Shri Ram ಗುಣಗಣಧಾಮಿ: ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿ

ನಮ್ಮ ಆರಾಮ ಶಬ್ದದಲ್ಲಿ ರಾಮನಿದ್ದಾನೆ ಎಂಬುದನ್ನೂ ಮರೆಯದೆ...

Team Udayavani, Jan 20, 2024, 5:30 AM IST

1-wewqewqeq

 ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಕರ್ಕಿ, ಉತ್ತರ ಕನ್ನಡ

ನಮ್ಮೆಲ್ಲರ ಆರಾಧ್ಯದೈವ ಶ್ರೀರಾಮ ಸಕಲ ಸದ್ಗುಣ ಧಾಮ ಎಂಬುದು ನಮ್ಮೆಲ್ಲರಿಗೆ ತಿಳಿದಿದೆ. ಪ್ರಭು ಶ್ರೀರಾಮಚಂದ್ರನ ಚರಿತೆಯನ್ನು ನೀಡಿದ ಶ್ರೀ  ವಾಲ್ಮೀಕಿ ಮಹರ್ಷಿ ಯವರು ಶ್ರೀಮದ್‌ ರಾಮಾಯಣ ದಲ್ಲಿ ಶ್ರೀರಾಮನನ್ನು ಹೊಗಳಿ ವರ್ಣಿಸಿ ದ್ದಾನೆ. ಭಾರತೀಯರಾದ ನಮಗೆ ರಾಮಾ ಯಣವು ಮಹಾಕಾವ್ಯ ಮಾತ್ರವೇ ಅಲ್ಲ, ಅದು ಮಾನವನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಲೇ ಬೇಕಾದ ಸದ್ಗುಣಗಳ ಪರಿಚಯವನ್ನು ಒದಗಿಸುವ ಮಹಾನ್‌ ಗ್ರಂಥವೂ ಹೌದು. ಹೀಗಾಗಿಯೇ ವಾಲ್ಮೀಕಿ ಗಳು ಶ್ರೀರಾಮನನ್ನು “ರಾಮೋ ವಿಗ್ರಹ ವಾನ್‌ ಧರ್ಮಃ’ ಎಂದು ಹೊಗಳಿದ್ದಾರೆ. ರಾಮನ ಜೀವನ ವೆಂದರೆ ಅದು ಮೂರ್ತಿಮತ್ತಾದ ಧರ್ಮದ ಸ್ವರೂಪ ಎಂದು, ಧರ್ಮ ಎಂಬುದಕ್ಕೆ ಧರಿಸಲು ಅನುಸರಿಸಲು ಯೋಗ್ಯವಾದದ್ದು ಎಂದು ಅರ್ಥ.

