ಎಚ್‌ಡಿಕೆ ತೋಟದ ಮನೆಯಲ್ಲಿ ವಿಶೇಷ ಯಾಗ
300 ಪುರೋಹಿತರಿಂದ ನಿರಂತರ 9 ದಿನ ಲಕ್ಷ್ಮೀನಾರಾಯಣ ಹೃದಯ ಪಾರಾಯಣಕ್ಕೆ ಚಾಲನೆ
Team Udayavani, Mar 4, 2023, 12:59 PM IST
ರಾಮನಗರ: ಧಾರ್ಮಿಕ ಆರಾಧನೆ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ವಿಶೇಷ ಆಸಕ್ತಿ ವಹಿಸುತ್ತದೆ.
ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಂಚರತ್ನ ರಥಯಾತ್ರೆ ಮೂಲಕ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದು, ಇದೀಗ ಚುನಾವಣೆ ಹೊಸ್ತಿಲಲ್ಲಿ ದೇವರ ಮೊರೆ ಹೋಗಿದ್ದಾರೆ.
ತಾಲೂಕಿನ ಬಿಡದಿ ಬಳಿಯ ಕೇತುಗಾನ ಹಳ್ಳಿಯ ತಮ್ಮ ತೋಟದ ಮನೆಯಲ್ಲಿ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಯಾಗ ಹಮ್ಮಿಕೊಂಡಿದ್ದಾರೆ. ಅದಕ್ಕಾಗಿ ನೂರಾರು ಪುರೋಹಿತರ ಸಮಾಗಮವಾಗಿದ್ದು, ಪೂಜೆ ಮತ್ತು ಯಾಗ ಆರಂಭವಾಗಿದೆ.
ರಾಜ್ಯಾದ್ಯಂತ ನಡೆಯುತ್ತಿರುವ ಪಂಚರತ್ನ ಯೋಜನೆ ಯಶಸ್ಸಿಗೆ ಹಾಗೂ ಜೆಡಿಎಸ್ ಪಕ್ಷದ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆರೋಗ್ಯ ಚೇತರಿಕೆಗೆ ಸಂಬಂಧಿಸಿದಂತೆ ಎಚ್‌ಡಿಕೆ ಪೂಜೆ ಪುನಸ್ಕಾರಗಳನ್ನು ಹಮ್ಮಿಕೊಂಡಿದ್ದಾರೆ.
9 ದಿನಗಳ ವರೆಗೆ ನಿರಂತರವಾಗಿ ಯಾಗಗಳು ನಡೆಯಲಿವೆ. ಪ್ರಥಮ ದಿನವಾದ ಶುಕ್ರವಾರ ಕುಮಾರಸ್ವಾಮಿ ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಯಾಗದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಸಹೋದರ, ಪುತ್ರ, ಮೊಮ್ಮಗ ಭಾಗಿ: 9 ದಿನ ಕಾಲ ಶತ ಚಂಡಿಕಾ ಯಾಗ, ಕೋಟಿ ಮೃತ್ಯುಂಜಯ ಪೂಜೆಗಳು ಜರುಗಲಿವೆ.
ಹೇಳಿ ಕೇಳಿ ಕೇತುಗಾನಹಳ್ಳಿಯ ತೋಟದ ಮನೆ ಕುಮಾರಸ್ವಾಮಿ ಅವರಿಗೆ ಅಚ್ಚು ಮೆಚ್ಚಿನ ಮನೆಯಾದ ಹಿನ್ನೆಲೆಯಲ್ಲಿ ಕುಟುಂಬದವರ ಆರೋಗ್ಯ ಹಾಗೂ ಪಕ್ಷದ ಯಶಸ್ಸಿಗಾಗಿ ಪೂಜೆ ಮಾಡಿಸಲಾಗುತ್ತಿದೆ. ಯಾಗದಲ್ಲಿ ಎಚ್.ಡಿ.ರೇವಣ್ಣ, ನಿಖೀಲ್ ಕುಮಾರಸ್ವಾಮಿ, ರೇವತಿ ನಿಖೀಲ್ ಜೊತೆಗೆ ಅವ್ಯಾನ್ ದೇವೇಗೌಡ ಪೂಜೆಯಲ್ಲಿ ಭಾಗಿಯಾಗಿದ್ದರು.
