Ayodhya: ಶ್ರೀರಾಮ ಪ್ರಾಣ ಪ್ರತಿಷ್ಠೆ: ಅಭಿಷೇಕಕ್ಕೆ ಕಾವೇರಿ ತೀರ್ಥ
Team Udayavani, Jan 12, 2024, 1:00 AM IST
ಮಂಗಳೂರು: ಅಯೋಧ್ಯೆ ಶ್ರೀರಾಮ ಕ್ಷೇತ್ರ ಪ್ರಾಣಪ್ರತಿಷ್ಠೆಯು ಜ. 22ರಂದು ನಡೆಯಲಿದ್ದು, ಅದರ ಸಮಾರೋಪದಂದು ಅಭಿಷೇಕ ಮಾಡಲು ಕಾವೇರಿ ಪವಿತ್ರ ತೀರ್ಥವನ್ನು ಕರ್ನಾಟಕದಿಂದ ಅಯೋಧ್ಯೆಗೆ ಕೊಂಡೊಯ್ಯಲಾಗುವುದು. ಕರ್ನಾಟಕ ಅಖೀಲ ಭಾರತೀಯ ಸಂತ ಸಮಿತಿಯಿಂದ ಈ ಕಾರ್ಯ ನೆರವೇರಲಿದೆ ಎಂದು ಸಮಿತಿಯ ರಾಜ್ಯಾಧ್ಯಕ್ಷ, ಮಂಗಳೂರು ಓಂ ಶ್ರೀ ಮಠಾಧೀಶ ಶ್ರೀ ವಿದ್ಯಾನಂದ ಸರಸ್ವತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಕಾವೇರಿ ಪವಿತ್ರ ತೀರ್ಥವನ್ನು ಜ. 6ರಂದು ತಲಕಾವೇರಿಯಲ್ಲಿ ವಿಧಿ ಪ್ರಕಾರ ಶೇಖರಣೆ ಮಾಡಿ, ವಿಶೇಷ ಪೂಜೆ, ಹವನ ಸಲ್ಲಿಸಲಾಗಿದೆ. ಬಳಿಕ ಮೈಸೂರಿನಲ್ಲಿರುವ ವಿವಿಧ ಮಠಗಳಲ್ಲಿ ವಿಶೇಷ ಸ್ವೀಕರಣಾ ಪೂಜೆ ಸಲ್ಲಿಸಿ, ಬೆಂಗಳೂರು ಕೈಲಾಸ ಆಶ್ರಮದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಜ. 10ರಂದು ಸುತ್ತೂರು ಮಠದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನಾ ಅನುಗ್ರಹವನ್ನು ನೀಡಿದ್ದಾರೆ. ಅದೇ ದಿನ ಸಂಜೆ ಮಂಗಳೂರು ಓಂ ಶ್ರೀ ಮಠದಲ್ಲಿ ವಿಶೇಷ ಪೂಜಾದಿಗಳನ್ನು ನೆರವೇರಿಸಲಾಗಿದೆ ಎಂದರು.
ಜ. 12ರಂದು ಮಂಗಳೂರು ಓಂ ಶ್ರೀ ಮಠದ ಮೂಲ ಕ್ಷೇತ್ರವಾದ ಶ್ರೀಶೈಲಂ ದೇವಿ ಕ್ಷೇತ್ರದಲ್ಲಿ ಹಾಗೂ ಮೂಲಮಠದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುವುದು. ಸಂಜೆ 6 ಗಂಟೆಯಿಂದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ ಅವರ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾವೇರಿ ತೀರ್ಥ ಕಲಶ ಕುಂಭಕ್ಕೆ ವಿಶೇಷ ಪೂಜಾದಿಗಳು ನಡೆಯಲಿವೆ ಎಂದರು.
ಜ. 18ಕ್ಕೆ ಅಯೋಧ್ಯೆಗೆ ಕೊಂಡೊಯ್ಯುವ ಕಾವೇರಿ ತೀರ್ಥ ಕಳಶ ಕುಂಭಕ್ಕೆ ಜ. 13ರಿಂದ 18ರ ವರೆಗೆ ಮಂಗಳೂರು ಓಂ ಶ್ರೀ ಮಠದಲ್ಲಿ ವಿಶೇಷ ಪೂಜಾದಿಗಳು ನಡೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಬಳಿಕ ಅಯೋಧ್ಯೆಗೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.
ಸಂತ ಸಮಿತಿ ಸಹ ಅಧ್ಯಕ್ಷೆ, ಓಂ ಶ್ರೀ ಮಠದ ಮಾತಾಶ್ರೀ ಶಿವ ಜ್ಞಾನಮಹಿ ಸರಸ್ವತಿ, ಕೋಶಾಧಿಕಾರಿ ಕಾಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸರಸ್ವತಿ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಉಡುಪಿಯ ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀ ಸಾಯಿ ಈಶ್ವರ್ ಗುರೂಜಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.