ಹೀಗಾಗಿಯೇ “ಧಾರಣಾತ್‌ ಧರ್ಮ ಇತ್ಯಾಹುಃ’ ಎಂಬ ವಚನ ಪ್ರಸಿದ್ದವಾಗಿದೆ. ಯಾವು ದನ್ನೂ ಧರಿಸಿ ಅನುಕರಿಸಿ ನಾವೂ ಚೆನ್ನಾಗಿ ಬಾಳಿ ಇತರರು ಚೆನ್ನಾಗಿ ಬದು  ಕಲು ಅವಕಾಶಗಳನ್ನು ಕಲ್ಪಿ ಸುತ್ತಾ ಭಗವ ತ್ತತೆ  ಯನ್ನು ಹೊಂದುವ ಕಾರ್ಯ ವಿಧಾನಕ ಕ್ಕೆ ಧರ್ಮ ಎಂದು ಹೆಸರು. ಅಂತಹ ತಾತ್ವಿಕ ಜೀವನವು ಶ್ರೀರಾಮನ  ದಾಗಿತ್ತು ಎಂಬುವುದು ಗಮ ನಾರ್ಹ. ಭಾರತೀಯ ಋಷಿಮುನಿಗಳು ಯಾವ ಆ ಪರ ತತ್ವದ ಚಿಂತನೆಯನ್ನು ಮಾಡಿ ರಮ ಮಾಣ ರಾಗುತ್ತಾ ಆನಂದ ತುಂದಿಲ ರಾಗು  ತ್ತಿದ್ದರೂ ಆ ಪರಮೈಶ್ವರ್ಯವನ್ನು ನಮ್ಮ ಪೂರ್ವಿ ಕರು ರಾಮನೆಂದು ಕರೆದರು. ತನ್ನಿಮಿತ್ತವಾಗಿಯೇ “ರಮಂತೆ ಯೋಗಿನೊ ಅಸ್ಮಿನ್‌ ಸತ್ಯಾನಂದೆ ಚಿದಾನ್ಮತಿ. ಅತಃ ರಾಮ ಪದೆನಾ ಸೌ ಪರಬ್ರಹ್ಮಾಭಿಧೀಯತೇ’ ಎಂದು ರಾಮ ಶಬ್ದದ ನಿರ್ವಚನವನ್ನು ಮಾಡಿದ್ದಾರೆ. ಯಾವ ಭಗವತತ್ವದಲ್ಲಿ ತಲ್ಲೀನ ರಾಗಿ ಆ ತತ್ವವನ್ನು ರಾಮನೆಂದು ಕರೆದರೂ ಆ ರಾಮ ನಾಮದಿಂದಲೂ ನಾವು ಕೂಡಾ ಸಚ್ಚಿದಾನಂದ ಸ್ವರೂಪವಾದ ಆ ಪರಮಾತ್ಮನ ಅನುಭವವನ್ನೂ ಪಡೆಯಲು ಸಾಧ್ಯವೆಂದು ಮನಗಂಡು ನಮ್ಮ ಪೂರ್ವಿಕರು ರಾಮನಾಮ ಮಂತ್ರಕ್ಕೆ ಹೆಚ್ಚು ಪ್ರಾಶಸ್ತÂವನ್ನು ಕೊಟ್ಟಿರುವುದನ್ನು ಕಾಣಬಹುದಾಗಿದೆ.
ರಾಮನ ಅಯನ(ಮಾರ್ಗ) ರಾಮಾಯಣ. ಅಂದರೆ ಪ್ರಭು ಶ್ರೀರಾಮಚಂದ್ರನ ಜೀವನಗಾಥಾ. ಅವನು ತನ್ನ ಕಾಲಾ ವಧಿಯಲ್ಲಿ ಬದುಕಿದ ಪದ್ದತಿ ಯ ವರ್ಣನೆಯೇ ರಾಮಾ ಯಣವಾಗಿದೆ. ಅದರಲ್ಲಿ ನಾವು ಶ್ರೀರಾಮನ ಬಾಲ್ಯದ ಸಹಜ ಮನ ಮೋಹಕ ಮುಗ್ಧ ನಡತೆ, ಗುರು ಭಕ್ತಿ, ಪಿತೃಭಕ್ತಿ, ಮಾತೃ ಭಕ್ತಿ..ಏಕಪತ್ನಿವ್ರತಿತ್ವ, ಭಾೃತ್ರಪ್ರೇಮ, ಪ್ರಜಾ ಜನ ರಲ್ಲಿ ಸುಹೃದಯತ, ಗೆಳೆಯರಲ್ಲಿ ಮೈತ್ರಿ, ಸಾಧು ಮುನಿಜನರಲ್ಲಿ ಗೌರವಪೂರ್ಣ ನಡೆನುಡಿ, ದುಷ್ಟ  ನಿಗ್ರಹದಲ್ಲಿ ಧಾಷ್ಟéì ಮುಂತಾದ ಮಾನವೀಯ ಮೌಲ್ಯಯುತವಾದ ನಡತೆಯನ್ನು ಕಾಣಬಹುದಾಗಿದೆ.

