ಲಕ್ಷಾಂತರ ರೂ. ಖರ್ಚಾದರೂ ಶುದ್ಧ ನೀರಿಲ್ಲ
| ನೀರಿನಲ್ಲಿ ಹೋಮ ಮಾಡಿದಂತಾಯಿತು ಸರ್ಕಾರಿ ಅನುದಾನ | ತೋನಸಿಹಾಳ ತಾಂಡಾದಲ್ಲಿ ಧೂಳು ಹಿಡಿದ ಘಟ
Team Udayavani, Feb 6, 2023, 12:04 PM IST
ದೋಟಿಹಾಳ: ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರಕಾರ ಹೊಸ ಹೊಸ ಯೋಜನೆ ಜಾರಿಗೆ ತಂದಿದೆ. ಆದರೆ ಅವುಗಳು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ಹೌದು, ತಾಲೂಕಿನ ಅನೇಕ ಹಳ್ಳಿಗಳಲ್ಲಿ ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಿರ್ಮಿಸಲಾದ ಶುದ್ಧ ನೀರಿನ ಘಟಕಗಳು ಹಲವು ವರ್ಷಗಳಾದರೂ ಆರಂಭವಾಗದೇ ಸರಕಾರದ ಲಕ್ಷಾಂತರ ರೂ. ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಸಮೀಪದ ಹೆಸರೂರು ಗ್ರಾಮದಲ್ಲಿ ಎರಡು ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಿಲಾಗಿದೆ. ಒಂದು ಉದ್ಘಾಟನೆಗೊಂಡು ಕೆಲವೇ ತಿಂಗಳಿನಲ್ಲಿ ಸ್ಥಗಿತಗೊಂಡಿದೆ. ಮತ್ತೂಂದು ಘಟಕ ನಿರ್ಮಾಣಕ್ಕೆ ಬಾಕ್ಸ್ ಇಟ್ಟು (ನಿರ್ಮಿಸಿ) ವರ್ಷಗಳಾದರೂ ಅದು ಕಾರ್ಯರೂಪಕ್ಕೆ ಬರದೇ ಹಾಳಾಗಿದೆ. ಇದೇ ರೀತಿ ತೋನಸಿಹಾಳ ತಾಂಡಾದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದರೂ ಜನರಿಗೆ ಮಾತ್ರ ಶುದ್ಧ ನೀರು ಸಿಗುತ್ತಿಲ್ಲ. ತಾಂಡಾದಲ್ಲಿರುವ ಎರಡು ಘಟಕಗಳು ಉದ್ಘಾಟನೆಯಾಗಿ ಹಾಳಾಗಿವೆ.
ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇ ಒಂದು ದೊಡ್ಡ ಸಾಧನೆ ಎಂಬಂತೆ ಜನಪ್ರತಿನಿ ಧಿಗಳು ಬಿಂಬಿಸುತ್ತಿದ್ದಾರೆ. ಆದರೆ ಅವುಗಳು ಇನ್ನೂ ಕಾರ್ಯರೂಪಕ್ಕೆ ಬಾರದೇ ಘಟಕದ ಯಂತ್ರಗಳು ಕೆಟ್ಟು ಮೂಲೆ ಸೇರಿವೆ. ತಾಲೂಕಿನ ಇಂತಹ ಅನೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿ ವರ್ಷಗಳಾದರೂ ಇನ್ನೂ ಆರಂಭವಾಗಿದೆ ಯಂತ್ಧೂಳು ತಿನ್ನುತ್ತಿವೆ.
