ಅತಿಯಾದ ಲೈಂಗಿಕ ಗೀಳು: ಸ್ತ್ರೀ ಹಾರ್ಮೋನ್ ಚುಚ್ಚಿಸಿಕೊಂಡ ಸ್ಪೇನ್‌ನ ಮಾಜಿ ರಾಜ !
Team Udayavani, Oct 24, 2021, 5:03 PM IST
ದುಬೈ : ಸ್ಪೇನ್‌ನ ಮಾಜಿ ರಾಜ ಜುವಾನ್ ಕಾರ್ಲೋಸ್ ಅತೀವವಾದ ಲೈಂಗಿಕ ಗೀಳನ್ನು ಕಡಿಮೆ ಮಾಡಿಕೊಳ್ಳಲು ಸ್ತ್ರೀ ಹಾರ್ಮೋನುಗಳನ್ನು ಚುಚ್ಚಿಸಿಕೊಂಡಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
”ಸ್ಪೇನ್‌ನ ರಹಸ್ಯ ಸೇವೆಯಿಂದ ಜುವಾನ್ ಕಾರ್ಲೋಸ್ ತನ್ನ ಅತಿರೇಕದ ಲೈಂಗಿಕ ಗೀಳನ್ನು ನಿಯಂತ್ರಿಸಲು ಸ್ತ್ರೀ ಹಾರ್ಮೋನುಗಳ ಚುಚ್ಚುಮದ್ದನ್ನು ಹಾಕಿಸಿಕೊಂಡಿದ್ದಾರೆ ” ಎಂದು ಮಾಜಿ ಪೊಲೀಸ್ ಮುಖ್ಯಸ್ಥರೊಬ್ಬರು ಸಂವೇದನಾಶೀಲವಾಗಿ ಹೇಳಿಕೊಂಡಿದ್ದಾರೆ.
ಬ್ಲ್ಯಾಕ್ ಮೇಲ್ ಆರೋಪದ ಮೇಲೆ ಪ್ರಸ್ತುತ ವಿಚಾರಣೆಯಲ್ಲಿರುವ ಮಾಜಿ ಪೊಲೀಸ್ ಆಯುಕ್ತರಾಗಿರುವ ಜೋಸ್ ಮ್ಯಾನುಯೆಲ್ ವಿಲ್ಲಾರೆಜೊ, ಬುಧವಾರ ನಡೆದ ಸಂಸತ್ತಿನ ವಿಚಾರಣೆಯಲ್ಲಿ ”83 ವರ್ಷದ ಗಡಿಪಾರಾಗಿರುವ ರಾಜ, ಕಾಮಾಸಕ್ತಿ ಕಡಿಮೆ ಮಾಡಲು ಸ್ತ್ರೀ ಹಾರ್ಮೋನುಗಳು ಮತ್ತು ಟೆಸ್ಟೋಸ್ಟೆರಾನ್ ಪ್ರತಿರೋಧಕಗಳನ್ನು ಚುಚ್ಚಿಸಿಕೊಂಡಿದ್ದರು” ಎಂದು ಹೇಳಿದ್ದಾರೆ.
ಕಾರ್ಲೋಸ್ ರ ವಿಪರೀತ ಚಟದ ಕಾರಣಗಳನ್ನು ನೀಡುತ್ತಾ, ಲೈಂಗಿಕ ಗೀಳು “ದೇಶಕ್ಕೆ ಸಮಸ್ಯೆ” ಎಂದು ಪರಿಗಣಿಸಲಾಗಿತ್ತು, ಏಕೆಂದರೆ ಅವರು “ಉತ್ಕಟ ಭಾವೋದ್ರಿಕ್ತ ವ್ಯಕ್ತಿ” ಎಂದು ವಿಲ್ಲಾರೆಜೊ ಅವರು ಹೇಳಿರುವುದಾಗಿ ಸ್ಪ್ಯಾನಿಷ್ ಮಾಧ್ಯಮವೊಂದು ವರದಿ ಮಾಡಿದೆ.