ತನ್ನಿಮಿತ್ತವೇ ಶ್ರೀರಾಮ ನನ್ನು ನಮ್ಮ ಹಿರಿಯರು ಮರ್ಯಾದಾ ಪುರುಷೋತ್ತಮನೆಂದು ಕರೆದರು. ಮರ್ಯಾದೆ ಎಂದರೆ ಸೀಮೆ ಹೇಗೆ ಇರಬೇಕು. ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎಂಬ ಪರಿಜ್ಞಾನ. ಅಂತಹ ಸಜ್ಜನಿಕೆಯ ಪರಿಧಿಯಲ್ಲಿ ಬದುಕಿದ ಪುರುಷರೆಲ್ಲರಿಗಿಂತಲೂ ಯಾವನು ಉತ್ತಮನೋ ಅವನೇ ಮರ್ಯಾದಾ ಪುರುಷೋತ್ತಮ. ಅಂತಹ ಗುಣಗಳನ್ನು ಶ್ರೀರಾಮಚಂದ್ರನ ಜೀವನದ ಹೆಜ್ಜೆ ಹೆಜ್ಜೆಗಳಲ್ಲಿ ಕಾಣಬಹುದಾಗಿದೆ.

ನಮ್ಮ ನಡತೆಯು ಶ್ರೀರಾಮನಂತೆ ಆಗಬೇಕಾದರೆ ಶ್ರೀ ರಾಮನಾಮ ಜಪ ಅನಿವಾರ್ಯ. ಹೀಗಾಗಿಯೇ ದಾಸ  ಶ್ರೇಷ್ಠರು, “ರಾಮಮಂತ್ರವ ಜಪಿಸೋ ಹೇ ಮನುಜ’ ಎಂದು ಪ್ರೇರೇ ಪಿಸಿದ್ದಾರೆ. ಕಾರಣ ರಾಮನಾಮದ ದಿವ್ಯತೆ ಯನ್ನು ಅರಿತ ಪರಮೇಶ್ವರನು ಈ ಮಂತ್ರ ವನ್ನು ತನ್ನ ಸತಿಯಾದ ಪಾರ್ವತಿಗೆ ಉಪ ದೇಶಿ ಸಿದ ಎಂಬುದನ್ನೂ ಕೂಡ “ಸೋಮ ಶೇಖರ ತನ್ನ ಸತಿಗೆ ಹೇಳಿದ ಮಂತ್ರ’ ಎಂದು ಉಲ್ಲೇಖೀಸಿದ್ದಾರೆ. ರಾಮ ನಾಮ ಜಪದಿಂದ ನಮ್ಮ ಕಷ್ಟಗಳು ದೂರ   ವಾಗುವುದರೊಂದಿಗೆ ಸರ್ವ ಸಂಪದಗಳು ಸಹಜ  ವಾಗಿಯೇ ಪ್ರಾಪ್ತವಾಗುತ್ತವೆ. ರಾಮ ರಕ್ಷಾಸ್ತೋತ್ರದಲ್ಲಿ “ಆಪದಾ ಮಪ ಹರ್ತಾ ರಂ ದಾತಾರಂ ಸರ್ವ ಸಂಪದಾಂ’ ಎಂದು ಸಾರಿದ್ದು ಸ್ಮರಣೆಗೆ ಯೋಗ್ ವಾಗಿದೆ.

