ಚೀನ: ಮಕ್ಕಳಿಗೆ ಸೋಷಿಯಲ್ ಡಿಸ್ಟಾನ್ಸ್ ಟೋಪಿ
Team Udayavani, May 1, 2020, 2:31 PM IST
ಬೀಜಿಂಗ್: ಇಡೀ ವಿಶ್ವಕ್ಕೆ ಮಾರಣಾಂತಿಕ ಸೋಂಕನ್ನು ಹಬ್ಬಿಸಿದ ಆರೋಪಕ್ಕೆ ಒಳಗಾಗಿರುವ ಚೀನದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಶಾಲಾ-ಕಾಲೇಜುಗಳೂ ಪುನರಾರಂಭಗೊಂಡಿವೆ. ಜತೆಗೆ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದಕೊಳ್ಳಲು ವಿಭಿನ್ನ ವಿಧಾನವನ್ನು ಪಾಲಿಸುತ್ತಿದೆ. ಸುಮಾರು ಮೂರು ತಿಂಗಳ ನಂತರ ವಿದ್ಯಾರ್ಥಿಗಳು ಶಾಲೆಯತ್ತ ಮುಖ ಮಾಡುತ್ತಿದ್ದು,
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೋಷಿಯಲ್ ಡಿಸ್ಟಾನ್ಸ್ ಟೋಪಿಯನ್ನು ಮಕ್ಕಳಿಗೆ ನೀಡಲಾಗಿದೆ. ಒಂದು ಮೀಟರ್ ಅಂತರವಿರುವಂತೆ 2 ಕೋಲುಗಳ ಸಹಾಯದಿಂದ ಈ ಟೋಪಿಯನ್ನು ತಯಾರಿಸಿದ್ದು, ಮಕ್ಕಳೆಲ್ಲಾ ಒಟ್ಟಿಗೆ ಒಂದೆಡೆ ಸೇರಿದಾಗ ಸಾಮಾಜಿಕ ಅಂತರದ ಬಗ್ಗೆ ಅವರಿಗೆ ತಿಳಿ ಹೇಳುವುದು ಕಷ್ಟ ಎನ್ನುವ ಕಾರಣಕ್ಕೆ ಈ ಉಪಾಯ ಮಾಡಲಾಗಿದೆ.
ಈ ವಿಧಾನವನ್ನು ಹ್ಯಾಂಗ್ಝೌ ಎಂಬ ಪ್ರಾಂತ್ಯದ ಯಾಂಗ್ಜೆಂಗ್ ಪ್ರಾಥಮಿಕ ಶಾಲೆ ಅನ್ವೇಷಣೆ ಮಾಡಿದ್ದು, ನಿಯಮವನ್ನು ಕಠಿಣವಾಗಿ ಜಾರಿಗೊಳಿಸುವತ್ತ ಕಾರ್ಯಾಚರಿಸುತ್ತಿದೆ.
ಮಕ್ಕಳೆಲ್ಲಾ ತಲೆಯ ಮೇಲೊಂದು ಹೆಲ್ಮೆಟ್ರೀತಿಯ ಟೋಪಿ ಧರಿಸಿ ಹೋಗುತ್ತಿರುವ ವಿಡೀಯೋ ಚೀನದೆಲ್ಲಡೆ ವೈರಲ್ ಆಗಿದ್ದು, ಇದರ ಜತೆಗೆ ಮಾಸ್ಕ್ ಧಾರಣೆಯನ್ನು ಕಡ್ಡಾಯ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.