ಸೌರಶಕ್ತಿಯಿಂದ ಆಹಾರ ಸಂರಕ್ಷಣೆ; ಆರೋಗ್ಯ ಖಜಾನೆ
Team Udayavani, Feb 11, 2021, 6:00 AM IST
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಎಲ್ಲವೂ ಯಂತ್ರಮಯ. ನಮಗೆ ಯಾವಾಗಬೇಕೆಂದರೆ ಆವಾಗ ಬಿಸಿಬಿಸಿ ಆಹಾರಪದಾರ್ಥಗಳು ಲಭ್ಯ. ಆದರೆ ಇವು ನಮ್ಮ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಒಂದಿನಿತೂ ಚಿಂತಿಸುವುದಿಲ್ಲ. ನೋಡಲು ಶುಚಿಯಾಗಿ, ನಾಲಗೆಗೆ ರುಚಿಯಾಗಿದ್ದರೆ ಸಾಕು. ಅಲ್ಲಿಗೆ ನಮ್ಮ ಜಿಹ್ವಾ ಚಾಪಲ್ಯ ತೀರುತ್ತದೆ. ಇಂದಿನ ಯಾಂತ್ರಿಕ ಯುಗದಲ್ಲಿ ನಿಮಗೆ ಹಿಂದಿನ ರೂಢಿಗತ ಆಹಾರ ಪದಾರ್ಥಗಳ ಸಂರಕ್ಷಣೆಯ ವಿಧಾನಗಳೆಲ್ಲ ಹಳಸಲಾಗಿಯೇ ಕಾಣುತ್ತವೆ. ಆಗ ತಾನೆ ಫ್ರಿಜ್, ಓವನ್‌ಗಳಿಂದ ತೆಗೆದುಕೊಟ್ಟ ತಿಂಡಿತಿನಸುಗಳೇ ಇಂದಿನ ಪೀಳಿಗೆಗೆ ರುಚಿಕರ. ಆದರೆ ಹಿಂದೆ ವಾರಗಟ್ಟಲೆ ಬಿಸಿಲಲ್ಲಿ ಒಣಗಿಸಿ, ಗಾಳಿಯಾಡದಂತೆ ಗಾಜಿನ ಬಾಟಲು, ಡಬ್ಬಗಳಲ್ಲೋ ಭದ್ರವಾಗಿ ಮುಚ್ಚಿಟ್ಟ ತಿಂಡಿಗಳನ್ನು ಕಂಡರೆ ಈಗ ಮೂಗುಮುರಿಯುವವರೇ ಹೆಚ್ಚು. ಇನ್ನು ಹೀಗೆ ಬಿಸಿಲಲ್ಲಿ ಒಣಗಿಸಿ ಭದ್ರವಾಗಿ ಕಟ್ಟಿಟ್ಟು ಅಟ್ಟದ ಮೇಲಿರಿಸಿದ ಸಂಬಾರ ಪದಾರ್ಥಗಳ ರುಚಿಯೇ ಬೇರೆ. ಉಪ್ಪಿನಕಾಯಿಯ ಕಥೆಯಂತೂ ಹೇಳುವುದೇ ಬೇಡ. ಕೇವಲ ಸೌರಶಕ್ತಿಯನ್ನು ಬಳಸಿ ಹೀಗೆ ಆಹಾರ ಪದಾರ್ಥಗಳನ್ನು ಸಂಸ್ಕರಿಸಿ, ಸಂರಕ್ಷಿಸಿಡುತ್ತಿದ್ದ ನಮ್ಮ ಪೂರ್ವಜರಿಗೆ, ಹಿರಿಯರಿಗೆ ಅದರ ವೈಜ್ಞಾನಿಕ ಮಹತ್ವ ತಿಳಿದಿತ್ತೋ ಇಲ್ಲವೋ? ಆದರೆ ಅವರಿಗೆ ಜೀವನಾನುಭವ ಎಲ್ಲವನ್ನೂ ಕಲಿಸಿಕೊಟ್ಟಿತ್ತು. ಆದರೆ ಇಂದಿನ ಪೀಳಿಗೆಗೆ ಮಾತ್ರ ಇವೆಲ್ಲ ಅವಜ್ಞೆಯ ವಿಷಯಗಳಾಗಿ ಬಿಟ್ಟಿವೆ.
