Germany: ಅಲ್ಪ ಪ್ರಮಾಣದ ಗಾಂಜಾ ಬಳಕೆ ಜರ್ಮನಿ ಅನುಮತಿ
ಕ್ಲಬ್‌ಗಳಿಂದ 50 ಗ್ರಾಮ್ ಖರೀದಿಗೆ ಅವಕಾಶ, 21 ವರ್ಷದೊಳಗಿನವರಿಗೆ 30 ಗ್ರಾಮ್!
Team Udayavani, Aug 17, 2023, 7:00 AM IST
ಬರ್ಲಿನ್: ಮಾದಕವಸ್ತುಗಳ ಕಳ್ಳಸಾಗಣೆ ಮತ್ತು ಅಕ್ರಮ ಬಳಕೆಯನ್ನು ನಿಗ್ರಹಿಸುವ ನಿಟ್ಟಿನಲ್ಲಿ ಗಾಂಜಾ ಮಾರಾಟದ ಮೇಲಿನ ನಿಯಮಗಳನ್ನು ಸರಾಗಗೊಳಿಸಲು ಜರ್ಮನಿ ನಿರ್ಧರಿಸಿದೆ. ಅಲ್ಪಪ್ರಮಾಣದ ಗಾಂಜಾ ಬಳಕೆಗೆ ಅನುಮತಿಸುವ ಯೋಜನೆಯೊಂದಕ್ಕೆ ಅನುಮೋದನೆ ನೀಡಲು ಅಲ್ಲಿನ ಸಚಿವ ಸಂಪುಟ ಸಜ್ಜುಗೊಂಡಿದೆ.
ಆರೋಗ್ಯ ಸಚಿವ ಕಾರ್ಲ್ ಲೌಟರ್ ಬಾಕ್ ಈ ಕುರಿತಂತೆ ಮಾಹಿತಿ ನೀಡಿದ್ದು, ಪ್ರಸ್ತಾವಿತ ಯೋಜನೆಯು ದೇಶದ 18 ವರ್ಷ ಮೇಲ್ಪಟ್ಟವರು ಮನರಂಜನಾ ಉದ್ದೇಶಗಳಿಗಾಗಿ ತಲಾ 25 ಗ್ರಾಂ ಗಾಂಜಾವನ್ನು ಖರೀದಿಸಲು ಹಾಗೂ ಸ್ವತಃ ಅವರೇ ಮೂರು ಗಾಂಜಾ ಗಿಡಗಳನ್ನು ಬೆಳೆಯಲು ಅವಕಾಶ ಕಲ್ಪಿಸುತ್ತದೆ. ಅಲ್ಲದೇ, ಗಾಂಜಾ ಖರೀದಿಗಾಗಿ ಕ್ಲಬ್‌ಗಳಿಗೂ ಸೇರಬಹುದಾಗಿದ್ದು, ಈ ಕ್ಲಬ್ 500 ಸದಸ್ಯರನ್ನು ಮಾತ್ರ ಹೊಂದಲು ಅವಕಾಶ ನೀಡಲಾಗಿದೆ. ಕ್ಲಬ್‌ಗಳಿಂದ ಗಾಂಜಾ ಖರೀದಿಸುವವರಿಗೆ ತಿಂಗಳಿಗೆ 50 ಗ್ರಾಂ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದ್ದು, 21 ವರ್ಷ ಒಳಗಿನ ವಯಸ್ಸಿನವರಿಗೆ ಈ ಮಿತಿ 30 ಗ್ರಾಂ ಆಗಿರಲಿದೆ ಎಂದಿದ್ದಾರೆ. ಗಾಂಜಾ ಮಾರಾಟ ಮತ್ತು ಸ್ವಾಧೀನಗಳ ಮೇಲಿನ ನಿಯಮಗಳನ್ನು ಉದಾರಗೊಳಿಸಲು ಈ ಯೋಜನೆ ಪ್ರಸ್ತಾಪಿಸಿದ್ದು, ಕ್ಯಾಬಿನೆಟ್ ಅನುಮೋದನೆ ಬಳಿಕ ಸಂಸತ್ ಅನುಮೋದನೆಗೆ ಕಳುಹಿಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.