ವಿಚಾರಣೆಯ ಸಮಯದಲ್ಲಿ, ”ಜುವಾನ್ ಕಾರ್ಲೋಸ್ ಹಾನಿಕರವಲ್ಲದ ಗಡ್ಡೆಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಮಾಡಿದ ಸ್ಕ್ಯಾನ್‌ಗಳಿಗೆ ಸಂಬಂಧಿಸಿದ ವೈದ್ಯಕೀಯ ವರದಿಗಳನ್ನು ಮರುಪಡೆಯಲು ತನಗೆ ಹೇಳಲಾಗಿತ್ತು” ಎಂದು ಮಾಜಿ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಸ್ಪ್ಯಾನಿಷ್ ಲೇಖಕ ಮತ್ತು ಮಿಲಿಟರಿ ಇತಿಹಾಸಕಾರ ಅಮಾಡಿಯೋ ಮಾರ್ಟಿನೆಜ್ ಇಂಗಲ್ಸ್ ಅವರು ‘ಜುವಾನ್ ಕಾರ್ಲೋಸ್: ದಿ ಕಿಂಗ್ ಆಫ್ 5,000 ಲವರ್ಸ್’ ಎಂಬ ಪುಸ್ತಕವನ್ನು ಬರೆದಿದ್ದರು,ಲೈಂಗಿಕ ಇತಿಹಾಸದ ಪುರಾವೆಗಳನ್ನು ವಿವರಿಸಿ ರಾಜನನ್ನು “ಪ್ರಚಲಿತ ಲೈಂಗಿಕ ವ್ಯಸನಿ” ಎಂದು ಕರೆದಿದ್ದರು.
ಕಾರ್ಲೋಸ್ ಅವರು ಪತ್ನಿ ರಾಣಿ ಸೋಫಿಯಾ ಮಾತ್ರವಲ್ಲದೆ, ಡ್ಯಾನಿಶ್-ಜರ್ಮನ್ ನ ಉದಾರ ದಾನಿಯಾಗಿದ್ದ ಕೊರಿನ್ನಾ ಲಾರ್ಸೆನ್, ಸ್ಪ್ಯಾನಿಷ್ ಗಾಯಕಿ ಸಾರಾ ಮೊಂಟಿಯೆಲ್, ಬೆಲ್ಜಿಯನ್ ಗವರ್ನೆಸ್ ಲಿಲಿಯನ್ ಸರ್ಟಿಯು ಮತ್ತು ಇಟಾಲಿಯನ್ ರಾಜಕುಮಾರಿ ಮಾರಿಯಾ ಗೇಬ್ರಿಯೆಲಾ ಡಿ ಸಬೋಯಾ ಸೇರಿದಂತೆ 5,000 ಕ್ಕೂ ಹೆಚ್ಚು ಮಹಿಳೆಯರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಊಹಿಸಲಾಗಿದೆ.
ವಿಲ್ಲಾರೆಜೊ ಅವರ ವಿಚಾರಣೆ ವೇಳೆ ಅವರು ಗಣ್ಯರೊಂದಿಗೆ ರಹಸ್ಯವಾಗಿ ರೆಕಾರ್ಡ್ ಮಾಡಿದ ಸಂಭಾಷಣೆಗಳನ್ನು ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶದಿಂದ ಅಥವಾ ಇತರ ಪ್ರಬಲ ಕ್ಲೈಂಟ್‌ಗಳ ಪರವಾಗಿ ಕಾರ್ಲೋಸ್ ರ ಖ್ಯಾತಿಯನ್ನು ಹಾಳುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
‘ಜುವಾನ್ ಕಾರ್ಲೋಸ್ ರ ಕುಖ್ಯಾತ ಲೈಂಗಿಕ ಗೀಳನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದಲ್ಲಿ ನಾನು ಭಾಗಿಯಾಗಿಲ್ಲ ಎಂದು ಹೇಳಿದರು ಮತ್ತು ಈಗ ಲಂಡನ್‌ನಲ್ಲಿ ವಾಸಿಸುತ್ತಿರುವ ಮಾಜಿ ರಾಜನ ಮಾಜಿ ಪ್ರೇಮಿ ಕೊರಿನ್ನಾ ಲಾರ್ಸೆನ್‌ನಿಂದ ಅದರ ಬಗ್ಗೆ ತಿಳಿದುಕೊಂದಿರುವುದಾಗಿ ಹೇಳಿದರು.
ಮಾಜಿ ರಾಜ ಕಾರ್ಲೋಸ್ 1975 ರಿಂದ 2014 ರವರೆಗೆ ಆಳ್ವಿಕೆ ನಡೆಸಿದ್ದರು. ತನ್ನ ಮಗನಿಗಾಗಿ ತನ್ನ ಸಿಂಹಾಸನವನ್ನು ತ್ಯಜಿಸಿದ ನಂತರ ಬಹು-ಮಿಲಿಯನ್ ಡಾಲರ್ ಭ್ರಷ್ಟಾಚಾರ ಹಗರಣದ ಆರೋಪ ಕೇಳಿ ಬಂದ ಬಳಿಕ ಕಳೆದ ವರ್ಷ ಅಬುಧಾಬಿಗೆ ಸ್ಪೇನ್ ನಿಂದ ಪಲಾಯನ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.