ಸೂರ್ಯನ ಶಾಖವನ್ನು ಬಳಸಿ ಆಹಾರ ಸಂರಕ್ಷಣೆ ಮಾಡುವ ಪರಿಕಲ್ಪನೆ ಹೊಸದೇನಲ್ಲ. ಆಹಾರ ಹಾಳಾ ಗದಿರಲು ಮತ್ತು ದೀರ್ಘಕಾಲದವರೆಗೆ ಬಳಸಲು ಅನುಕೂಲವಾಗುವಂತೆ ಇರಲು ಬಳಸುತ್ತಿದ್ದ ಪುರಾತನ ವಿಧಾನವಿದು. ತರಕಾರಿ ಮತ್ತು ಹಣ್ಣು ಹಂಪಲು ಗಳಲ್ಲಿ ರುವ ತೇವಾಂಶವನ್ನು ಹೋಗಲಾಡಿಸಿ ಆ ಮೂಲಕ ಅವುಗಳಲ್ಲಿ ಬ್ಯಾಕ್ಟೀರಿಯಾ, ಈಸ್ಟ್ ಅಥವಾ ಫಂಗಸ್ ಬೆಳೆಯದಂತೆ ನಿಯಂತ್ರಿಸುವುದೇ ಇದರ ಉದ್ದೇಶ.
ಆಹಾರ ಪದಾರ್ಥಗಳ ಸಂರಕ್ಷಣೆಗೆ ಸೌರಶಕ್ತಿಯನ್ನು ಬಳಸುವುದರಿಂದ ಹಲವಾರು ಪ್ರಯೋಜನಗಳಿವೆ. ಬೇರೆ ಸಂರಕ್ಷಣ ವಿಧಾನಗಳಾದ ಫ್ರೀಜಿಂಗ್, ಕ್ಯಾನಿಂಗ್ ಮುಂತಾದವುಗಳಿಗೆ ಹೋಲಿಸಿದರೆ ಶಕ್ತಿ ಯ ಅಪವ್ಯಯ ತುಂಬಾ ಕಡಿಮೆ ಮತ್ತು ಅತೀ ಕಡಿಮೆ ಜಾಗದಲ್ಲಿಯೇ ಶೇಖರಿಸಿಡಬಹುದು. ಇಲ್ಲಿ ಗಮನಿಸಬೇಕಾದ ಮತ್ತೂಂದು ಪ್ರಮುಖ ಅಂಶವೆಂದರೆ ಸೂರ್ಯನ ಶಾಖದಲ್ಲಿ ಒಣಗಿಸು ವುದರಿಂದ ಆಹಾರ ಪದಾರ್ಥಗಳಲ್ಲಿರುವ ಪೋಷ ಕಾಂಶಗಳು ಕಿಂಚಿತ್ತೂ ನಾಶವಾಗುವುದಿಲ್ಲ. ಆದ್ದ ರಿಂದ ಗೃಹಬಳಕೆಗೆ ಇದು ಅತ್ಯಂತ ಸೂಕ್ತವಾದ ವಿಧಾನವಾಗಿದೆ. ಭಾರತದಲ್ಲಿ ಆಹಾರ ಪದ್ಧತಿಯಲ್ಲಿ ನಮ್ಮ ಅಜ್ಜ-ಅಜ್ಜಿಯರ ಕಾಲದಿಂದಲೂ ಒಣಗಿಸಿ ತಯಾರಿಸುವ ಆಹಾರಗಳ ಬಹು ದೊಡ್ಡ ಪಟ್ಟಿಯೇ ಇದೆ. ಅದು ಮೆಣಸು, ಸಾಸಿವೆ, ಹಿಂಗು ಇತ್ಯಾದಿ ಗಳನ್ನು ಚೆನ್ನಾಗಿ ಒಣಗಿಸಿ ತಯಾರಿಸುವ, ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿಯೇ ಇರಲಿ ಅಥವಾ ಮನೆ ಯಲ್ಲಿಯೇ ತಯಾರಿಸಿದ ಸ್ವಾದಿಷ್ಟಕರ ಆಲೂಗಡ್ಡೆ ಚಿಪ್ಸ್ ಆಗಿರಲಿ..ಹೀಗೆ ಒಣಗಿಸಬಹುದಾದ ಆಹಾರ ಪದಾರ್ಥಗಳ ಪಟ್ಟಿ ಬಲುದೊಡ್ಡದಿದೆ.
