ಸ್ಮಾರ್ಟ್‌ಫೋನ್ ಟಿಪ್ಸ್
Team Udayavani, Jun 29, 2020, 5:19 AM IST
1. ಮೊಬೈಲನ್ನು ತುಂಬಾ ಬಿಸಿಲು ಅಥವಾ ಮಳೆಗೆ ಒಡ್ಡಬಾರದು. ಎಲ್‌ಸಿಡಿ ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನಿಗೆ, ಇದರಿಂದ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಪರದೆ ಮೇಲೆ ನೀರು ಬಿದ್ದಲ್ಲಿ ಕೂಡಲೇ ಬಟ್ಟೆಯಿಂದ ಒರೆಸಬೇಕು.
2. ಫೋನಿನಲ್ಲಿ ಮಾಡುವ ಕರೆಗಳ ಗುಣಮಟ್ಟ ಕಾಯ್ದುಕೊಳ್ಳಲು ಯಾವುದೇ ಹೆಚ್ಚುವರಿ ಪಾರ್ಟ್‌ಗಳನ್ನು ಸವಲತ್ತಿನ ಹೆಸರಿನಲ್ಲಿ ಅಳವಡಿಸಿಕೊಳ್ಳಬಾರದು.
3. ಮೊಬೈಲ್ ಫೋನ್, ಚಾರ್ಜರ್ ಇತ್ಯಾದಿ ವಸ್ತುಗಳನ್ನು ಮಕ್ಕಳ ಕೈಗೆ ಸಿಗದಂತೆ ದೂರವಿಡಿ. ಆ ಸ್ಥಳ ಧೂಳಿನಿಂದ ಮುಕ್ತವಾಗಿರಬೇಕು, ಮತ್ತು ಶಾಖದಿಂದ ಕೂಡಿರಬಾರದು.
4.ಸ್ಮಾರ್ಟ್‌ಫೋನನ್ನು ಬಿಚ್ಚಿ ತೆರೆಯುವ ಸಾಹಸಕ್ಕೆ ಮುಂದಾಗಬಾರದು. ಅದರ ಸಂಕೀರ್ಣ ಜೋಡಣೆಗಳು ಸಡಿಲವಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಬಿಚ್ಚಿ ತೆರೆಯುವ ಪ್ರಕ್ರಿಯೆ ಅಪಾಯಕಾರಿಯೂ ಆಗಬಹುದು.
5.ಫೋನನ್ನು ಎಸೆಯಬಾರದು, ಶೇಕ್ ಮಾಡಬಾರದು. ಇದರಿಂದಾಗಿ ಒಳಗಿನ ಜೋಡಣೆಗಳಿಗೆ ಸರ್ಕ್ನೂಟ್ ಸಂಪರ್ಕ ಕಡಿದು ಹೋಗಿ ಫೋನ್ ಆನ್ ಆಗದೇ ಹೋಗಬಹುದು.
6. ಫೋನ್ ಪರದೆ ಹಾಳಾದರೆ ಅಥವಾ ಒಡೆದಿದ್ದರೆ, ಅದನ್ನು ಬದಲಾಯಿಸದೆ ಬೇರೆ ಮಾರ್ಗವಿಲ್ಲ. ಅಲ್ಲದೆ ಅದು ದುಬಾರಿಯೂ ಹೌದು. ಹೀಗಾಗಿ, ಪರದೆಯ ಮೇಲೆ ಗೊರಿಲ್ಲಾ ಗ್ಲಾಸ್ ರಕ್ಷಣೆ ಒದಗಿಸುವುದು ಉತ್ತಮ.
7. ಆಯಸ್ಕಾಂತೀಯ ಶಕ್ತಿಯುಳ್ಳ ಯಾವುದೇ ವಸ್ತುವಿನ ಬಳಿಗೆ ಫೋನನ್ನು ಕೊಂಡೊಯ್ಯದಿರಿ. ಫೋನಿನ ಸ್ಪೀಕರ್‌ಗಳಲ್ಲಿ ಚಿಕ್ಕ ಆಯಸ್ಕಾಂತವಿರುತ್ತದೆ. ಅದರಿಂದಾಗಿ ಆಡಿಯೊ ಗುಣಮಟ್ಟ ಹಾಳಾಗಬಹುದು ಇಲ್ಲವೇ ಸಂಪೂರ್ಣ ಬಂದ್ ಆಗಬಹುದು.
8. ನೀರು ಮತ್ತು ಸ್ಮಾರ್ಟ್‌ಫೋನಿಗೆ ಎಣ್ಣೆ-ಸೀಗೆಕಾಯಿ ಸಂಬಂಧ. ಸ್ಮಾರ್ಟ್‌ಫೋನಿಗೆ ನೀರು ನುಗ್ಗಿದ ಕೂಡಲೆ ಅದನ್ನು ಸ್ವಿಚ್ ಆಫ್ ಮಾಡು ವುದು ಒಳ್ಳೆಯದು. ಇದರಿಂದ ಒಳಗಿನ ಬಿಡಿಭಾಗಗಳ ಮೇಲೆ ನೀರು ಹರಿದು ಶಾರ್ಟ್ ಸರ್ಕ್ನೂಟ್ ಆಗಿ ಹಾಳಾಗುವುದು ತಪ್ಪುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.