ಸಾಲಿಟೇರ್ ವಸತಿ ಸಮುಚ್ಚಯ ಉದ್ಘಾಟನೆ ಇಂದು
Team Udayavani, Dec 29, 2019, 3:06 AM IST
ಮಂಗಳೂರು: ನಗರದ ಲ್ಯಾಂಡ್‌ಟ್ರೇಡ್ಸ್ ಬಿಲ್ಡರ್ ಆ್ಯಂಡ್ ಡೆವಲಪರ್ ಸಂಸ್ಥೆಯು ಹ್ಯಾಟ್‌ಹಿಲ್‌ನಲ್ಲಿ ನಿರ್ಮಿಸಿದ ಅತ್ಯಂತ ವಿಶಿಷ್ಟವಾದ “ಸಾಲಿಟೇರ್’ ಬಹು ಅಂತಸ್ತುಗಳ ವಸತಿ ಸಮುಚ್ಚಯವು ಡಿ.29ರಂದು ಸಂಜೆ ಉದ್ಘಾಟನೆಗೊಳ್ಳಲಿದೆ ಎಂದು ಲ್ಯಾಂಡ್‌ಟ್ರೇಡ್ಸ್ ನ ಮಾಲೀಕ ಕೆ.ಶ್ರೀನಾಥ್ ಹೆಬ್ಟಾರ್ ತಿಳಿಸಿದ್ದಾರೆ.
ಕ್ರಿಸಿಲ್ ಅಂತಾರಾಷ್ಟ್ರೀಯ ಮಾನ್ಯತಾ ಸಂಸ್ಥೆಯ ರಿಯಲ್ ಎಸ್ಟೇಟ್ ಯೋಜನಾ ಸಂಬಂಧಿತ ಗರಿಷ್ಠವಾದ 7 ಸ್ಟಾರ್ ಪುರಸ್ಕಾರಕ್ಕೆ ಪಾತ್ರವಾಗಿರುವ ಸಾಲಿಟೇರ್, ಕ್ರೆಡೈನಿಂದ ಅದರ ಮಂಗಳೂರು ಚಾಪ್ಟರ್‌ನಲ್ಲಿ 50ಕ್ಕಿಂತ ಹೆಚ್ಚು ವಸತಿಗಳ ವಿಭಾಗದಲ್ಲಿ “ಕೇರ್ ಅವಾರ್ಡ್ 2019′ ಪ್ರಶಸ್ತಿ ಪಡೆದಿದೆ.
ಆರ್ಕಿಟೆಕ್ನಿಕ್ಸ್‌ನ ಆರ್ಕಿಟೆಕ್ಟ್ ಪೀಟರ್ ಮಸ್ಕರೇಞ್ಞಸ್ ಅವರು ಈ ಯೋಜನೆಯ ಅತ್ಯಾಕರ್ಷಕ ವಿನ್ಯಾಸವನ್ನು ರೂಪಿಸಿದ್ದಾರೆ. ಪ್ರತಿ ಅಪಾರ್ಟ್‌ಮೆಂಟ್ ಕೂಡಾ ಅತ್ಯಾಧುನಿಕ ಶೈಲಿಯಲ್ಲಿ ಪೂರ್ಣ ಸ್ಥಳಾವಕಾಶ ಬಳಸಿ ಪರಿಪೂರ್ಣ ನಿರ್ಮಾಣ, ಬ್ರ್ಯಾಂಡೆಡ್ ಸಲಕರಣಗಳಿಂದ ಗಮನ ಸೆಳೆಯುತ್ತಿದೆ. ಆರು ಹಂತಗಳ ಪಾರ್ಕಿಂಗ್ ವ್ಯವಸ್ಥೆ ಇದ್ದು, ಎಲ್ಲಾ ಸ್ವರೂಪದ ವಾಹನಗಳಿಗೆ ಅವಕಾಶವಿದೆ.
