ಒಲಿಂಪಿಕ್ಸ್ ಬಳಿಕವೇ ಕ್ರೀಡಾ ಪ್ರಶಸ್ತಿಗೆ ಆಯ್ಕೆ
Team Udayavani, Jul 12, 2021, 11:38 PM IST
ಹೊಸದಿಲ್ಲಿ : ಪ್ರಸಕ್ತ ಸಾಲಿನ ರಾಷ್ಟ್ರೀಯ ಕ್ರೀಡಾ ಪುರಸ್ಕಾರಕ್ಕೆ ಈಗಾಗಲೇ ಬಹಳಷ್ಟು ಮಂದಿಯ ಹೆಸರನ್ನು ಸೂಚಿಸಲಾಗಿದೆ. ಖೇಲ್ರತ್ನ, ಅರ್ಜುನ, ದ್ರೋಣಾಚಾರ್ಯ ಮೊದಲಾದ ಪ್ರಶಸ್ತಿಗಳಿಗೆ ಅನೇಕ ಕ್ರೀಡಾ ಸಾಧಕರ ಹೆಸರು ನಾಮ ನಿರ್ದೇಶನಗೊಂಡಿದೆ. ಆದರೆ ಪ್ರಶಸ್ತಿಯ ಆಯ್ಕೆಗೆ ಈ ಬಾರಿಯ ಒಲಿಂಪಿಕ್ಸ್ ಸಾಧನೆಯನ್ನೂ ಮಾನದಂಡವಾಗಿ ಬಳಸಿಕೊಳ್ಳಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಹೀಗಾಗಿ ಟೋಕಿಯೊ ಒಲಿಂಪಿಕ್ಸ್ ಬಳಿಕವೇ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದೆ.
ಕ್ರೀಡಾ ಪ್ರಶಸ್ತಿಯನ್ನು ರಾಷ್ಟ್ರೀಯ ಕ್ರೀಡಾದಿನವಾದ ಆ. 29ರಂದು ನೀಡಲಾಗುವುದು. ಟೋಕಿಯೊ ಒಲಿಂಪಿಕ್ಸ್ ಜು. 23ರಿಂದ ಆ. 8ರ ತನಕ ನಡೆಯುವುದರಿಂದ ಕ್ರೀಡಾ ಪಟುಗಳ ಆಯ್ಕೆಗೆ ಸಾಕಷ್ಟು ಕಾಲಾವಕಾಶ ಸಿಗಲಿದೆ.
ವಿಳಂಬ ಸಾಧ್ಯತೆ
“ಸದ್ಯಕ್ಕೆ ನಾಮ ನಿರ್ದೇಶನ ಪ್ರಕ್ರಿಯೆಯ ಅಂತಿಮ ದಿನಾಂಕ ಮುಗಿದಿದೆ. ಸಾಕಷ್ಟು ಹೆಸರುಗಳು ನಮ್ಮ ಕೈ ಸೇರಿವೆ. ಆದರೆ ಒಲಿಂಪಿಕ್ಸ್ ಪದಕ ವಿಜೇತರನ್ನೂ ಆಯ್ಕೆಗೆ ಪರಿಗಣಿಸಲು ಕಳೆದ ಸಭೆಯಲ್ಲಿ ನಿರ್ಧ ರಿಸಲಾಗಿದೆ. ಒಲಿಂಪಿಕ್ಸ್ ಮುಗಿದು 10 ದಿನಗಳ ಒಳಗೆ ಆಯ್ಕೆ ಅಂತಿಮಗೊಂಡರೆ ಆ. 29ರಂದೇ ಪ್ರಶಸ್ತಿ ನೀಡಲಾಗುವುದು. ಇಲ್ಲವಾದರೆ ಕೆಲವು ದಿನ ವಿಳಂಬ ವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia: ಪರ್ತ್ಗೆ ಆಗಮಿಸಿದ ರೋಹಿತ್ ಶರ್ಮ
Pro Kabaddi League: ಬೆಂಗಾಲ್ ವಾರಿಯರ್ ಮೇಲೆ ಪುಣೇರಿ ಪಲ್ಟಾನ್ ಸವಾರಿ
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.