ನಮ್ಮ ಹಿರಿಯರು ರಾಮರಾಜ್ಯದ ಪರಿಕಲ್ಪನೆಯನ್ನು ಹೊಂದಿದ್ದರು. ಈ ರಾಮರಾಜ್ಯದ ಪರಿಕಲ್ಪನೆಯು ಅಯೋಧ್ಯೆಯಲ್ಲಿ ಶ್ರೀರಾಮನ ಸ್ಥಾಪನೆ ಯೊಂದಿಗೆ ನಾವೂ ಕೂಡಾ ಶ್ರೀ ರಾಮನು ರಾರಾಜಿಸಿದಂತೆ ನಮ್ಮ ನಡೆನುಡಿಗಳಲ್ಲಿ ಅವನ ಆಚರಣೆಯನ್ನೇ ಅನುಕರಿಸಿದಲ್ಲಿ ರಾಮರಾಜ್ಯದ ಕಲ್ಪನೆ ವಾಸ್ತವವಾಗಿ ಮಾನವನ ಜೀವನ ಪರಿ ಪೂರ್ಣವಾಗಲು ಸಾಧ್ಯ. ವಾಲ್ಮೀಕಿ ಮಹರ್ಷಿಗಳು ಶ್ರೀಮದ್‌ ರಾಮಾಯಣದಲ್ಲಿ ವಿಶೇಷವಾಗಿ ಎಲ್ಲಿಯೂ ಶ್ರೀರಾಮನನ್ನು ಅತೀ ಮಾನವನಾಗಿ ವೈಭವೀ ಕರಿಸುತ್ತಾ, ಅವನು ತೋರಿಸಿದ ಪವಾಡಗಳನ್ನು ಹಾಡಿ ಹೊಗಳಲೇ ಇಲ್ಲ. ಕೇವಲ ಅವನು ಮಾನವೀಯ ಮೌಲ್ಯಗಳೊಂದಿಗೆ ಬದುಕಿನಲ್ಲಿ ಸಾಗುತ್ತಾ ಮಾನವತ್ವದಿಂದ ಮಾಧವತ್ವವನ್ನು ಪಡೆದು ಉತ್ತುಂಗಕ್ಕೆ ಏರಿದನ್ನು ಸಾರಿದ್ದಾರೆ. ಈ ವಿಧದ ನಡತೆಯನ್ನು ನರರಾದ ನಾವು ಅನುಸರಿಸಿದರೆ ನಾರಾಯಣನಾಗಲು ಸಾಧ್ಯ. ಜೀವ ಶಿವನಾಗಲೂ ಬಹುದು ಎಂಬುದನ್ನು ಬಿಂಬಿಸಿ ಔನ್ನತ್ಯವನ್ನು ಪಡೆಯಲು ಮಾರ್ಗ ದರ್ಶನವನ್ನೂ ಮಾಡಿದ್ದಾರೆ.

ಪ್ರಸ್ತುತ 500 ವರ್ಷಗಳ ಇತಿಹಾಸದಲ್ಲಿ ಶ್ರೀರಾಮನಿಗಾಗಿ ಅಯೋಧ್ಯೆಯಲ್ಲಿ ಮಂದಿರದ ಕನಸನ್ನೂ ಹೊತ್ತು
ಅನೇಕ ಹೋರಾಟಗಳನ್ನೂ ಮಾಡುತ್ತಾ ಇತ್ತೀಚಿನ ವರ್ಷಗಳಲ್ಲಿ ಆ ಕನಸು ನನಸಾಗುವ ಸಂದರ್ಭದಲ್ಲಿ ನಾವೆಲ್ಲರೂ ಸಾಕ್ಷಿಗಳಾಗುತ್ತಿದ್ದೇವೆ ಎಂಬುದು ಅತ್ಯಂತ ಅಭಿಮಾನಾಸ್ಪದ ವಿಷಯವಾಗಿದೆ. ಈ ಕಾರ್ಯದಲ್ಲಿ ಮುಂದಾಳತ್ವವನ್ನೂ ವಹಿಸಿ ಶ್ರಮಿಸಿದ ಸರ್ವರೂ ಗೌರವಾನ್ವಿತರಾಗಿದ್ದಾರೆ. ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಶ್ರೀ ರಾಮಚಂದ್ರನಿಗೆ ಶರಣಾಗುತ್ತಾ ನಮ್ಮ ಆರಾಮ ಶಬ್ದದಲ್ಲಿ ರಾಮನಿದ್ದಾನೆ ಎಂಬುದನ್ನೂ ಮರೆಯದೆ ರಾಮನನ್ನು ನೆನೆಯುತ್ತಾ ಆರಾಮವಾಗಿದ್ದು ನಮ್ಮ ಬಾಳನ್ನು ಭವ್ಯವಾಗಿಸಿಕೊಳ್ಳೋಣ.

ಟಾಪ್ ನ್ಯೂಸ್

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5-agri

Bengaluru: ಸಾವಯವ, ಸಿರಿಧಾನ್ಯ ಉತ್ಪನ್ನಕ್ಕೆ ಮುಗಿಬಿದ್ದ ಜನ

ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು

9-bng

Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ

8-bng

Bengaluru: ಕದ್ದ ಮೊಬೈಲ್‌ ಕೊರಿಯರ್‌ ಮೂಲಕ ಕೇರಳಕ್ಕೆ ರವಾನೆ!

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.