ಶೀಘ್ರ ಕನ್ನಡ ಕಸ್ತೂರಿ ತಂತ್ರಾಂಶ ಲೋಕಾರ್ಪಣೆ: ಡಾ| ಬಿಳಿಮಲೆ
ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶ
Team Udayavani, Oct 23, 2024, 12:54 AM IST
ಬೆಂಗಳೂರು: ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನ ವಾದ ಮಾಡುವ ಸಮರ್ಥ ಕನ್ನಡ ಕಸ್ತೂರಿ ತಂತ್ರಾಂಶವನ್ನು ಇ-ಆಡಳಿತ ಇಲಾಖೆ ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಈ ತಂತ್ರಾಂಶವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ| ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ರಾಜ್ಯ ಸರಕಾರದ ಇ-ಆಡಳಿತ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಇ-ಕನ್ನಡ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆಯನ್ನು ನಡೆಸಿದ ಅವರು, ಉದ್ದೇಶಿತ ತಂತ್ರಾಂಶವು ಇಂದಿನ ಖಾಸಗಿ ತಂತ್ರಾಂಶಗಳಿಗಿಂತ ಅತಿ ಹೆಚ್ಚು ದಕ್ಷತೆಯನ್ನು ಹೊಂದಿದ್ದು, ಸುಮಾರು 2.3 ಕೋಟಿ ಆಂಗ್ಲ ಮತ್ತು ಕನ್ನಡ ಸಮಾನಾಂತರ ವಾಕ್ಯಗಳನ್ನು ಆಧರಿಸಿ ಸಿದ್ಧಗೊಂಡಿದೆ.
ಈ ತಂತ್ರಾಂಶವು ಲೋಕಾರ್ಪಣೆಗೊಂಡಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದ ಬಹುದೊಡ್ಡ ಕೊಡುಗೆ ನೀಡುವುದರ ಜತೆಗೆ ಖಾಸಗಿ ವಲಯದ ತಂತ್ರಾಂಶಕ್ಕೆ ತೀವ್ರ ಪೈಪೋಟಿ ನೀಡಲಿದೆ ಎಂದಿದ್ದಾರೆ.
200ಕ್ಕೂ ಹೆಚ್ಚು ಪದಕೋಶ/ ನಿಘಂಟುಗಳನ್ನು ಬಳಸಿ ಅತ್ಯಾಧುನಿಕ ಪದಕಣಜ ತಂತ್ರಾಂಶವನ್ನು ರಾಜ್ಯ ಸರಕಾರವು ಸಾರ್ವಜನಿಕ ಬಳಕೆಗೆ ನೀಡಿದ್ದು, ಸುಮಾರು 2.20 ಕ್ಷ ಕನ್ನಡ ಪದಗಳು ಹಾಗೂ 1.20 ಲಕ್ಷ ಆಂಗ್ಲ ಮೂಲ ಪದಗಳು ಈ ತಂತ್ರಾಂಶದಲ್ಲಿ ಲಭ್ಯವಿದೆ. ಪದಕಣಜ ಮೊಬೈಲ್ ತಂತ್ರಾಂಶವನ್ನು ಸಹ ಬಳಕೆಗೆ ನೀಡಲಾಗಿದೆ ಎಂದರು.
ಇ-ಕಲಿಕಾ ಕನ್ನಡ ಪೋರ್ಟಲ್
ಜಗತ್ತಿನ ಬೇರೆ ಭಾಗಗಳಿಂದ ಉದ್ಯೋಗ, ವ್ಯವಹಾರದ ಉದ್ದೇಶದಿಂದ ಇಲ್ಲಿ ನೆಲೆಸಿರುವ ಅನ್ಯಭಾಷಿಕರಿಗೆ, ಕನ್ನಡ ಕಲಿಯಲು ಉತ್ಸಾಹ ಇರುವವರಿಗೆ ಅಂತರ್ಜಾಲದ ಮೂಲಕ ಕನ್ನಡ ಕಲಿಸುವ ಉದ್ದೇಶದಿಂದ ಸರಕಾರವು ಇ-ಕಲಿಕಾ ಕನ್ನಡ ಪೊರ್ಟಲ್ ರೂಪಿಸಿದ್ದು, ಇದು ಪ್ರಾಧಿಕಾರದ ಆಶಯಕ್ಕೆ ಪೂರಕವಾಗಿದೆ. ಕನ್ನಡೇತರರು ಕನ್ನಡ ಭಾಷೆಯನ್ನು ಕಲಿಯುವಲ್ಲಿ ಇ-ಕಲಿಕಾ ಕನ್ನಡ ಪೋಟರ್ಲ್ ನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಡಾ| ಬಿಳಿಮಲೆ ತಿಳಿಸಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ| ಸಂತೋಷ ಹಾನಗಲ್ಲ, ಇ-ಕನ್ನಡ ಯೋಜನೆಯ ಯೋಜನ ನಿರ್ದೇಶಕಿ ನಂದಿನಿ ಪಿ.ಎಂ. ಹಾಗೂ ಅಧಿಕಾರಿ, ಸಿಬಂದಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
MUST WATCH
ಹೊಸ ಸೇರ್ಪಡೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.