ಎಸ್ಸೆಸ್ಸೆಲ್ಸಿ; ಶೇ.84.95 ಫಲಿತಾಂಶ ದಾಖಲು- ಎ ಗ್ರೇಡ್ ಪಟ್ಟಿಯಲ್ಲಿ ಸ್ಥಾನ ಪಡೆದ ಧಾರವಾಡ
29,569ರಲ್ಲಿ 25,120 ವಿದ್ಯಾರ್ಥಿಗಳು ಉತ್ತೀರ್ಣ
Team Udayavani, May 20, 2022, 10:18 AM IST
ಧಾರವಾಡ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ ಶೇ.84.95 ಫಲಿತಾಂಶ ದಾಖಲಿಸುವ ಮೂಲಕ “ಎ’ ಗ್ರೇಡ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. 2019 ಮತ್ತು 2020 ನೇ ಸಾಲಿನಲ್ಲಿ ಶೇ.74 ಫಲಿತಾಂಶ ದಾಖಲಿಸಿ ಹಿನ್ನಡೆ ಅನುಭವಿಸಿದ್ದ ಜಿಲ್ಲೆಯ ಫಲಿತಾಂಶ ಈ ವರ್ಷ ಪ್ರಗತಿ ಕಂಡಿದೆ.
ಪರೀಕ್ಷೆಗೆ ಹಾಜರಾಗಿದ್ದ 29,569 ವಿದ್ಯಾರ್ಥಿಗಳ ಪೈಕಿ 25,120 ವಿದ್ಯಾರ್ಥಿಗಳು ಪಾಸಾಗಿದ್ದರೆ, 4449 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. “ಎ’ ಪ್ಲಸ್ ಶ್ರೇಣಿಯಲ್ಲಿ 3151, “ಎ’ ಶ್ರೇಣಿಯಲ್ಲಿ 5877, “ಬಿ’ ಶ್ರೇಣಿಯಲ್ಲಿ 5585, “ಬಿ’ ಪ್ಲಸ್ ಶ್ರೇಣಿಯಲ್ಲಿ 6169, “ಸಿ’ ಶ್ರೇಣಿಯಲ್ಲಿ 817, “ಸಿ’ ಪ್ಲಸ್ ಶ್ರೇಣಿಯಲ್ಲಿ 3521 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳು ಶೇ.85.62, ಅನುದಾನಿತ ಪ್ರೌಢಶಾಲೆಗಳು ಶೇ.88.61 ಹಾಗೂ ಅನುದಾನ ರಹಿತ ಪ್ರೌಢ ಶಾಲೆಗಳದ್ದು ಶೇ.90.13 ಫಲಿತಾಂಶ ದಾಖಲಾಗಿದೆ.
ಇನ್ನುಳಿದಂತೆ ಜಿಲ್ಲೆಯ 45 ಶಾಲೆಗಳು ಶೇ.100 ಫಲಿತಾಂಶ ದಾಖಲಿಸಿದ್ದು, 5 ಶಾಲೆಗಳು ಶೇ.5 ಹಾಗೂ ನಾಲ್ಕು ಶಾಲೆಗಳು ಶೇ.4 ಫಲಿತಾಂಶ ದಾಖಲಿಸಿವೆ. ಇನ್ನುಳಿದಂತೆ ಅಣ್ಣಿಗೇರಿಯ ನಿಂಗಮ್ಮ ಅಂಗಡಿ ಪ್ರೌಢಶಾಲೆ ಹಾಗೂ ಅದರಗುಂಚಿಯ ಎಸ್. ಕೆ. ಪಾಟೀಲ್ ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.
ತಾಲೂಕು ವಾರು ಫಲಿತಾಂಶ: ಜಿಲ್ಲೆಯ 7 ತಾಲೂಕುಗಳ ಪೈಕಿ ಹುಬ್ಬಳ್ಳಿ ಶಹರ ಶೇ.91.89, ಕಲಘಟಗಿ ಶೇ.88.13, ಹುಬ್ಬಳ್ಳಿ ಗ್ರಾಮೀಣ ಶೇ.86.92, ಧಾರವಾಡ ಶಹರ ಶೇ.86.90, ಧಾರವಾಡ ಗ್ರಾಮೀಣ ಶೇ.86.84, ನವಲಗುಂದ ಶೇ.85, ಕುಂದಗೋಳ ಶೇ.84.82 ಫಲಿತಾಂಶ ದಾಖಲಿಸಿವೆ. ಹುಬ್ಬಳ್ಳಿ ಶಹರ ವ್ಯಾಪ್ತಿಯ ಚೇತನ ಪಬ್ಲಿಕ್ ಶಾಲೆಯ ಶಿವಾನಂದ ಬಸನಗೌಡ ಪಾಟೀಲ 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾನೆ.
