ವಲಸೆ ಕೃಷಿ ಕಾರ್ಮಿಕರತ್ತ ತಿರಸ್ಕಾರ ಭಾವ
Team Udayavani, May 12, 2020, 2:48 PM IST
ಮಣಿಪಾಲ: ಕೋವಿಡ್-19 ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ಜೀವನೋಪಾಯಕ್ಕಾಗಿ ಸ್ವಂತ ನೆಲೆ ಬಿಟ್ಟು ನಂಬಿಹೋಗಿದ್ದ ಪ್ರದೇಶದಲ್ಲಿಯೂ ನೆಲೆ ಇಲ್ಲದಂತಾಗಿದ್ದು, ಒಂದೂತ್ತಿನ ಊಟಕ್ಕೂ ಪರದಾಡುವಂತಾಗಿದೆ. ಎಲ್ಲ ದೇಶಗಳಲ್ಲೂ ಬಡ ಕಾರ್ಮಿಕರದ್ದು ಇದೇ ಗೋಳು. ಅವರಿಗೆ ರಕ್ಷಣೆ ಮತ್ತು ನೆರವು ಒದಗಿಸಲು ಯುರೋಪ್‌ನ ಹಲವು ದೇಶಗಳು ಹಿಂದೇಟು ಹಾಕುತ್ತಿವೆ. ಸ್ಪೇನ್ ಪಶುಸಂಗೋಪನೆ ಕಾಯಕದಲ್ಲಿ ನಿರತರಾಗಿರುವ ಸಾವಿರಾರು ವಲಸೆ ಕೃಷಿ ಕಾರ್ಮಿಕರನ್ನು ಕಡೆಗಣಿಸುವ ಮೂಲಕ ಅವರನ್ನು ಮೂಲೆಗುಂಪು ಮಾಡಿದೆ.
ಫ್ರಾನ್ಸ್‌ನ ಗಡಿ ಭಾಗದಲ್ಲಿರುವ ಸ್ಪೈನ್‌ನ ಅರಾಗೋನ್ ನಗರದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ. ಉರುಗ್ವೆ ಮತ್ತು ಪರಾಗ್ವೆಯ ಸಾವಿರಾರು ವಲಸೆ ಕೃಷಿ ಕಾರ್ಮಿಕರು ಇಲ್ಲಿನ ಪಶುಸಂಗೋಪನೆಯಲ್ಲಿ ದುಡಿಯುತ್ತಿದ್ದಾರೆ. ಕೋವಿಡ್ ಕಾಟದಿಂದಾಗಿ ಈಗ ಈ ಕಾರ್ಮಿಕರ ಬದುಕು ಅನಿಶ್ಚಿತತೆಯಲ್ಲಿದೆ.ಸರಕಾರವಾಗಲಿ, ಮಾಲಕರಾಗಲಿ ಅವರ ಕಷ್ಟಸುಖ ವಿಚಾರಿಸುತ್ತಿಲ್ಲ. ಒಂದು ರೀತಿಯ ನಿರಾಶ್ರಿತ ಜೀವನವನ್ನು ಅವರು ನಡೆಸುತ್ತಿದ್ದಾರೆ. ಸದ್ಯ ಎದುರಾಗಿರುವ ಬಿಕ್ಕಟ್ಟಿನಿಂದ ಯುರೋಪಿನ ಇತರ ಭಾಗಗಳಲ್ಲೂ ವಲಸೆ ಕೃಷಿ ಕಾರ್ಮಿಕರನ್ನು ಒಂದು ಸಮಸ್ಯೆ ಎಂದು ಪರಿಗಣಿಸಲಾಗುತ್ತಿದ್ದು, ಅವರನ್ನು ತಿರಸ್ಕಾರ ಭಾವದಿಂದ ಕಾಣಲಾಗುತ್ತಿದೆ. ಆದರೂ ಹೊಟ್ಟೆ ಪಾಡಿಗಾಗಿ ಲಾಕ್‌ಡೌನ್ ನಿಯಮ ಇದ್ದರೂ ಕೃಷಿ ಕಾರ್ಮಿಕರು ಕೆಲಸ ಅರಸಿ ಒಂದೆಡೆಯಿಂದ ಮತ್ತೂಂದೆಡೆಗೆ ತೆರಳುತ್ತಿದ್ದು, ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಇತರ ದೇಶಗಳಿಂದ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿವೆ. ಸ್ಪೈನ್‌ನಲ್ಲಿ ಶೀಘ್ರವಾಗಿ ಉಣ್ಣೆಯನ್ನು ಬಿಡಿಸುವ ಕೆಲಸ ಪ್ರಾರಂಭವಾಗಬೇಕು. ಇಲ್ಲವಾದರೆ ಉತ್ಪತ್ತಿ ಸಂಪೂರ್ಣ ನಾಶವಾಗುವ ಸಾಧ್ಯತೆ ಇದೆ. ಈ ಅನಿವಾರ್ಯತೆಗಾಗಿ ಒಂದಷ್ಟು ಕಾರ್ಮಿಕರನ್ನು ಉಳಿಸಿಕೊಳ್ಳಲಾಗಿದೆ.
ಸ್ಟ್ರಾಬೆರಿ, ಕಿತ್ತಳೆ, ಕಲ್ಲಂಗಡಿ, ಟೊಮೆಟೊ ಇತರ ತರಕಾರಿ ಬೆಳೆಗಳ ಕಟಾವಿಗೂ ಇದೇ ಕೃಷಿ ಕಾರ್ಮಿಕರ ಅಗತ್ಯವಿದೆ.
ಅಯರ್‌ಲ್ಯಾಂಡ್‌ನಿಂದ ಇಟಲಿಗೆ ಮತ್ತು ಜರ್ಮನಿಯಿಂದ ರೊಮೇನಿಯಾಗೆ ಅವರು ಗಡಿ ದಾಟಿ ಬರುತ್ತಿದ್ದಾರೆ.
ಆದರೆ ಈ ವೇಳೆ ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳದೇ ಕಾರ್ಮಿಕರನ್ನು ಬರ ಮಾಡಿಕೊಳ್ಳುತ್ತಿರುವುದರಿಂದ
ಅವರಿಗೆ ಸೋಂಕು ತಗುಲುವ ಭಯ ಕಾಡುತ್ತಿದೆ.
ಭದ್ರತೆಯಿಲ್ಲ
ಜರ್ಮನಿ ಪೂರ್ವ ಯುರೋಪ್ ಭಾಗದಿಂದ ಇತ್ತೀಚೆಗೆ 30 ಸಾವಿರ ಕಾರ್ಮಿಕರನ್ನು ಕರೆಸಿಕೊಂಡಿದ್ದು, ಮೇ ಅಂತ್ಯದ ವೇಳೆಗೆ ಇನ್ನೂ 30,000 ಕಾರ್ಮಿಕರನ್ನು ಬರ ಮಾಡಿಕೊಳ್ಳುವ ಯೋಚನೆಯಲ್ಲಿದೆ. ಆದರೆ ಈಗ ಕೃಷಿ ಕಾರ್ಯಕ್ಕೆ ಕರೆಸಿಕೊಳ್ಳಲಾಗುತ್ತಿರುವ ಕಾರ್ಮಿಕರಿಗೆ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ. ಲಾಕ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ನಿಯಮ ಸೇರಿದಂತೆ ಇತರೆ ಸುರಕ್ಷಾ ಕ್ರಮಗಳನ್ನು ಪಾಲಿಸದೇ ಕಾರ್ಮಿಕರ ಪ್ರಾಣವನ್ನು ಅಪಾಯಕ್ಕೊಡ್ಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.