ಸೌರಶಕ್ತಿಯಿಂದ ಆಹಾರ ಸಂರಕ್ಷಣೆಯು ನಿಧಾನ ಮತ್ತು ಸ್ಥಿರವಾಗಿರುವುದರಿಂದ ಅದು ಆಹಾರ ಪದಾ ರ್ಥಕ್ಕೆ ನೀಡುವ ವಿಶಿಷ್ಟವಾದ ಸುವಾಸನೆ ತಾಜಾ ಪದಾ ರ್ಥಕ್ಕಿಂತ ಅತೀ ಭಿನ್ನವಾಗಿರುತ್ತದೆ. ಇದೇ ಕಾರಣಕ್ಕೆ ಪ್ರ ಪಂಚದಾದ್ಯಂತ ಈಗಲೂ ಅತ್ಯಾಧುನಿಕ ಅಡುಗೆ ಮನೆ ಗಳಲ್ಲಿಯೂ ಈ ಪದ್ಧತಿ ಈಗಲೂ ಪ್ರಚಲಿ ತದಲ್ಲಿದೆ.
ಪ್ರಾರಂಭಿಕ ಹಂತವಾಗಿ ಹಣ್ಣುಗಳನ್ನು ಸನ್ ಡ್ರೈ ಮಾಡಬಹುದು. ಹಣ್ಣುಗಳಲ್ಲಿರುವ ಹೆಚ್ಚಿನ ಸಕ್ಕರೆ ಅಂಶವು ಮತ್ತು ಆಮ್ಲಿàಯ ಅಂಶ ಸನ್ ಡ್ರೈ ಮಾಡಲು ಸುರಕ್ಷಿತ ಮತ್ತು ಸೂಕ್ತವಾಗಿದೆ. ಆದರೆ ತರಕಾರಿ ಮತ್ತು ಮಾಂಸ ಇವೆರಡರಲ್ಲಿಯೂ ಸಕ್ಕರೆ ಮತ್ತು ಆಮ್ಲಿàಯ ಅಂಶಗಳು ಅತೀ ಕಡಿಮೆ ಪ್ರಮಾಣದಲ್ಲಿರುವುದರಿಂದ ಸನ್ ಡ್ರೈ ಮಾಡಲು ಸೂಕ್ತವಲ್ಲ. ಆಹಾರ ಪದಾರ್ಥ ಗಳನ್ನು ಒಣಗಿಸುವಾಗ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಈ ಕೆಳಗಿನಂತಿವೆ.
– 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿ ರುವ ಬಿಸಿಲಿನ ವಾತಾವರಣ ಒಣಗಿಸಲು ಸೂಕ್ತ.
– ಆಹಾರ ಪದಾರ್ಥಗಳನ್ನು ದಿನದ ಹೊತ್ತು ಮಾತ್ರ ಒಣಗಿಸಿ, ರಾತ್ರಿಯಾಗುತ್ತಲೇ ಮನೆಯೊಳಗೆ ಇಡುವುದು ಅತೀ ಮುಖ್ಯವಾಗಿದೆ. ಇದರಿಂದ ತೇವಾ ಂಶವು ಪುನಃ ಸೇರಿಕೊಳ್ಳುವುದನ್ನು ತಡೆ ಗಟ್ಟಬಹುದು.
