ಟ್ರಾಫಿಕ್ ಸಮಸ್ಯೆಗೆ ಪರಿಹಾರ ಮರೀಚಿಕೆ
ನವಲಗುಂದ ಪಟ್ಟಣದಲ್ಲಿ ಹಾದುಹೋದ ಎರಡೂ ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪದ ಸಂಚಾರ ತಾಪತ್ರಯ
Team Udayavani, Apr 25, 2022, 10:32 AM IST
ನವಲಗುಂದ: ಹುಬ್ಬಳ್ಳಿಯಿಂದ ಪಟ್ಟಣದ ಮಾರ್ಗವಾಗಿ ನರಗುಂದ, ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ ಕಡೆ ಪ್ರಯಾಣಿಸುವವರು ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ಪಟ್ಟಣದಲ್ಲಿ ಹಲವು ವರ್ಷಗಳ ಹಿಂದೆಯೇ ಹುಬ್ಬಳ್ಳಿ-ಸೊಲ್ಲಾಪುರ ಹಾಗೂ ಗೋವಾ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಯಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳ ಸಂಚಾರ ಇದೆ. ಇದರಿಂದ ವಾಹನ ದಟ್ಟಣೆ ಉಂಟಾಗುತ್ತಿದ್ದು, ಸಂಚಾರ ತಾಪತ್ರಯ ಉಂಟಾಗುತ್ತಿದೆ.
ಹುಬ್ಬಳ್ಳಿ ರಸ್ತೆಯಿಂದ ನರಗುಂದ ಮಾರ್ಗದುದ್ದಕ್ಕೂ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ ಎಂಬುದೇ ತಿಳಿಯದಂತೆ ಅತೀ ಇಕ್ಕಟ್ಟಾದ ರಸ್ತೆ ಇದೆ. ರಾಜ್ಯದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾದರೂ ಹುಬ್ಬಳ್ಳಿ-ಸೊಲ್ಲಾಪುರ ಹಾಗೂ ಗೋವಾ-ಹೈದರಾಬಾದ್ ರಸ್ತೆಗೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ. ಇದರಿಂದ ರಾಜ್ಯ-ಕೇಂದ್ರ ಸರ್ಕಾರಕ್ಕೆ ಜನ ಹಿಡಿಶಾಪ ಹಾಕುವಂತಾಗಿದೆ.
ಜಿಲ್ಲೆಯವರೇ ಕೇಂದ್ರ-ರಾಜ್ಯ ಮಂತ್ರಿಗಳಾಗಿದ್ದರೂ ನವಲಗುಂದ ಪಟ್ಟಣದಲ್ಲಿ ಹಾದುಹೋದ ಹುಬ್ಬಳ್ಳಿ-ಸೊಲ್ಲಾಪುರ, ಗೋವಾ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಣದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪಟ್ಟಣದಲ್ಲಿ ಹೆದ್ದಾರಿ ಅಗಲೀಕರಣ ಮಾಡುತ್ತಾರೆಯೋ ಅಥವಾ ಬೈಪಾಸ್ ಮಾಡುತ್ತಾರೋ ಎಂಬ ಗೊಂದಲದಲ್ಲಿಯೇ ಜನರು ನಿತ್ಯ ಗಂಟೆಗಟ್ಟಲೇ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು ಸಹ ಟ್ರಾಫಿಕ್ ಸಮಸ್ಯೆಯ ಅನುಭವ ಪಡೆದಿದ್ದಾರೆ. ಆದರೂ ಸಹ ರಾಷ್ಟ್ರೀಯ ಹೆದ್ದಾರಿಗೆ ಮಾತ್ರ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಸರಕಾರ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ತೊರುತ್ತಿರುವ ಕಾಳಜಿ ಈ ಭಾಗದ ರಾಷ್ಟ್ರೀಯ ಹೆದ್ದಾರಿ ರಸ್ತೆಗಳಿಗೂ ನೀಡಬೇಕಾಗಿದೆ.
