ಅದ್ದೂರಿಯಾಗಿ ನೆರವೇರಿದ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವ
Team Udayavani, Feb 16, 2022, 8:04 PM IST
ಹನುಮಸಾಗರ : ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದ ಐತಿಹಾಸಿಕ ಹಿನ್ನಲೆಯಿರುವ ಶ್ರೀಬನಶಂಕರಿ ದೇವಿ ಜಾತ್ರಾ ಮಹೋತ್ಸವದ ರಥೋತ್ಸವ ಸಕಲಮಂಗಲ ವಾದ್ಯಗಳೊಂದಿಗೆ ಬುಧವಾರ ಸಾಯಂಕಾಲ ಭಾರಿ ವಿಜ್ರಂಬಣೆಯಿಂದ ನಡೆಯಿತು .
ವೇ.ಮೂ. ವಿವೇಕಾನಂದ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಗಾಯಿತ್ರಿ ಹೋಮ, ಪಲ್ಲಕ್ಕಿ ಉತ್ಸವ, ಉಚ್ಚಯ್ಯ ಕಾರ್ಯಕ್ರಮಗಳು ಜರುಗಿದವು.
ಶ್ರೀಬನಶಂಕರಿ ದೇವಿ ಈ ಭಾಗದಲ್ಲಿ ವಿಶೇಷ ಪಡಾಡಗಳಿಂದ ಪ್ರಸಿದ್ಧಿ ಹೊಂದಿದ್ದು ವಿಶೇಷ.
ಭಜನೆ:- ವರ್ಷವಿಡಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ದೇವಿಗೆ ಅಭಿಷೇಕ ಭಜನೆ ಹಾಗೂ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಜರುಗುವವು.
ಪಲ್ಲಕ್ಕಿ ಉತ್ಸವ:- ವರ್ಷವಿಡಿ ಶ್ರೀಬನಶಂಕರಿ ದೇವಸ್ಥಾನದಲ್ಲಿ ಪ್ರತಿ ಪೌರ್ಣಮಿಯ ದಿನದಂದು ಪಲ್ಲಕ್ಕಿ ಉತ್ಸವ ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗುವುದು ವಿಷೇಶ.
ಈ ಜಾತ್ರೆಯ ಅಂಗವಾಗಿ ರವಿವಾರ ಸಂಜೆ ರಥೋತ್ಸವದ ಕಳಸದ ಮೇರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಲವು ವಾದ್ಯಗಳೊಂದಿಗೆ, ಭಜನೆಯೊಂದಿಗೆ ನಡೆಸಲಾಯಿತು.
ಭಾರತ ಹುಣ್ಣುಮೆಯ ಜಾತ್ರೆಯ ದಿನವಾದ ಇಂದು ಬೆಳಿಗ್ಗೆಯಿಂದಲೆ ಬನಶಂಕರಿ ದೇವಿಗೆ ಅಭಿಶೇಕ , ಹೋಮ ಹವನಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ದೇವಾಂಗ ಸಮಾಜದ ಅಧ್ಯಕ್ಷ ಅಶೋಕ ಸಿನ್ನೂರ, ವೀರಪ್ಪ ಸಿನ್ನೂರ, ರಾಮನಗೌಡ, ಶಂಕ್ರಪ್ಪ ಸಪ್ಪಂಡಿ, ಬಸವರಾಜ ಸಿನ್ನೂರ, ರವಿ ಸಿನ್ನೂರ, ಮಹಾಂತೇಶ ಅಗಸಿಮುಂದಿನ, ಶ್ರೀನಿವಾಸ ಸಿನ್ನೂರ, ಮಹೇಶ ಹುಲಮನಿ, ರಾಘವೇಂದ್ರ, ಹನಮಂತಗೌಡ ಸಿನ್ನೂರ ಬಸವರಾಜ ಸಿನ್ನೂರ, ರುದ್ರಗೌಡಗೌಡಪ್ಪನವರ, ದೆವಸ್ಥಾನದ ಅರ್ಚಕರಾದ ರಾಘವೆಂದ್ರ ಸಿನ್ನೂರ, ಮಂಜುನಾಥ ಸಿನ್ನೂರ, ರಾಮನಗೌಡ ಸಿನ್ನೂರ, ಸೇರಿದಂತೆ ಪ್ರಮುಖರು ಇದ್ದರು ಬನಶಂಕರಿ ದೇವಿಯ ರಥೋತ್ಸವದ ಹಗ್ಗವನ್ನು ಮಡಿಕ್ಕೇರಿ ಗ್ರಾಮದ ಮೂಲಕ ಮೆರವಣಿಗೆಯಲ್ಲಿ ಬಂದ ಬಳಕ ಬುಧವಾರ ಸಾಯಂಕಾಲ ಬನಶಂಕರಿ ರಥೋತ್ಸವದಲ್ಲಿ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರ ಪಾಲ್ಗೊಂಡರು.
ಈ ರಥೋತ್ಸವದಲ್ಲಿ “ಬನಶಂಕರಿ ನಿನ್ ಪಾದಕ್ ಶಂಬೂಕೋ” ಎಂಬ ವೇದಘೋಷಣೆ ಭಕ್ತರ ಕೂಗು ಮುಗಿಲು ಮುಟ್ಟಿತು ರಥೋತ್ಸವದ ಬಳಿಕ ಬಾನಂಗಳದಲ್ಲಿ ಪಟಾಕ್ಷಿಗಳ ಬಣ್ಣಬಣ್ಣದ ಚಿತ್ತಾರ ಜನರನ್ನು ಆಕರ್ಷಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡಕ್ಕಾಗಿ ಕೈಗೊಂಡ 5 ನಿರ್ಣಯಗಳೇನು ಗೊತ್ತಾ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.