ಅತಿಯಾದರೆ ಸ್ಮಾರ್ಟ್ ಫೋನ್ ವಿಷವೇ!
Team Udayavani, Jun 15, 2020, 4:52 AM IST
ಸ್ಮಾರ್ಟ್‌ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಪರದೆ ಮುಂದೆ ಹೆಚ್ಚು ಹೊತ್ತು ಕಾಲ ಕಳೆಯುವವರಿಗೆ ಬಿಸಿಮುಟ್ಟಿಸುವ ಸುದ್ದಿ ಇಲ್ಲಿದೆ. ಇಂದು ಅಂತರ್ಜಾಲದಲ್ಲಿ ಏನಾದರೊಂದು ಮಾಹಿತಿ ಪಡೆಯಲೋ, ಮನರಂಜನೆಗಾಗಿಯೋ ಸ್ಕ್ರಾಲ್ ಮಾಡುತ್ತಾ ಗಂಟೆಗಟ್ಟಲೆ ಕಂಪ್ಯೂಟರ್/ ಲ್ಯಾಪ್ ಟಾಪ್/ ಮೊಬೈಲ್ ಮುಂದೆ ಕೂರು ವುದು ಎಲ್ಲರಿಗೂ ಅಭ್ಯಾಸವಾಗಿಬಿಟ್ಟಿದೆ.
ಪರದೆ ಮುಂದೆ ಕೂತು ದಿಟ್ಟಿಸುವು ದರಿಂದ ಏನು ಹಾನಿ ಉಂಟಾಗುತ್ತದೆ ಎನ್ನುವುದನ್ನು ಸಂಶೋಧನೆ ಯೊಂದು ಹೊರಹಾಕಿದೆ. ಡಿಜಿ ಟಲ್ ಪರದೆ ಹೊಮ್ಮಿಸುವ ಬೆಳಕು, ಕಣ್ಣುಗಳನ್ನು ಬಲಹೀನವನ್ನಾಗಿ ಮಾಡುವುದಷ್ಟೇ ಅಲ್ಲ, ಚರ್ಮದ ಮೇಲೂ ದುಷ್ಪರಿಣಾಮ ಬೀರುತ್ತದೆಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅತಿನೇರಳೆ ಕಿರಣ ತಂದೊಡ್ಡುವ ಸಮಸ್ಯೆಗಳ ಕುರಿತು ಹಲವರಿಗೆ ಗೊತ್ತಿದೆ. ಅದು ಸೂರ್ಯನ ಕಿರಣಗಳಲ್ಲಿ ಅಡಕವಾಗಿರುತ್ತದೆ ಎಂಬುದು ನಮಗೆ ಗೊತ್ತಿರುವ ಸಂಗತಿಯೇ. ಈ ಕಿರಣಗಳು ಚರ್ಮಕ್ಕೆ ಹಾನಿಯುಂಟುಮಾಡು ತ್ತವೆ.
ಅದಕ್ಕಾಗಿಯೇ ಸಮುದ್ರ ತೀರದ ಪ್ರದೇಶಗಳಿಗೆ ಹೋದಾಗ ಈ ಕಿರಣಗಳಿಂದ ರಕ್ಷಣೆ ಪಡೆಯಲು ಸನ್ ಸ್ಕ್ರೀನ್ ಕ್ರೀಮುಗಳನ್ನು ಬಳಸುತ್ತಾರೆ. ಡಿಜಿಟಲ್ ಪರದೆಯಿಂದ ಹೊಮ್ಮುವ ನೀಲಿ ಬೆಳಕು ಕೂಡಾ ಅತಿನೇರಳೆ ಕಿರಣಗಳು ಉಂಟುಮಾಡುವ ದುಷ್ಪರಿಣಾಮವನ್ನೇ ಬೀರುತ್ತವೆ ಎನ್ನುವುದು ಸಂಶೋಧನೆಯಿಂದ ತಿಳಿದುಬಂದಿದೆ. ಯಾವುದೇ ತಂತ್ರಜ್ಞಾನವನ್ನು ಮಿತವಾಗಿ ಬಳಸಿದರಷ್ಟೇ ಉಪಯುಕ್ತ, ಅತಿಯಾದರೆ ಅಮೃತವೂ ವಿಷವೇ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.