Literature: ಸಂಸ್ಕಾರ ಸಾಹಿತ್ಯದ ಸಿರಿತುಪ್ಪೆ ಬನ್ನಂಜೆ ಬಾಬು ಅಮೀನ್
Team Udayavani, Dec 17, 2023, 12:56 AM IST
ಹಿರಿಯ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅವರು 80 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಭಿನಂದನ ಸಮಿತಿಯು ಬನ್ನಂಜೆಯ ನಾರಾಯಣಗುರು ಸಭಾಂಗಣದಲ್ಲಿ ಡಿ.17ರಂದು ಸಿರಿತುಪ್ಪೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬೆಳಗ್ಗೆ 8.45 ರಿಂದ ವಿಚಾರ ಗೋಷ್ಠಿ, ಯಕ್ಷಗಾನ, ಜಾನಪದ ವೈವಿಧ್ಯ ಮತ್ತಿತರ ಕಾರ್ಯಕ್ರಮಗಳಿರಲಿವೆ.
ಬದುಕಿನ ಬಹುಭಾಗವನ್ನು ಬಹುಸಂಸ್ಕೃತಿಯು ಆವರಿಸಿ ಕೊಂಡಿರುವ ಕಾಲಘಟ್ಟದಲ್ಲಿ ಮೌಖೀಕ ಪರಂಪರೆಯ ನೆಲ ಮೂಲದ ಕಲೆ ಸಂಸ್ಕೃತಿಯನ್ನು ತನ್ನ ಸಾಹಿತ್ಯ ಮತ್ತು ವ್ಯಕ್ತಿತ್ವದಲ್ಲಿ ಅಳವಡಿಸಿಕೊಂಡ ಬನ್ನಂಜೆ ಬಾಬು ಅಮೀನರು ಬಾಳಯಾನದ 80 ಸಂವ ತ್ಸರಗಳು ಸಂಪನ್ನಗೊಂಡಿದೆ. ಪ್ರಾಜ್ಞರಾಗಿ, ಜಾನಪದ ಜಂಗಮನಾಗಿ, ಸಾಹಿತ್ಯಿಕ ಕೃಷಿ ಯಲ್ಲಿ ತೊಡಗಿದವರು. ಭವಿಷ್ಯತ್ತಿಗೆ ಯೋಗ್ಯವೆನಿಸುವ ಫಲವತ್ತಾದ ಫಸಲಿನ “ನುಡಿಸಿರಿ’ ಎನ್ನುವಷ್ಟು ಇವರ ಬರಹಗಳು ಸ್ವೀಕಾ ರಾರ್ಹವಾಗಿವೆ.
ಜನಪದ ಬದುಕು, ಜಾನಪದ ಸಾಹಿತ್ಯ, ಗರೋಡಿ ಅಧ್ಯಯನ,ದೈವಾರಾಧನೆಯ ಕುರಿತು ತಳಮಟ್ಟದ ಚಿಂತನೆ ನಡೆಸಿದ ವಾಸ್ತವವಾದಿ ವಿದ್ವಾಂಸರು. ಯಕ್ಷಗಾನ, ಶನಿಕಥೆ, ತಾಳಮದ್ದಲೆಯಂತಹ ಸಾಂಸ್ಕೃತಿಕ ಸಂಗತಿಗಳ ಬಹು ರೂಪಿ ಸಂಗಾತಿಯೂ ಹೌದು. ಸೇವಾ ಚಟುವಟಿಕೆಗಳಿಗೆ ಸಂಘಟನಾತ್ಮಕ ಸಂಚಲನ ನೀಡಿದ ನೇತಾರರೂ ಹೌದು.
ಸೂರ್ಯನಿಗೇ ಬೇರೆ ದೀವಟಿಗೆ ಬೇಕೆ..? ತನ್ನದೇ ವಿವೇಚನಾ ವ್ಯಾಪ್ತಿಯಲ್ಲಿ, ನಿರ್ಧಾರಕ ಸಾಮರ್ಥ್ಯದಲ್ಲಿ, ಜ್ಞಾನಾನುಭವದ ಆಧಾರದಲ್ಲಿ ಜಾನಪದ ಅವತರಣಿಕೆಯಲ್ಲಿ ಅಪರೂಪದ, ಅನುರೂಪದ ಹೊತ್ತಗೆಗಳನ್ನು ಹೊರತಂದವರು ಇವರು.
