ದಕ್ಷಿಣ ಅಮೆರಿಕ ಈಗ ಕೋವಿಡ್ ಕೇಂದ್ರ
Team Udayavani, May 24, 2020, 6:50 PM IST
ಜಿನೇವಾ: ದಕ್ಷಿಣ ಅಮೆರಿಕ ಕೋವಿಡ್ ವೈರಸ್ ಹರಡುವಿಕೆಯ ಹೊಸ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಪೈಕಿ ಬ್ರೆಜಿಲ್ ಗರಿಷ್ಠ ಪರಿಣಾಮವನ್ನು ಎದುರಿಸುತ್ತಿದೆ. ಆಫ್ರಿಕಾದ ಕೆಲವು ದೇಶಗಳಲ್ಲೂ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ಸಾವಿನ ಸಂಖ್ಯೆ ಇತರ ದೇಶಗಳಿಗೆ ಹೋಲಿಸಿದರೆ ಈವರೆಗೆ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತಿಳಿಸಿದೆ.
ದಕ್ಷಿಣ ಅಮೆರಿಕ ಖಂಡದ ಸ್ಥಿತಿ ಆಶಾದಾಯಕವಾಗಿಲ್ಲ. ಒಂದು ದೃಷ್ಟಿಯಿಂದ ಹೇಳುವುದಾದರೆ ಈ ಖಂಡವು ಹೊಸ ಕೋವಿಡ್ ಕೇಂದ್ರವಾಗಿ ಮಾರ್ಪಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿ ಡಾ| ಮೈಕ್ ರಿಯಾನ್ ಉಲ್ಲೇಖೀಸಿದ್ದಾರೆ.
ಕೋವಿಡ್ -19 ವೈರಸ್ ಆಫ್ರಿಕಾದಲ್ಲಿ ಇಂದು ಹೊಸ ಮೈಲುಗಲ್ಲನ್ನು ದಾಟಿದೆ. ಇಲ್ಲಿ ಒಂದು ಲಕ್ಷ ಕೇಸುಗಳು ದೃಢಪಟ್ಟಿವೆ. 14 ವಾರಗಳ ಹಿಂದೆ ಮೊದಲ ಪ್ರಕರಣ ಪತ್ತೆಯಾದ ಬಳಿಕ ವೈರಾಣು ವ್ಯಾಪಿಸಿದೆ. ಈವರೆಗೆ 3,100 ಸಾವುಗಳು ದೃಢಪಟ್ಟಿವೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಪ್ರಾದೇಶಿಕ ನಿರ್ದೇಶಕ, ಬೋಟ್ಸಾನಾ ಮೂಲದ ಡಾ| ಮಟ್ಶಿಡಿಸೋ ಮೊಯೆಟಿ ಅವರು, ಈಗ ಆಫ್ರಿಕಾದಲ್ಲಿ ಕೋವಿಡ್ ಅಂತಹ ಗಂಭೀರ ಪರಿಣಾಮ ಬೀರಿಲ್ಲ. ವಿಶ್ವದ ಇತರ ದೇಶಗಳಲ್ಲಿ ಕೋವಿಡ್ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಈ ಉಪಖಂಡ ಅಂತಹ ವಿಪತ್ತನ್ನು ಇನ್ನೂ ಎದುರಿಸುವ ಸ್ಥಿತಿ ಬಂದಿಲ್ಲ ಎಂದಿದ್ದಾರೆ.
ಆದರೆ, ನಾವು ಅಷ್ಟಕ್ಕೆ ನಿರಾಳರಾಗಬೇಕಿಲ್ಲ. ಏಕೆಂದರೆ, ನಮ್ಮ ಆರೋಗ್ಯ ವ್ಯವಸ್ಥೆ ಅಷ್ಟು ಉತ್ತಮವಾಗಿಲ್ಲ. ಹಠಾತ್ತಾಗಿ ಪ್ರಕರಣಗಳ ಸಂಖ್ಯೆಯನ್ನು ಎದುರಿಸಲು ಶಕ್ತವಾಗಿಲ್ಲ ಎಂದೂ ಎಚ್ಚರಿಸಿದ್ದಾರೆ. ಆಫ್ರಿಕಾ ಖಂಡದ ಅರ್ಧದಷ್ಟು ದೇಶಗಳಲ್ಲಿ ಕೋವಿಡ್ ಈಗ ಸಮುದಾಯದಲ್ಲಿ ಹರಡುತ್ತಿದೆ ಎಂದು ವಿಶ್ವಸಂಸ್ಥೆ ವರದಿ ಹೇಳಿದೆ.
ಟರ್ಕಿ: ಹೈ-ಸ್ಪೀಡ್ ರೈಲು ಸೇವೆ ಶೀಘ್ರ ಆರಂಭ
ಟರ್ಕಿಯ ಹಲವು ಭಾಗಗಳಲ್ಲಿ ಮೇ 28ರಿಂದ ಹೈ-ಸ್ಪೀಡ್ ರೈಲು ಸೇವೆ ಪುನರಾರಂಭಗೊಳ್ಳಲಿದೆ. ಕೋವಿಡ್ ಹರಡುವುದನ್ನು ತಡೆಗಟ್ಟುವುದಕ್ಕಾಗಿ ಎರಡು ತಿಂಗಳ ಕಾಲ ಈ ಸೇವೆಯನ್ನು ರದ್ದುಪಡಿಸಲಾಗಿತ್ತು.
ನಾಲ್ಕು ಮಾರ್ಗಗಳಲ್ಲಿ 16 ಸೇವೆಗಳು ಆರಂಭಗೊಳ್ಳಲಿವೆ. ಅಂಕಾರಾ-ಇಸ್ತಾಂಬುಲ್, ಅಂಕಾರಾ-ಎಸ್ಕಿಸೆಹಿರ್, ಅಂಕಾರಾ – ಕೊನ್ಯಾ ಹಾಗೂ ಕೊನ್ಯಾ- ಇಸ್ತಾಂಬುಲ್ ನಡುವೆ ಹೈ-ಸ್ಪೀಡ್ ರೈಲುಗಳು ಓಡಲಿವೆ. ಸಾಮಾಜಿಕ ಅಂತರ ಕಾಯ್ದುಕೊಂಡು, ಶೇ. 50 ಪ್ರಯಾಣಿಕರೊಂದಿಗೆ ರೈಲು ಸೇವೆ ಆರಂಭಗೊಳ್ಳಲಿದೆ. ಮಧ್ಯದ ಆಸನವನ್ನು ಖಾಲಿ ಬಿಡಲಾಗುವುದು. 20 ವರ್ಷಗಳಿಗಿಂತ ಕೆಳಗಿನ ಹಾಗೂ 55 ವರ್ಷ ಮೇಲ್ಪಟ್ಟವರ ಪ್ರಯಾಣಕ್ಕೆ ಪೂರ್ವಾನುಮತಿ ಕಡ್ಡಾಯವಾಗಿರಲಿದೆ ಎಂದು ಅಲ್ಲಿನ ಸಾರಿಗೆ ಮತ್ತು ಮೂಲಸೌಕರ್ಯ ಸಚಿವ ಆದಿಲ್ ಕರಾಸ್ಮೈ ಲೋಗ್ಲು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.