Parliament: ಭದ್ರತಾ ಲೋಪ ತನಿಖೆಗೆ ಸಮಿತಿ- ಸಂಸದರಿಗೆ ಬರೆದ ಪತ್ರದಲ್ಲಿ ಸ್ಪೀಕರ್‌ ಘೋಷಣೆ

ಸಲಹೆ ನೀಡಲು ಮುಖಂಡರಿಗೆ ಮನವಿ

Team Udayavani, Dec 17, 2023, 12:38 AM IST

om birla

ಹೊಸದಿಲ್ಲಿ: ಸಂಸತ್‌ ಭವನ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸುವ ನಿಟ್ಟಿನಲ್ಲಿ ಉನ್ನತ ಮಟ್ಟದ ತನಿಖೆಗೆ ಸಮಿತಿ ರಚಿಸಲಾಗಿದೆ. ಈ ಬಗ್ಗೆ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಶನಿವಾರ ಸಂಸದರಿಗೆ ಬರೆದ ಪತ್ರದಲ್ಲಿ ಈ ಅಂಶ ಸ್ಪಷ್ಟಪಡಿಸಿದ್ದಾರೆ. ಡಿ.13ರಂದು ನಡೆದ ಘಟನೆ ಒಟ್ಟಾರೆ ಕಳವಳಕಾರಿಯಾಗಿದೆ ಎಂದು ಹೇಳಿದ್ದು, ಉದ್ದೇಶಿತ ತನಿಖಾ ಸಮಿತಿ ಘಟನೆಯ ಬಗ್ಗೆ ತನಿಖೆ ಆರಂಭಿಸಿದೆ. ಶೀಘ್ರವೇ ಲೋಕಸಭೆಗೆ ವರದಿ ಸಲ್ಲಿಸಲಿದೆ ಎಂದು ಹೇಳಿದ್ದಾರೆ.

ಈ ಸಮಿತಿ ಸಂಸತ್‌ನ ಭದ್ರತೆಗೆ ಸಂಬಂಧಿಸಿದಂತೆ ಇರುವ ಎಲ್ಲ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಡಿ.13ರಂದು ನಡೆದ ಘಟನೆ ಮತ್ತೆ ಪುನರಾವರ್ತನೆಯಾಗದಂತೆ ಮಾರ್ಗಸೂಚಿಯನ್ನು ನೀಡಲಿದೆ ಎಂದಿದ್ದಾರೆ. ಇದರ ಜತೆಗೆ ಸಂಸದರು ಕೂಡ ಸಂಸತ್‌ ಭವನದ ಭದ್ರತಾ ವ್ಯವಸ್ಥೆಗಳನ್ನು ಮೇಲ್ದರ್ಜೆಗೆ ಏರಿಸುವುದರ ಬಗ್ಗೆ ಸಲಹೆಗಳನ್ನು ನೀಡಬಹುದು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮತ್ತೂಬ್ಬ ಆರೋಪಿ ಮಹೇಶ್‌ ಬಂಧನ: ಪ್ರಕರಣದ ಮಾಸ್ಟರ್‌ವೆುçಂಡ್‌ ಲಲಿತ್‌ಗೆ ದಿಲ್ಲಿಯಿಂದ ಪರಾರಿಯಾಗಲು ಸಹಾಯ ಮಾಡಿದ ಮಹೇಶ್‌ ಕುಮಾವತ್‌ನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಆತನನ್ನು 7 ದಿನಗಳ ಪೊಲೀಸ್‌ ವಶಕ್ಕೊಪಿಸಿ ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ಆದೇಶ ನೀಡಿದೆ.

