Karkala: ಅಪ್ಪನ ಬೆವರ ಹನಿಗೆ ಮಗಳ ಸಾಧನೆ ಫಲ; ಕೂಲಿ ಕಾರ್ಮಿಕನ ಮಗಳಿಗೆ 622 ಅಂಕ
Team Udayavani, May 9, 2023, 10:08 AM IST
ಕಾರ್ಕಳ: ತಂದೆ-ತಾಯಿ ದೂರದ ಬಾಗಲಕೋಟೆಯಲ್ಲಿದ್ದಾರೆ. ತಂದೆ ಹೊಟೇಲ್ ಒಂದರಲ್ಲಿ ಕೂಲಿ ಕಾರ್ಮಿಕರಾಗಿದ್ದರೆ, ತಾಯಿ ಗೃಹಿಣಿ. ಇವರ ಪುತ್ರಿ ಧನ್ಯಾ ನಾಯ್ಕ ಈಗ ಎಸೆಸೆಲ್ಸಿಯಲ್ಲಿ 622 ಅಂಕ ಪಡೆದು ಸಾಧನೆ ಮಾಡಿದ್ದಾರೆ.
“ಅಪ್ಪ ಅಲ್ಲಿ ಕೂಲಿ ಮಾಡಿ ಓದಿಸಲು ಕಷ್ಟಪಟ್ಟರು. ಇಲ್ಲಿ ಚಿಕ್ಕಮ್ಮ ಅಕ್ಕರೆಯಿಂದ ಸಾಕಿದರು. ಅವರ ಬೆವರ ಹನಿಗೆ ಕಷ್ಟಪಟ್ಟು ಓದಿಸಿದ್ದರಿಂದ, ಚಿಕ್ಕಮ್ಮ ನನ್ನ ಚೆನ್ನಾಗಿ ನೋಡಿಕೊಂಡಿದ್ದರಿಂದ ಅವರ ಬೆವರ ಹನಿಗೆ ಪ್ರತಿಫಲವಾಗಿ ಈ ಅಂಕ ಪಡೆಯಲು ಸಾಧ್ಯವಾಯಿತು’ ಎಂದು ಭಾವುಕರಾದರು ಧನ್ಯಾ. ಇವರು ಕುಕ್ಕುಜೆ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಮೂಲತಃ ಹೆಬ್ರಿ ತಾಲೂಕಿನ ಮುಂಡೊಳ್ಳಿಯ ನರಸಿಂಹ ನಾಯ್ಕ ಮತ್ತು ಸುಲೋಚನಾ ದಂಪತಿ ಮರಾಠಿ (ಪರಿಶಿಷ್ಟ ಪಂಗಡ) ಸಮುದಾಯಕ್ಕೆ ಸೇರಿದವರು. 18 ವರ್ಷದ ಹಿಂದೆ ಕೂಲಿ ಅರಸುತ್ತ ಹೊರ ಊರಿಗೆ ಹೋದವರು ಪ್ರಸ್ತುತ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದು ಹಿರಿಯವಳೇ ಧನ್ಯಾ. ಪ್ರಾಥಮಿಕ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಪಡೆದು ಕಾರ್ಕಳದಲ್ಲಿ ಉತ್ತಮ ಶಿಕ್ಷಣಕ್ಕೆಂದು ಬಂದು ಕುಕ್ಕುಜೆ ಶಾಲೆ ಸೇರಿದರು.
ತಮ್ಮ ಚಿಕ್ಕಮ್ಮನ ಮನೆ ಹರಿಖಂಡಿಗೆಯಲ್ಲಿದ್ದು ಕಲಿಯತೊಡಗಿದ ಧನ್ಯಾ, ತಂದೆ-ತಾಯಿಯ ಕಷ್ಟ ಆರಿತು ಛಲದಿಂದ ಶ್ರಮಪಟ್ಟು ಅಧ್ಯಯನ ಮಾಡಿದ ಫಲವೀಗ ಫಲಿತಾಂಶದಲ್ಲಿ ಗೋಚರಿಸಿದೆ. ಮಗಳ ನೋಡಲೆಂದು ಬಂದಿದ್ದ ತಂದೆ-ತಾಯಿ ಫಲಿತಾಂಶ ಪ್ರಕಟಗೊಂಡ ಅರ್ಧ ತಾಸಿನ ಹಿಂದೆಯಷ್ಟೆ ವಾಪಸ್ ಬಾಗಲಕೋಟೆಯತ್ತ ಹೊರಟರು. ಪ್ರಯಾಣದಲ್ಲಿ ಇರುವಾಗಲೇ ಧನ್ಯಾ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಎಳವೆಯಲ್ಲಿಯೇ ಬಡತನದಿಂದ ಬೆಳೆದವಳು ನಾನು. ತಂದೆ ಹೊಟೇಲಿನಲ್ಲಿ ಅಡುಗೆ ಕೆಲಸ ಮಾಡುತ್ತ ಬೆಂಕಿಯಲ್ಲಿ ಬೇಯುವುದನ್ನು ಕಂಡಾಗ ನಾನೂ ಏನಾದರೂ ಸಾಧಿಸಬೇಕು. ಚಿಕ್ಕಮ್ಮ ಸುಜಾತಾ ಮನೆಮಗಳಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಆರೈಕೆ ಮತ್ತು ಆಶೀರ್ವಾದ ಹಾಗೂ ಶಿಕ್ಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಗಿದೆ ಎನ್ನಲು ಧನ್ಯಾ ಮರೆಯುವುದಿಲ್ಲ.
ಪಠ್ಯೇತರ ಚಟುವಟಿಕೆಯಲ್ಲಿಯೂ ಮುಂದಿರುವ ಧನ್ಯಾ, ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಮೆಹಂದಿ ಹಾಕುವ ಕಲೆಯೂ ಇವರಿಗೆ ಕರಗತ.
ಎಂಬಿಬಿಎಸ್ ಕಲಿತು ಡಾಕ್ಟರ್ ಆಗುವೆ
ಪಿಯುಸಿಯಲ್ಲಿ ಒಳ್ಳೆಯ ಅಂಕ ಪಡೆದು ನೀಟ್ ಪರೀಕ್ಷೆ ಪಡೆದು ಎಂಬಿಬಿಎಸ್ ಕಲಿತು ಡಾಕ್ಟರ್ ಆಗುವೆ. ಬಡವರ ಸೇವೆ ಮಾಡುವೆ. ಅಪ್ಪ ಅಮ್ಮ ನನಗಾಗಿ ಹರಿಸಿದ ಬೆವರಿಗೆ ಪ್ರತಿಫಲವನ್ನು ವೈದ್ಯಳಾಗುವ ಮೂಲಕ ಈಡೇರಿಸಿ ಕೊಡುವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.