ನೆಲೆ ನಿಂತ ನೆಲವನ್ನು ಒಳ್ಳೆಯ ಸಂಸ್ಕಾರದಿಂದ ಬೆಳಗ ಬೇಕೆನ್ನುವ ಆಶಯಗಳು ಇವರ ಕೃತಿಗಳದ್ದು. ಇದೊಂದು “ಪರ್ವಕೃತಿ’ ಎಂದು ಪ್ರೊ| ಅಮೃತ ಸೋಮೇಶ್ವರ ನುಡಿದಿರುವ, ಪ್ರೊ| ಮೋಹನ್ ಕೋಟ್ಯಾನ್ ಜತೆಗೂಡಿ ಇವರು ಬರೆದ “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ’ ಮಹತ್ವದ ಸಂಗತಿಗಳನ್ನು ದಾಖಲಿಸಿದ ಮೇರು ಕೃತಿ. ಪೂ-ಪೊ¨ªೊಲ…, ಮಾನೆಚ್ಚಿ, ದೈವಗಳ ಮಡಿಲಲ್ಲಿ, ಉಗುರಿಗೆ ಮುಡಿಯಕ್ಕಿ, ನುಡಿಕಟ್ಟ್, ತುಳುನಾಡ ದೈವಗಳು-ಸಾಂಸ್ಕೃತಿಕ ವಿಶ್ಲೇಷಣೆ, ತುಳುವೆರೆ ಮದಿಮೆ, ಗರೋಡಿ ಒಂದು ಚಿಂತನೆ, ದೈವನೆಲೆ, ಆಟಿ-ಸೋಣ, ಸಮಗ್ರ ಕೋಟಿ ಚೆನ್ನಯ-ಇವರ 21 ಕೃತಿಗಳು ಶೋಧ ಪ್ರಜ್ಞೆಯ ಪ್ರತೀಕಗಳಾಗಿವೆ.
ಜೀವಂತಿಕೆಯೆ ಉತ್ಸಾಹ, ಕ್ರಿಯಾಶೀಲತೆ ಮತ್ತು ಸ್ಪಂದನೆ ಅವರ ವಿಶೇಷತೆ. ಸುಮ್ಮನಿದ್ದದ್ದೇ ಕಡಿಮೆ, ಸುದ್ದಿಯಲ್ಲಿದ್ದದ್ದೇ ಹೆಚ್ಚು. ತಾನು ಹಂಬಲಿಸುವ ವರ್ತಮಾನದ ಬದುಕಿಗೆ ಅವರು ಬಾಧ್ಯರು. ಆರ್ಥಿಕ ಲಾಭ, ಅಧಿಕಾರ, ಅಂತಸ್ತು ಇಂತವುಗ ಳಿಂದ ಅಂತರ ಕಾಯ್ದುಕೊಳ್ಳುವ ತಮ್ಮ ನಿಲುವುಗಳಿಂದ ಏನನ್ನು ಕಳೆದು ಕೊಂಡಿರಬಹುದೋ ಅದಕ್ಕಿಂತ ಶ್ರೇಷ್ಠವಾದ ಗೌರವ, ಜನ ಮನ್ನಣೆ ಗಳಿಸಿದವರು. ಇದಲ್ಲವೇ ಸಾಹಿತಿಗೊಲಿಯ ಬೇಕಾದ ಶ್ರೇಷ್ಠ ಪ್ರಶಸ್ತಿ, ನಿಜವಾದ ಗೌರವ?