ಉಳಿದಂತೆ ಎಸ್‌ಜೆಎಸ್ ಸಮಿತ್ಸ ಬಾಲಕಿಯರ ಪ್ರೌಢಶಾಲೆಯ ದಿವ್ಯಾ ಪರಶುರಾಮ ಸಿ, ಧಾರವಾಡ ಶಹರ ವ್ಯಾಪ್ತಿಯ ಪವನ ಆಂಗ್ಲ ಮಾಧ್ಯಮ ಶಾಲೆಯ ಅಭಿಷೇಕ ಆರ್.ಎ., ಕೆ.ಇ. ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ರಘೋತ್ತಮ ಗಿರೀಶ ನಾಡಗೌಡ್ರ, ಸಿಂಚನಾ ದಯಾನಂದ ದಾನಗೇರಿ, ಹುಬ್ಬಳ್ಳಿ ಗ್ರಾಮೀಣದ ಡಾ|ಬಿ.ಆರ್. ಅಂಬೇಡ್ಕರ್ ಬಾಲಕಿಯರ ರೆಸಿಡೆನ್ಸಿಯಲ್ ಶಾಲೆಯ ಚೇತನಾ ಯಲ್ಲಪ್ಪ ಮಣಕವಾಡ 625ಕ್ಕೆ 624 ಅಂಕ ಪಡೆದಿದ್ದಾರೆ.
ಹುಬ್ಬಳ್ಳಿ ಶಹರ ವ್ಯಾಪ್ತಿಯ ಕಾನ್ವೆಂಟ್ ಪ್ರೌಢ ಶಾಲೆಯ ಭವನ ಕಠಾರೆ, ಡಾ| ಜಿ.ವಿ. ಜೋಶಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಮಧುಶ್ರೀ ಎಸ್. ಶಿವಳ್ಳಿ, ಬೆನಕ ವಿದ್ಯಾ ಮಂದಿರ ಆಂಗ್ಲಮಾಧ್ಯಮ ಶಾಲೆಯ ಸುಚಿತ್ರಾ ಕೆ., ಧಾರವಾಡ ಶಹರ ವ್ಯಾಪ್ತಿಯ ಪ್ರಜೆಟೇಶನ್ ಗರ್ಲ್ಸ್ ಸ್ಕೂಲ್‌ನ ಸಯೀದಾ ಫರೀಫಾ ಸಿಮ್ರಾನ್ ಮದನಿ, ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಯ ನಿಖೀತಾ ಉಪ್ಪಾರ, ಕೆ.ಇ.ಬೋರ್ಡ್ ಆಂಗ್ಲ ಮಾಧ್ಯಮ ಶಾಲೆಯ ಭಾಗ್ಯಶ್ರೀ ಬಿರಾದಾರ, ಹುಬ್ಬಳ್ಳಿ ಗ್ರಾಮೀಣದ ನವನಗರ ರೋಟರಿ ಆಂಗ್ಲಮಾಧ್ಯಮ ಶಾಲೆಯ ಸಂಕಲ್ಪ ಎಸ್.ಕೆ. 625ಕ್ಕೆ 623 ಅಂಕ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
NABARD ನಿರ್ಧಾರದಿಂದ ಕೃಷಿಗೆ ಹಿನ್ನಡೆ; ಸಾಲದ ಮೊತ್ತ ಕಡಿತ ಮಾಡದಿರಲು ಸಚಿವ ಪಾಟೀಲ ಆಗ್ರಹ
ಸಿಎಂ ಆಗಿದ್ದವರು ಈ ರೀತಿ ಹೇಳಿಕೆ ನೀಡುವ ಬದಲು, ಸ್ಪಷ್ಟ ಹೇಳಿಕೆ ನೀಡಲಿ: ಸಚಿವ ಶಿವಾನಂದ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.