ಕೋವಿಡ್ ಸೋಂಕು ಪತ್ತೆ ಮಾಡುವ ಸ್ಮೆಲ್ ಕೆಮರಾ
Team Udayavani, May 10, 2020, 3:47 PM IST
ಪ್ಯಾರಿಸ್: ಇತ್ತೀಚೆಗೆ ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಆ್ಯಪ್ ಅನ್ನು ಯುಕೆ ಬಿಡುಗಡೆ ಮಾಡಿದ್ದು, ಸೋಂಕಿತರ ಪತ್ತೆಗೆ ವಿಭಿನ್ನ ಮಾರ್ಗ ಕಂಡುಕೊಂಡಿತ್ತು. ಇದೀಗ ಅಂಥದ್ದೇ ಒಂದು ತಂತ್ರಜ್ಞಾನವನ್ನು ಪ್ಯಾರಿಸ್ ಆವಿಷ್ಕರಿಸಿದ್ದು, ಸೋಂಕನ್ನು ಪತ್ತೆ ಹಚ್ಚುವ “ಸ್ಮೆಲ್ ಕೆಮರಾ’ವೇ ಈ ಹೊಸ ಆವಿಷ್ಕಾರ.
ಕ್ಯಾಲಿಫೋರ್ನಿಯ ಮೂಲದ ಕೊನಿಕೂ ಈ ಸಂಬಂಧ ಏರ್‌ಬಸ್ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಕೊನಿಕೂ ಸಿಇಒ ಮತ್ತು ಸಂಸ್ಥಾಪಕ ಓಶ್ ಅಗಾಬಿ ತನ್ನ ಬ್ಲಾಗ್‌ನಲ್ಲಿ ಸೋಂಕು ಪತ್ತೆಗಾಗಿ ಸ್ಮೆಲ್ ಕೆಮರಾ ಬಳಸುವ ಕುರಿತಾದ ಮಾಹಿತಿ ಹಂಚಿಕೊಂಡಿದ್ದಾರೆ.
ಇಂತಹ ತಂತ್ರಜ್ಞಾನವನ್ನು ಈಗಾಗಲೇ ಕ್ಯಾನ್ಸರ್ ಮತ್ತು ಇನ್‌ಫುÉಯೆಂಜಾ ಮುಂತಾದ ಕಾಯಿಲೆಗಳ ಪತ್ತೆಗೆ ಬಳಸಲಾಗುತ್ತಿದ್ದು, ಇಡೀ ಜಗತ್ತಿಗೆ ತಲೆನೋವಾದ ಕೋವಿಡ್-19 ವೈರಸ್‌ನ ಪತ್ತೆ ಕಾರ್ಯಾಚರಣೆಗೂ ಬಳಸಲು ಮುಂದಾಗುವುದಾಗಿ ಕಂಪೆನಿ ಹೇಳಿದೆ. ಈ ಬೆಳವಣಿಗೆ ಕೋವಿಡ್ ವಿರುದ್ಧದ ಹೋರಾಟದಲ್ಲಿ ಹೊಸ ಆಶಾಕಿರಣವನ್ನು ಹೊಮ್ಮಿಸಿದೆ.
ಕಾಣದ ವೈರಾಣುವಿನಿಂದ ಇಡೀ ಜಗತ್ತೇ ಹೈರಾಣ ಆಗಿರುವಾಗಲೇ ಈ ತಂತ್ರಜ್ಞಾನದ ಕುರಿತು ಮಾಹಿತಿ ಹೊರ ಬಿದ್ದು ಕುತೂಹಲ ಕೆರಳಿಸಿದೆ. ಒಂದು ವೇಳೆ ಪ್ರಯೋಗ ಯಶಸ್ವಿಯಾದರೆ ಇಷ್ಟು ದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ ವೈರಾಣುವಿನ ಪತ್ತೆ ಸುಲಭವಾಗಲಿದೆ ಎನ್ನಲಾಗುತ್ತಿದೆ.
ಕಾರ್ಯಾಚರಣೆ ಹೇಗೆ?
2017ರಲ್ಲಿ ಮೊದಲ ಬಾರಿ ಅಲ್ಟ್ರಾ ಸೆನ್ಸೆಟಿವ್ ಸೆನ್ಸಾರ್‌ಗಳನ್ನು ಹೊಂದಿದ ಸ್ಮೆಲ್ ಕೆಮರಾವನ್ನು ಅಭಿವೃದ್ಧಿಪಡಿಸಲಾಗಿತ್ತು. ಅವುಗಳನ್ನು ಸ್ಫೋಟಕಗಳ ಪತ್ತೆಗೆ ಬಳಸಲಾಗುತ್ತಿತ್ತು. ಈಗ ಹೊಸ ಸನ್ನಿವೇಶ ಮತ್ತು ಅಗತ್ಯಕ್ಕೆ ತಕ್ಕಂತೆ ಆ ಕೆಮರಾದಲ್ಲಿ ಬದಲಾವಣೆ ತಂದು ಜೈವಿಕ ಕೋಶಗಳನ್ನು ಅಳವಡಿಸಿದ್ದು, ಅದು ಗಾಳಿಯಲ್ಲಿ ತೇಲಾಡುವ ರಾಸಾಯನಿಕಗಳು ಮತ್ತು ಸೂಕ್ಷ್ಮಾಣು ಜೀವಿಗಳನ್ನು ಗುರುತಿಸಲಿದೆ.