇಲಿಯ ವಿರುದ್ಧದ ಮಹ ತ್ವದ ಸರಣಿಗೆ ಭಾರತ ತಂಡ ಸಜ್ಜಾಗುತ್ತಿದೆ. ಟೆಸ್ಟ್‌ ತಂಡ ಮತ್ತೆ ಒಟ್ಟು ಗೂಡುತ್ತಿರುವುದು ಖುಷಿ ಕೊಡುವ ಸಂಗತಿ. ಬಹಳಷ್ಟು ಕ್ರಿಕೆಟಿಗರು ವೈಟ್‌ ಬಾಲ್‌ನಿಂದ ರೆಡ್‌ ಬಾಲ್‌ಗೆ ಪರಿವರ್ತನೆಗೊಳ್ಳಬೇಕಿದೆ. ನೆಟ್ಸ್‌ನಲ್ಲಿ ಹೆಚ್ಚಿನ ಅವಧಿಯನ್ನು ಕಳೆಯುತ್ತಿದ್ದಾರೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಜತೆಗೆ ಫೀಲ್ಡಿಂಗ್‌ ಅಭ್ಯಾಸಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮುಖ್ಯವಾಗಿ ನಮ್ಮ ಸ್ಲಿಪ್‌ ಫೀಲ್ಡಿಂಗ್‌ನಲ್ಲಿ ಸುಧಾರಣೆ ಕಾಣಬೇಕಿದೆ’ ಎಂಬುದಾಗಿ ರಾಹುಲ್‌ ದ್ರಾವಿಡ್‌ ಹೇಳಿದರು.

“ಟೆಸ್ಟ್‌ ಪಂದ್ಯಗಳಲ್ಲಿ ಕ್ಲೋಸ್‌ ಇನ್‌ ಕ್ಯಾಚ್‌ಗಳ ಪಾತ್ರ ನಿರ್ಣಾಯಕ. ಸ್ಲಿಪ್‌ ಫೀಲ್ಡಿಂಗ್‌ ಬಲಿಷ್ಠವಾಗಿದ್ದರಷ್ಟೇ ಇದು ಸಾಧ್ಯ. ಸಮಯಾವಕಾಶದ ಅಭಾವ ದಿಂದ ಪ್ರತ್ಯೇಕ ಶಿಬಿರ ಏರ್ಪಡಿಸಲು ಸಾಧ್ಯವಿಲ್ಲ. ಹೀಗಾಗಿ ನೆಟ್‌ ಪ್ರ್ಯಾಕ್ಟೀ ಸ್‌ನಲ್ಲೇ ಹೆಚ್ಚಿನ ಅವಧಿಯನ್ನು ಕಳೆ ಯಬೇಕಿದೆ’ ಎಂದರು.

“ಈ ಸೀಮಿತ ಅವಧಿಯಲ್ಲಿ ನಮ್ಮ ತಂಡ ಉತ್ತಮ ಮಟ್ಟದಲ್ಲೇ ತಯಾರಿ ನಡೆಸುತ್ತಿದೆ. ಇನ್ನೂ ಕೆಲವು ಗಂಟೆಗಳ ಅಭ್ಯಾಸದ ಅವಧಿ ಇದೆ. ಫೀಲ್ಡಿಂಗ್‌ ಅಭ್ಯಾಸಕ್ಕೆ ಹೆಚ್ಚಿನ ಗಮನ ನೀಡಲಾಗುವುದು’ ಎಂದು ದ್ರಾವಿಡ್‌ ಹೇಳಿದರು.
ಸರಣಿಯ 4 ಟೆಸ್ಟ್‌ ಪಂದ್ಯಗಳು ಕ್ರಮ ವಾಗಿ ನಾಗ್ಪುರ (ಫೆ. 9-13), ಹೊಸ ದಿಲ್ಲಿ (ಫೆ. 17-21), ಧರ್ಮಶಾಲಾ (ಮಾ. 1-5) ಮತ್ತು ಅಹ್ಮದಾಬಾದ್‌ನಲ್ಲಿ (ಮಾ. 9-13) ನಡೆಯಲಿವೆ.