ತಾಲೂಕಿನ ಜನತೆ ಜಿಲ್ಲಾ ಕೇಂದ್ರ ಧಾರವಾಡಕ್ಕೆ ತೆರಳಬೇಕೆಂದರೆ ಈ ರಸ್ತೆ ತೀರಾ ಹದಗೆಟ್ಟಿದೆ. ಹೆಚ್ಚು ಹಣ ವ್ಯಯಿಸಿ ಹುಬ್ಬಳ್ಳಿ ಮಾರ್ಗವಾಗಿಯೇ ತೆರಳಬೇಕಿದೆ. ಇನ್ನು ಹುಬ್ಬಳ್ಳಿಯಿಂದಲೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ ಇದ್ದರೂ ಕಾಲವಾಡ ಹತ್ತಿರ ಟೋಲ್ ನಾಕಾ ಸುಂಕ ವಸೂಲಿಗೆ ತಯಾರಾಗಿ ನಿಂತಿದೆ.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಬಹಳವಾಗಿದ್ದು, ರಸ್ತೆ ದಾಟಿ ಹೋಗುವುದು ದುಸ್ತರವಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿದ್ದರಿಂದ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಅಗಲೀಕರಣ ಅಥವಾ ಬೈಪಾಸ್ ಮಾಡಿ ಸಂಚಾರ ಸುಗಮವಾಗುವಂತೆ ನೋಡಿಕೊಳ್ಳಬೇಕಾಗಿದೆ. ಧಾರವಾಡ ರಸ್ತೆಯೂ ಬಹಳ ಹದಗೆಟ್ಟಿರುವುದರಿಂದ ಸಂಬಂಧ ಪಟ್ಟ ಅಧಿ ಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. –ಗಿರಿಯಪ್ಪ ಗಾಣಿಗೇರ, ತುಪ್ಪದಕುರಹಟ್ಟಿ ಗ್ರಾಮದ ರೈತ
ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಆಗಬಾರದೆಂದು 1985-86ರಲ್ಲಿ ಪಿಒಟಿ (ಪಿಟ್ ಆಪರೇಟಿಂಗ್ ಟ್ರಾನ್ಸ್‌ಪೋರ್ಟ್) ಕಾಮಗಾರಿ ಮೂಲಕ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಆಗಬೇಕೆಂಬುದನ್ನು ಸರಕಾರಕ್ಕೆ ಮನವಿ ಮೂಲಕ ಒತ್ತಾಯಿಸಿದ್ದೆವು. ಆದರೂ ಇಲ್ಲಿಯವರೆಗೂ ಆಗದೇ ಇರುವುದು ವಿಪರ್ಯಾಸವಾಗಿದೆ. –ಆನಂದ ಹೊಸಗೌಡರ, ಹೋರಾಟಗಾರ
ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಅಡಿಗಿಂತ ದೊಡ್ಡ ಮಶಿನರಿಗಳು ವಾಹನದಲ್ಲಿ ಹೋಗುತ್ತವೆ. ರಾಜ್ಯ-ಹೊರರಾಜ್ಯದಿಂದ ವಾಹನಗಳ ಸಂಚಾರ ಅತೀ ಹೆಚ್ಚಾಗಿದೆ. 1990ರಲ್ಲಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ಗಾಗಿ ಹೋರಾಟ ನಡೆಸಿ ಸರಕಾರದ ಗಮನಕ್ಕೆ ತಂದರೂ ಏಕೆ ನನೆಗುದಿಗೆ ಬಿದ್ದಿದೆ ಗೊತ್ತಾಗುತ್ತಿಲ್ಲ. ಈಗ ನಿತ್ಯ ಟ್ರಾಫಿಕ್ ನಿಂದ ಸಾರ್ವಜನಿಕರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. –ಅಶೋಕ ಮಜ್ಜಿಗುಡ್ಡ
-ಪುಂಡಲೀಕ ಮುಧೋಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.