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ
ರಾಮನಗರದ ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದ ಮನೆಯಲ್ಲಿ ನಡೆಯುತ್ತಿರುವ ಯಾಗದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಬಿಜೆಪಿ ಸರ್ಕಾರದ ಲಂಚಾವತಾರ ಮಿತಿಮೀರಿದೆ. ಇನ್ನೊಂದು ಕಡೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ,ಯಾವ ನೈತಿಕತೆ ಇಟ್ಟುಕೊಂಡು ಭಾಷಣ ಮಾಡುತ್ತಿ ದ್ದಾರೆ ಎಂದು ಎಚ್.ಡಿ.ಕೆ ಕುಟುಕಿದರು. ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಅರಿವಿದ್ದಿದ್ದರೆ ಅವರು ಇಲ್ಲಿಗೆ ಬರುವ ಹಾಗೆ ಇರಲಿಲ್ಲ. ಯಾವ ಮುಖ ಇಟ್ಟುಕೊಂಡು ಬಂದು ಭಾಷಣ ಮಾಡುತ್ತಿದ್ದಾರೆ ಎಂದು ಛೇಡಿಸಿದ ಎಚ್‌ಡಿಕೆ, ಸಾರ್ವಜನಿಕವಾಗಿ ನಾಡಿನ ಜನರ ಹಣವನ್ನು ಲೂಟಿ ಹೊಡೆದು ಹೇಗೆ ರಾಜ್ಯದ ಅಭಿವೃದ್ಧಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಡಬಲ್ ಎಂಜಿನ್ ಸರ್ಕಾರ ಕೊಟ್ಟು ಜನ ಅಭಿವೃದ್ಧಿ ಆಗೋದನ್ನು ನೋಡುತ್ತಿದ್ದಾರೆ, ಕಾಂಗ್ರೆಸ್ ಕೂಡ ಕಡಿಮೆ ಇಲ್ಲ, ಎರಡು ರಾಷ್ಟ್ರೀಯ ಪಕ್ಷಗಳು ಹೈಕಮಾಂಡ್ ಸಂಸ್ಕೃತಿ ಇಟ್ಟುಕೊಂಡು ಬಂದಿವೆ. ಕಾಂಗ್ರೆಸ್‌ನವರು ಸಹ ರೀಡೂ ಹಗರಣದಲ್ಲಿ ಎಷ್ಟು ಲೂಟಿ ಮಾಡಿದ್ದಾರೆ, ಸಿದ್ದರಾಮಯ್ಯ ಕಾಲದಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದರು.
ತೆಲಂಗಾಣದಿಂದ ಪುರೋಹಿತರ ಆಗಮನ
ಎಚ್‌ಡಿಕೆ ಹಮ್ಮಿಕೊಂಡಿರುವ ಯಾಗದಲ್ಲಿ ಪಕ್ಕದ ತೆಲಂಗಾಣ ರಾಜ್ಯದ ನುರಿತ 300ಕ್ಕೂ ಹೆಚ್ಚು ಪುರೋಹಿತರು ಆಗಮಿಸಿದ್ದು, ಯಾಗಗಳನ್ನ ನಡೆಸುತ್ತಿದ್ದಾರೆ. ಗುರುವಾರ ರಾತ್ರಿಯೇ ತೆಲಂಗಾಣ ದಿಂದ ತೋಟದ ಮನೆ ಸೇರಿದ್ದಾರೆ. ಇವರೆಲ್ಲರೂ ಉಳಿದು ಕೊಳ್ಳಲು ತೋಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ತೆಲಂಗಾಣ ಮುಖ್ಯ ಮಂತ್ರಿ ಕೆ.ಸಿ.ಆರ್.ಚಂದ್ರಶೇಖರ್ ಹಾಗೂ ಕುಮಾರಸ್ವಾಮಿ ಅವರ ನಡುವೆ ಉತ್ತಮ ಸ್ನೇಹ ಬಾಂಧವ್ಯ ವಿರುವ ಕಾರಣ, ಸ್ವತಃ ಚಂದ್ರ ಶೇಖರ್ ಅವರೇ ಪುರೋಹಿತರನ್ನು ಅಲ್ಲಿಂದ ಕಳುಹಿಸಿಕೊಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.