ಕೋರ್ಟ್‌ಗೆ ಅರ್ಜಿ: ಆರೋಪಿ ನೀಲಂ ದೇವಿ ವಿರುದ್ಧ ದಾಖ ಲಾದ ಎಫ್ಐಆರ್‌ನ ಪ್ರತಿಯನ್ನು ಒದಗಿಸುವಂತೆ ಕೋರಿ ಆಕೆಯ ಹೆತ್ತವರು ಶುಕ್ರವಾರ ದಿಲ್ಲಿಯ ಪಟಿಯಾಲ ಹೌಸ್‌ ಕೋರ್ಟ್‌ನ ಮೊರೆ ಹೋಗಿದ್ದಾರೆ. ಜತೆಗೆ ಪೊಲೀಸ್‌ ವಶದಲ್ಲಿರುವ ತಮ್ಮ ಪುತ್ರಿಯನ್ನು ಭೇಟಿಯಾಗಲು ಅವಕಾಶ ನೀಡುವಂತೆಯೂ ಅವರು ಮನವಿ ಮಾಡಿದ್ದಾರೆ.

ಕಾಂಬೋಡಿಯಾಗೆ ಹೋಗಿ ಬಂದಿದ್ದ ಮನೋರಂಜನ್‌
ಸಂಸತ್‌ ಭದ್ರತಾ ಲೋಪ ಪ್ರಕರಣದ ಆರೋಪಿ, ಮೈಸೂರಿನ ಮನೋರಂಜನ್‌ ಒಂದು ಬಾರಿ ವಿದೇಶ ಪ್ರವಾಸ ಮಾಡಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಎಂಜಿನಿಯರಿಂಗ್‌ ಕೋರ್ಸ್‌ ಅನ್ನು ಅರ್ಧಕ್ಕೇ ನಿಲ್ಲಿಸಿದ ಬಳಿಕ 2014ರಲ್ಲಿ ಮನೋರಂಜನ್‌ ಯಾವುದೇ ಪರಿಹಾರ ಕಾರ್ಯಾಚರಣೆಯಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡಲೆಂದು ಕಾಂಬೋಡಿಯಾಗೆ ಹೋಗಿ ಬಂದಿದ್ದ. ಅವನ ಅಂತಾರಾಷ್ಟ್ರೀಯ ಪ್ರಯಾಣದ ದಾಖಲೆ ಪರಿಶೀಲನೆ ವೇಳೆ ಈ ವಿಚಾರ ತಿಳಿದುಬಂದಿದೆ. ಮೈಸೂರಿನಲ್ಲಿರುವ ಆತನ ಹೆತ್ತವರು ಕೂಡ ಈ ವಿಚಾರವನ್ನು ಒಪ್ಪಿಕೊಂಡಿದ್ದು, ವಿಶ್ವಸಂಸ್ಥೆಯಂಥ ಸಂಸ್ಥೆಯೊಂದರಲ್ಲಿ ಸ್ವಯಂಸೇವಕನಾಗಿ ದುಡಿಯಲೆಂದು ಕಾಂಬೋಡಿಯಾಗೆ ಹೋಗಿ ಬಂದಿದ್ದ ಎಂದಿದ್ದಾರೆ. ಜತೆಗೆ ಮತ್ತೂಬ್ಬ ಆರೋಪಿ ಸಾಗರ್‌ ಶರ್ಮಾ ಒಮ್ಮೆಯೂ ಮೈಸೂರಿನ ನಮ್ಮ ಮನೆಗೂ ಭೇಟಿ ನೀಡಿಲ್ಲ ಎಂದೂ ಅವರು ವಿಚಾರಣಾಧಿಕಾರಿಗಳಿಗೆ ತಿಳಿಸಿದ್ದಾರೆ.