ಈ ಸರಣಿಯನ್ನೂ ಗೆದ್ದರೆ ಆಸ್ಟ್ರೇ ಲಿಯ ವಿರುದ್ಧದ ಸತತ 4 ಟೆಸ್ಟ್‌ ಸರಣಿ ಭಾರತದ ಪಾಲಾದಂತಾಗುತ್ತದೆ. ಇತ್ತಂಡಗಳಲ್ಲಿ ಯಾರೂ ಈವರೆಗೆ ಸತತ 4 ಸರಣಿಗಳನ್ನು ಗೆದ್ದಿಲ್ಲ. ಭಾರತ 2017, 2018-19 ಮತ್ತು 2020-21ರ ಸರಣಿಗಳನ್ನು ತನ್ನದಾಗಿಸಿಕೊಂಡಿದೆ.

ಹೆಚ್ಚುವರಿ ನೆಟ್‌ ಬೌಲರ್
ಟೀಮ್‌ ಇಂಡಿಯಾ ಕ್ರಿಕೆಟಿಗರ ಅಭ್ಯಾಸಕ್ಕಾಗಿ ಭಾರತ ಇನ್ನೂ ಇಬ್ಬರು ನೆಟ್‌ ಬೌಲರ್‌ಗಳನ್ನು ಸೇರಿಸಿಕೊಂಡಿದೆ. ಇವರೆಂದರೆ ಹರ್ಯಾಣದ ಜಯಂತ್‌ ಯಾದವ್‌ ಮತ್ತು ದಿಲ್ಲಿಯ ಪುಲ್ಕಿತ್‌ ಯಾದವ್‌. ಇದರೊಂದಿಗೆ ನೆಟ್‌ ಬೌಲರ್‌ಗಳ ಸಂಖ್ಯೆ ಆರಕ್ಕೇರಿತು. ಈ ಮೊದಲು ಸಾಯಿ ಕಿಶೋರ್‌, ರಾಹುಲ್‌ ಚಹರ್‌, ವಾಷಿಂಗ್ಟನ್‌ ಸುಂದರ್‌ ಮತ್ತು ಸೌರಭ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಇವರೆಲ್ಲರೂ ಸ್ಪಿನ್ನರ್‌ಗಳಾಗಿರುವುದು ವಿಶೇಷ.

ರವಿವಾರ ಟೀಮ್‌ ಇಂಡಿಯಾ ಯಾವುದೇ ಅಭ್ಯಾಸ ನಡೆಸಲಿಲ್ಲ. ಸೋಮವಾರ ನಾಗ್ಪುರದ ವಿಸಿಎ ಸ್ಟೇಡಿಯಂಗೆ ಆಗಮಿಸಲಿದ್ದು, ಇಲ್ಲಿ ಅಭ್ಯಾಸವನ್ನು ಮುಂದುವರಿಸಲಿದೆ. ಮೊದಲ ಟೆಸ್ಟ್‌ ಇಲ್ಲಿಯೇ ನಡೆಯಲಿದೆ.

ಭಾರತ ತಂಡ: ರೋಹಿತ್‌ ಶರ್ಮ (ನಾಯಕ), ಕೆ.ಎಲ್‌. ರಾಹುಲ್‌ (ಉಪನಾಯಕ), ಶುಭಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಕೆ.ಎಸ್‌. ಭರತ್‌, ಇಶಾನ್‌ ಕಿಶನ್‌, ಆರ್‌. ಅಶ್ವಿ‌ನ್‌, ಅಕ್ಷರ್‌ ಪಟೇಲ್‌, ಕುಲದೀಪ್‌ ಯಾದವ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌, ಉಮೇಶ್‌ ಯಾದವ್‌, ಜೈದೇವ್‌ ಉನಾದ್ಕತ್‌, ಸೂರ್ಯಕುಮಾರ್‌ ಯಾದವ್‌.

ಟಾಪ್ ನ್ಯೂಸ್

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.