Smoor- Hongyo ಐಸ್ಕ್ರೀಂ ಸಹಭಾಗಿತ್ವ ಘೋಷಣೆ
Team Udayavani, Sep 24, 2024, 12:42 AM IST
ಮಂಗಳೂರು: ದೇಶದ ಐಷಾರಾಮಿ ಮಿಠಾಯಿ ಬ್ರಾಂಡ್ ಸ್ಮೂರ್ ಜತೆಗೆ ಪ್ರತಿಷ್ಠಿತ ಐಸ್ಕ್ರೀಂ ಬ್ರಾಂಡ್ ಆಗಿರುವ ಹಾಂಗ್ಯೋ ಐಸ್ಕ್ರೀಂ ಸಹಭಾಗಿತ್ವ ಘೋಷಿಸಿದ್ದು, ಸ್ಮೂರ್ ಮಳಿಗೆಗಳಲ್ಲಿ ಉತ್ಕೃಷ್ಟ ದರ್ಜೆಯ ಹಾಂಗ್ಯೋ ಐಸ್ ಕ್ರೀಂ ಲಭ್ಯವಾಗಲಿದೆ. ಗ್ರಾಹಕರಿಗೆ ಒಂದೇ ಕಡೆ ಎರಡು ಬ್ರಾಂಡ್ಗಳ ಉತ್ಪನ್ನಗಳು ಲಭಿಸಲಿವೆ.
ಈ ಎರಡು ಬ್ರಾಂಡ್ಗಳ ಸಹಯೋಗ ದಲ್ಲಿ ಬ್ಲ್ಯಾಕ್ ಗೋಲ್ಡ್ ಚಾಕೊಲೇಟ್, ಕಾಫಿಯೊಂದಿಗೆ ಹುರಿದ ಬಾದಾಮಿ, ಡ್ರೈ ಫ್ರುಟ್ಸ್, ಸಾಲ್ವೆಡ್ ಕ್ಯಾರಮೆಲ್ ಮತ್ತು ವೆನಿಲ್ಲಾ ಬೀನ್ ಸಹಿತ ವಿವಿಧ ಅದ್ಭುತ ರುಚಿಯ ಉತ್ಪನ್ನಗಳು ಗ್ರಾಹಕರ ಕೈ ಸೇರಲಿವೆ. ಇದು 100 ಎಂಎಲ್ ಮತ್ತು 500 ಎಂಎಲ್ ಕಂಟೇನರ್ಗಳಲ್ಲಿ ಲಭ್ಯವಾಗಲಿದೆ.
ಗ್ರಾಹಕರಿಗೆ ಹೊಸ ರುಚಿಯನ್ನು ಪರಿಚಯಿಸುವ ಹಾಗೂ ಅವರ ಸಂತೃಪ್ತಿಯ ಉದ್ದೇಶದಿಂದ ಹಾಂಗ್ಯೋ ಐಸ್ ಕ್ರೀಂಗಳೊಂದಿಗೆ ಪಾಲುದಾರರಾಗಲು ನಾವು ಹೆಚ್ಚು ಸಂತೋಷಪಡುತ್ತೇವೆ ಎಂದು ಸ್ಕೂರ್ ಸಂಸ್ಥಾಪಕ ಹಾಗೂ ಸಿಇಒ ವಿಮಲ್ ಶರ್ಮಾ ತಿಳಿಸಿದ್ದಾರೆ.
ಸಾಂಪ್ರದಾಯಿಕ ಐಸ್ಕ್ರೀಂ ಮತ್ತು ಉತ್ಕೃಷ್ಟ ದರ್ಜೆಯ ಚಾಕೊಲೇಟ್ಗಳ ನಡುವಿನ ಅಂತರವನ್ನು ಕಡಿಮೆ ಗೊಳಿಸುವ ಹೊಸ ಡೆಸರ್ಟ್ ಸಂಸ್ಕೃತಿಯನ್ನು ನಿರ್ಮಿಸುವಲ್ಲಿ ಈ ಪಾಲುದಾರಿಕೆ ಗುರಿ ಹೊಂದಿದೆ ಎಂದು ಹಾಂಗ್ಯೋ ಬ್ಯುಸಿನೆಸ್ ಡೆವಲಪ್ಮೆಂಟ್ ಮುಖ್ಯಸ್ಥ ಸಂಕೀರ್ಣ ಪೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.