– ಬೀಜ ಹೊಂದಿರುವ ಹಣ್ಣುಗಳನ್ನು ಎರಡು ಭಾಗವಾಗಿ ವಿಂಗಡಿಸಿ, ಬೀಜ ರಹಿತವಾಗಿ ಒಣಗಿಸಿ.
– ಆಪಲ್, ಪಿಯರ್ಸ್, ಅಪ್ರಿಕಾಟ್‌ನಂತಹ ಹಣ್ಣುಗಳನ್ನು ನಿಂಬೆ ರಸದಲ್ಲಿ ಮುಳುಗಿಸಿ ಒಣಗಿಸು ವುದರಿಂದ ಅವುಗಳು ಬಣ್ಣಗೆಡುವುದಿಲ್ಲ.
– ಹಣ್ಣುಗಳನ್ನು ಒಂದೇ ಸೈಜಿನ ಹೋಳುಗಳಾಗಿ ಕತ್ತರಿಸಿ, ಒಣಗಿಸಿ.
– ಒಣಗಿಸುವ ಜಾಗದಲ್ಲಿ ಧಾರಾಳವಾಗಿ ಗಾಳಿ ಮತ್ತು ಬೆಳಕಿರಬೇಕು. ಧೂಳು ಮತ್ತು ಮಾಲಿನ್ಯ ರಹಿತ ವಾಗಿರಬೇಕು. ಹೀಗೆ 3ರಿಂದ 7 ದಿನಗಳ ಕಾಲ ಸೂಕ್ತ ವಾಗಿ ಒಣಗಿಸಿ, ಗಾಳಿಯಾಡದ ಡಬ್ಬಗಳಲ್ಲಿ ಸಂಗ್ರಹಿಸಿ.
– ಸೂರ್ಯನ ಶಾಖದಿಂದ ಒಣಗಿಸುವಿಕೆ ಅತೀ ಸುಲಭವಾದ ವಿಧಾನ. ಆದರೆ ಆರೈಕೆ ಮತ್ತು ಎಚ್ಚ ರಿಕೆ ಅಗತ್ಯ. ಮಾರ್ಕೆಟ್‌ಗಳಲ್ಲಿ ಸಿಗುವ ಕಲಬೆರಕೆ ಪದಾರ್ಥಗಳಿಗೆ ದುಬಾರಿ ಬೆಲೆ ತೆತ್ತು ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದರ ಬದಲಾಗಿ ಮನೆಯಲ್ಲಿ ಈ ರೀತಿಯಾಗಿ ಆಹಾರ ಸಂರಕ್ಷಿಸಿ ಸೇವಿಸುವುದನ್ನು ರೂಢಿಮಾಡಿಕೊಂಡರೆ ಉತ್ತಮ.
ಕ್ರಮೇಣ ನಿಮ್ಮ ಅಭಿರುಚಿ ಮತ್ತು ಕ್ರಿಯಾತ್ಮಕತೆಗೆ ಅನುಗುಣವಾಗಿ ಹೊಸ ಹೊಸ ಆಹಾರ ಪದಾರ್ಥ ಗಳನ್ನು ಸೌರಶಕ್ತಿಯಿಂದ ಸಂರಕ್ಷಿಸಿ, ನಿಮ್ಮ ಕಿಚನ್ ಶೆಲ್ಫ್ ನಲ್ಲಿ ಹೆಮ್ಮೆಯಿಂದ ಸಂಗ್ರಹಿಸಿಡಿ. ಅವುಗಳ ವಿಶಿಷ್ಟ ರುಚಿಗೆ ನೀವೇ ಮಾರುಹೋಗುತ್ತೀರಿ. ಸೌರಶಕ್ತಿ ಪ್ರಕೃತಿ ನಮಗೆ ನೀಡಿದ ಅತೀ ದೊಡ್ಡ ವರದಾನ. ಅದನ್ನು ವಿವೇಚನೆಯಿಂದ ಬಳಸಿ.
– ಕಾಂತಿ ಕಾಮತ್, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.