ಹಳ್ಳಿಗಳ ಜನರ ಆರೋಗ್ಯಕ್ಕಾಗಿಸರಕಾರ ಫ್ಲೋರೈಡ್ ಮುಕ್ತ ನೀರನ್ನು ಕಲ್ಪಿಸಲು ಲಕ್ಷಾಂತರ ರೂ. ಹಣ್ಣ ಖರ್ಚು ಮಾಡಿ ಸಮಗ್ರ ಕುಡಿಯುವ ನೀರಿನ ಜಲ ನಿರ್ಮಲ ಯೋಜನೆ ಅನುಷ್ಠಾನಗೊಳಿಸಿದೆ. ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ಹೆಸರೂರ, ತೋನಸಿಹಾಳ ತಾಂಡಾ ಗ್ರಾಮಗಳು ಸೇರಿದಂತೆ ಅನೇಕ ಕಡೆಗಳಲ್ಲಿ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸಲಾಗಿದೆ. ಹಲವು ವರ್ಷಗಳಾದರೂ ಅದು ಜನರ ಉಪಯೋಗಕ್ಕೆ ಬರುತ್ತಿಲ್ಲ.
ತೋನಸಿಹಾಳ ತಾಂಡಾದಲ್ಲಿರುವ ಎರಡು ಶುದ್ಧ ನೀರಿನ ಘಟಕಗಳ ಪೈಕಿ ಒಂದು ಘಟಕ ಕೆಟ್ಟು ಹೋಗಿದ್ದು, ಇನ್ನೊಂದು ಘಟಕವನ್ನು ರಿಪೇರಿ ಮಾಡಿಸಿದ್ದೇವೆ. ಆದರೆ ಸಾರ್ವಜನಿಕರು ಶುದ್ಧ ನೀರಿನ ಘಟಕದಿಂದ ನೀರು ಒಯ್ಯಲು ಹಿಂಜರಿಯುತ್ತಿದ್ದಾರೆ.-ಅಮೀನ್ ಅಲಂದಾರ್, ಕೇಸೂರು ಗ್ರಾಪಂ ಪಿಡಿಒ
ಹೇಸರೂರು ಗ್ರಾಮದ ಜನತಾ ಬಡಾವಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತಿದೆ. ಇದನ್ನು ರಿಪೇರಿ ಮಾಡಿಸಲು ತಿಳಿಸಿದ್ದೇವೆ ಹಾಗೂ ಮುಖ್ಯ ರಸ್ತೆಯಲ್ಲಿರುವ ಇನ್ನೊಂದು ಘಟಕಕ್ಕೆ ಯಂತ್ರೋಪಕರಣ ಬರದ ಕಾರಣ ಹಾಳಾಗುತ್ತಿದೆ.-ಮುತ್ತಪ್ಪ ಛಲವಾದಿ, ದೋಟಿಹಾಳ, ಗ್ರಾಪಂ ಪಿಡಿಒ
ಸರ್ಕಾರ ಲಕ್ಷಾಂತರ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕಕ್ಕೆ ಯಂತ್ರವನ್ನು ಅಳವಡಿಸಲಾಗಿದೆ. ಶುದ್ಧೀಕರಣ ಘಟಕವು ಸಿದ್ಧವಾಗಿ ವರ್ಷಗಳಾದರೂ ಕಾರ್ಯಾರಂಭ ಮಾಡಿಲ್ಲ. ತಾಂಡಾದಲ್ಲಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಿ ಮೂರ್‍ನಾಲ್ಕು ವರ್ಷಗಳಾಗಿವೆ. ಆದರೆ ಶುದ್ಧೀಕರಣ ಘಟಕ ಕಾರ್ಯಾರಂಭವಾಗದೇ ಯಂತ್ರ ಹಾಳಾಗಿ ಮೂಲೆ ಸೇರಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿ ಕಾರಿಗಳು ಸರಕಾರದ ಯೋಜನೆಗಳನ್ನು ಜನರಿಗೆ ಸಿಗುವ ಸರಿಯಾದ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬುದೇ ಪ್ರಜ್ಞಾವಂತ ನಾಗರಿಕರ ಕಳಕಳಿಯಾಗಿದೆ.
ಮಲ್ಲಿಕಾರ್ಜುನ ಮೆದಿಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kushtagi: ವಸತಿ ಶಾಲೆಯಿಂದ ಪರಾರಿಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಪತ್ತೆ!
Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ
Kushtagi: ವಸತಿ ಶಾಲೆ ಆವರಣ ಗೋಡೆ ಜಿಗಿದು ಕಾಲ್ಕಿತ್ತ 4 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.