ಕಡಲಬ್ಬರ: ಸೈಂಟ್ಮೇರೀಸ್ ಯಾನ ತಾತ್ಕಾಲಿಕ ಸ್ಥಗಿತ
Team Udayavani, May 10, 2022, 1:05 AM IST
ಮಲ್ಪೆ: ಸಮುದ್ರದಲ್ಲಿ ದೈತ್ಯ ಗಾತ್ರದ ಅಲೆಗಳು ಏಳುವುದರಿಂದ ಸೈಂಟ್ ಮೇರೀಸ್ ಐಲ್ಯಾಂಡ್ ಬೋಟ್ ಯಾನವನ್ನು ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಕಡಲ ಅಬ್ಬರ ಜಾಸ್ತಿಯಾಗಿರುವುದ ರಿಂದ ದ್ವೀಪದಲ್ಲಿ ಬೋಟಿನಿಂದ ಪ್ರವಾಸಿಗರನ್ನು ಇಳಿಸಲು/ ಹತ್ತಿಸಲು ಸಾಧ್ಯವಾಗುತ್ತಿಲ್ಲ. ಮಲ್ಪೆ ಬೀಚ್ನಿಂದ ಸೈಂಟ್ಮೇರಿ ದ್ವೀಪಕ್ಕೆ ಕರೆದುಕೊಂಡು ಹೋಗುವ ಸೀ³ಡ್ ಬೋಟ್ಗಳ ಯಾನವನ್ನೂ ಸ್ಥಗಿತಗೊಳಿಸಲಾಗಿದೆ.
ರೌಂಡ್ಸ್ ಬರುವ ಬೋಟು ಸೇವೆಯೂ ಇಲ್ಲ. ಹಲವು ಜಲಸಾಹಸ ಕ್ರೀಡೆಗಳು ಇಲ್ಲಿದ್ದು, ಅವೆಲ್ಲವನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸೈಕ್ಲೋನ್ ಪ್ರಭಾವ ಕಡಿಮೆಯಾದ ಮೇಲೆ ಮತ್ತೆ ಎಲ್ಲವೂ ಆರಂಭವಾಗಲಿವೆ.
ಕೆಲವು ಬೋಟ್ಗಳು ವಾಪಸ್
ಗಾಳಿಯ ಹಿನ್ನೆಲೆಯಲ್ಲಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೆಲವೊಂದು ಬೋಟುಗಳ ದಡದತ್ತ ಧಾವಿಸಿವೆ. ಬಹುತೇಕ ಬೋಟುಗಳು ಸಮೀಪದ ಬಂದರನ್ನು ಆಶ್ರಯಿಸಿವೆ. ಆಳಸಮುದ್ರದಲ್ಲಿ ಭಾರೀ ಗಾತ್ರದ ಆಲೆಗಳೂ ಏಳುತ್ತಿದ್ದು ಬಲೆ ಹಾಕಲು ಸಾಧ್ಯವಾಗುತ್ತಿಲ್ಲ ಎಂದು ಮೀನು ಗಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.