ಸಾಮಾನ್ಯವಾಗಿ ಹುಟ್ಟಿ ಅಸಾಮಾನ್ಯವಾಗಿ ಬೆಳೆಯುವುದೇ ಸಾಧನೆ ಎನ್ನುವುದಾದರೆ ಆ ಎಲ್ಲ ಅರ್ಹತೆಗಳು ಬನ್ನಂಜೆ ಬಾಬು ಅಮೀನರಲ್ಲಿದೆ. ಸೃಜನಶೀಲ, ರಚನಾತ್ಮಕ ಮನಸ್ಸಿನ ಈ ಜೀವಕ್ಕೆ ಛಲ ಮತ್ತು ಆತ್ಮವಿಶ್ವಾಸವು ದೈವದತ್ತವಾದುದು. ತಮ್ಮ ನಡೆ ನುಡಿ, ಸಾಹಿತ್ಯಗಳಲ್ಲಿ ಇತರರನ್ನು ಅನುಕರಿಸುವ ಜಾಯಮಾನವೇ ಇವರಿಗಿಲ್ಲ. ಅವರೇನಿದ್ದರೂ ತುಳು ಜಾನಪದ ಜಗತ್ತಿನ ನೈಜ, ಮೂಲ ಉತ್ಪನ್ನ.
ಬೆಳವಣಿಗೆಗೆ ಬುಡವಾಗಿ, ಒಗ್ಗಟ್ಟಿಗೆ ಬಲವಾಗಿ ಮುನ್ನುಡಿ, ಮುಂದಡಿಯಿಡುವ ಕಾರಣಕ್ಕಾಗಿ ಅತ್ಯಾಪ್ತ ಪ್ರೀತಿಯಲ್ಲಿ ಬಾಬಜ್ಜ, ಬಾಬು ಮಾಮು, ಬಾಬಣ್ಣ… ಎಂದೇ ಸ್ವೀಕೃತರು.
ಒಪ್ಪಿಸಿದ ಒಪ್ಪ ಬಂಗಾರವಾಗಿರದೆ ಅಪ್ಪಟ ಅಪರಂಜಿಯಾಗಿರುವ ಬನ್ನಂಜೆಯವರಿಗೆ ಬದ್ಧತೆಯ ಬಂಗಾರದೊಂದಿಗೆ ಅವಿನಾಭಾವದ ಋಣಾನುಬಂಧವಿದೆ. ತುಳುನಾಡಿನ ಮಣ್ಣಿನ ಮಗ ಬನ್ನಂಜೆ ಬಾಬು ಅಮೀನರಂತಹ ಸಾಧಕ ರೊಂದಿಗಿನ ಸಖ್ಯವೇ ಶ್ರೇಷ್ಠ ಸುಖ.
ಬನ್ನಂಜೆಯವರ ಅಮೂಲ್ಯ ಅಂಕಿತಗಳನ್ನು ನಮ್ರತೆಯಿಂದ ನೆನೆಯುವ ಸಂಭ್ರಮವೇ “ಸಿರಿತುಪ್ಪೆ’ ಕಾರ್ಯಕ್ರಮ. ಒಳಿತಿನ ಸತ್ಕಾರ್ಯಗಳು ಸೂರ್ಯಚಂದ್ರರ ಕಾಲದವರೆಗೆ ಉಳಿಯಲಿ, ಬಾಬು ಅಮೀನರು ಬಯಸಿದ ಸರ್ವ ಶ್ರೇಷ್ಠ ಬಾಳ್ವೆಯನ್ನು ನಡೆಸಲಿ. ಇನ್ನೂ ಏನೋ ಹೇಳಬೇಕೆಂದಿದೆ, ಆಡದೆ ಉಳಿದಿಹ ಮಾತು ನೂರಿದೆ…
ದಯಾನಂದ ಕರ್ಕೇರ ಉಗ್ಗೆಲ್ಬೆ ಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Golden Jubilee: ಪುಸ್ತಕ ಪ್ರಕಾಶನ: ಕೃಷಿಯೇ ಆಗಿರಲಿ, ಉದ್ಯಮವಾಗದಿರಲಿ
Agriculture: ಕಂದಕೂರು ಗ್ರಾಮದ ನಿವೃತ್ತ ನೌಕರನ ಕೈ ಹಿಡಿದ ಸಮ್ಮಿಶ್ರ ಬೇಸಾಯ ಪದ್ಧತಿ
ವಿಜ್ಞಾನ ಮಾಹಿತಿ ಕನ್ನಡದಲ್ಲಿ ಸಿಗದಿದ್ದರೆ ಭಾಷೆಗೇ ಅಪಾಯ
Deepavali Festival: ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.