ನಗರ ಪಾಲಿಕೆಯಿಂದ ಕಟ್ಟಡ ಪ್ರವೇಶಪತ್ರ, ಡೋರ್ ನಂಬರ್, ಅಗ್ನಿಶಾಮಕ ದಳದಿಂದ ಅಂತಿಮ ಅಂಗೀಕೃತ ಪತ್ರ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾಲಿನ್ಯರಹಿತ ಪರಿಸರ ಅಂತಿಮ ಪ್ರಮಾಣಪತ್ರ, ಶಾಶ್ವತವಾದ ವಿದ್ಯುತ್ ಮತ್ತು ನೀರಿನ ಸಂಪರ್ಕ ಇತ್ಯಾದಿ ಎಲ್ಲಾ ಅಧಿಕೃತ ಮತ್ತು ಅವಶ್ಯಕ ದಾಖಲೆಗಳನ್ನು ಪಡೆದುಕೊಂಡು, ಗ್ರಾಹಕರಿಗೆ ಸಂಪೂರ್ಣವಾಗಿ ವಿಶ್ವಾಸದಿಂದ ಈ ಯೋಜನೆ ಅರ್ಪಿಸುತ್ತಿದ್ದೇವೆ. ಕರ್ನಾಟಕ ರೆರಾದಿಂದ ಸಂಪೂರ್ಣ ಅಂತಿಮ ಪ್ರಮಾಣಪತ್ರ ಲಭ್ಯವಾಗಿದೆ ಎಂದು ಶ್ರೀನಾಥ್ ಹೆಬ್ಟಾರ್ ಹೇಳಿದ್ದಾರೆ.
ಲ್ಯಾಂಡ್‌ಟ್ರೇಡ್ಸ್ ಪರಂಪರೆ: 1992ರಲ್ಲಿ ಕೆ. ಶ್ರೀನಾಥ್ ಹೆಬ್ಟಾರ್ ಅವರು ಸ್ಥಾಪಿಸಿದ ಲ್ಯಾಂಡ್‌ಟ್ರೇಡ್ಸ್ ಸಂಸ್ಥೆಯು ಈಗಾಗಲೇ ವಸತಿಯುತ ಮತ್ತು ವಾಣಿಜ್ಯ ಸಂಬಂಧಿತ 35 ಯೋಜನೆಗಳನ್ನು ಯಶಸ್ವಿಯಾಗಿ ನಿರ್ಮಿಸಿದೆ. ಶ್ರೇಷ್ಠ ಗುಣಮಟ್ಟ, ಗ್ರಾಹಕರ ಸಂಪೂರ್ಣ ವಿಶ್ವಾಸದಿಂದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ರೂಪುಗೊಂಡಿದೆ.
ಐಎಸ್‌ಒ 9001: 2015 ಮಾನ್ಯತೆಯ ಜತೆಗೆ ಕ್ರಿಸಿಲ್‌ನ ಗರಿಷ್ಠ ರೇಟಿಂಗ್ ಸಹಿತ ಅನೇಕ ಪ್ರಥಮಗಳಿಗೆ ಪಾತ್ರವಾಗಿರುವ ನಗರದ ಏಕೈಕ ಬಿಲ್ಡರ್ ಸಂಸ್ಥೆಯಾಗಿದೆ. ನಿರ್ಮಾಣ ಕ್ಷೇತ್ರದ ಅನುಭವಿ ಹಾಗೂ ಕ್ರಿಯಾಶೀಲರ ತಂಡ ಲ್ಯಾಂಡ್‌ಟ್ರೇಡ್ಸ್‌ನಲ್ಲಿದೆ. ಪ್ರತಿಷ್ಠೆಯ ಎಂಫಾರ್ ಕನ್‌ಸ್ಟಕ್ಷನ್ಸ್ ಸಂಸ್ಥೆಯು ನಿರ್ಮಾಣದ ಉಸ್ತುವಾರಿ ವಹಿಸಿದೆ. ಪೂರಕ ಮಾಹಿತಿಗೆ: www.landtrades.in <http://www.landtrades.in>
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.