ಸಂಸದ ಪ್ರತಾಪ್‌ ಸಿಂಹ ಹೇಳಿಕೆ ದಾಖಲಿಗೆ ಚಿಂತನೆ?
ಪಾಸ್‌ ನೀಡಿದ್ದ ಮೈಸೂರು ಸಂಸದ ಪ್ರತಾಪ್‌ ಸಿಂಹ ಅವರ ಹೇಳಿಕೆ ದಾಖಲಿಸಲು ದಿಲ್ಲಿ ಪೊಲೀಸರ ವಿಶೇಷ ಘಟಕ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಕಳೆದ ಬುಧವಾರ ನಡೆದ ಘಟನೆಯ ಮರುಸೃಷ್ಟಿಗಾಗಿ ಎಲ್ಲ ಆರೋಪಿಗಳನ್ನೂ ಸಂಸತ್‌ ಭವನದ ಒಳಗೆ ಕರೆದೊಯ್ಯಲು ಕೂಡ ತನಿಖಾಧಿಕಾರಿಗಳು ಚಿಂತನೆ ನಡೆಸಿದ್ದು, ಇದಕ್ಕಾಗಿ ಸಂಸತ್‌ನ ಅನುಮತಿ ಕೇಳುವ ಸಾಧ್ಯತೆಯಿದೆ. ಇದರೊಂದಿಗೆ ಲಲಿತ್‌ ಝಾನನ್ನು ರಾಜಸ್ಥಾನಕ್ಕೆ ಕರೆದೊಯ್ದು, ಆತ ಎಲ್ಲಿ ತಂಗಿದ್ದ ಮತ್ತು ಮೊಬೈಲ್‌ ಫೋನ್‌ಗಳನ್ನು ಸುಟ್ಟುಹಾಕಿದ್ದಾನೆ ಎನ್ನಲಾದ ಸ್ಥಳವನ್ನೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂಸತ್‌ ಘಟನೆಗೆ ನಿರುದ್ಯೋಗ ಕಾರಣ: ರಾಹುಲ್‌ ಗಾಂಧಿ
ಭದ್ರತಾ ವೈಫ‌ಲ್ಯ ಘಟನೆ ಸಂಬಂಧ ಕೇಂದ್ರ ವಿರುದ್ಧ ವಾಗ್ಧಾಳಿ ನಡೆಸಿರುವ ಸಂಸದ ರಾಹುಲ್‌ ಗಾಂಧಿ, “ಘಟನೆಗೆ ನಿರುದ್ಯೋಗ ಮತ್ತು ಹಣದುಬ್ಬರವೇ ಕಾರಣ’ ಎಂದು ಆರೋಪಿಸಿದ್ದಾರೆ. “ಲೋಕಸಭೆಯಲ್ಲಿ ಗಂಭೀರ ವಾದ ಭದ್ರತಾ ಲೋಪ ಆಗಿದೆ. ಆದರೆ ಇದಕ್ಕೆ ಕಾರಣ, ಪ್ರಧಾನಿ ಮೋದಿಯವರ ನೀತಿಯಿಂದ ಹೆಚ್ಚಾಗಿರುವ ನಿರುದ್ಯೋಗ ಮತ್ತು ಹಣದುಬ್ಬರ. ಎಲ್ಲಿದೆ ಉದ್ಯೋಗಾವಕಾಶ? ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಬೇಕು’ ಎಂದಿದ್ದಾರೆ..

ಬಹಿರಂಗಪಡಿಸಿ: ರಾಹುಲ್‌ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ “ರಾಹುಲ್‌ ಗಾಂಧಿ ಯಾವತ್ತೂ ನಿರಾಸೆ ಮೂಡಿಸುವುದಿಲ್ಲ; ಸದಾ ವ್ಯರ್ಥ ಮಾತುಗಳನ್ನೇ ಆಡುತ್ತಾರೆ. ಭಾರತದಲ್ಲಿ ಈಗ ನಿರು ದ್ಯೋಗವು ಶೇ.3.2ರಷ್ಟಿದೆ. ಇದು ಕಳೆದ 6 ವರ್ಷಗಳಲ್ಲೇ ಅತೀ ಕನಿಷ್ಠ. ಇಂಥ ಹೇಳಿಕೆಗಳನ್ನು ನೀಡುವ ಬದಲು ರಾಹುಲ್‌ ಅವರು, ಸಂಸತ್‌ನ ಭದ್ರತೆ ಉಲ್ಲಂಘಿಸಿದ ಆರೋಪಿಗಳಿಗೆ ಕಾಂಗ್ರೆಸ್‌, ಟಿಎಂಸಿ ಮತ್ತು ಸಿಪಿಎಂನೊಂದಿಗಿನ ನಂಟೇನು ಎಂಬ ಬಗ್ಗೆ ವಿವರಣೆ ನೀಡಲಿ’ ಎಂದಿದ್ದಾರೆ.

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.