ಮಲ್ಪೆ: ಸೈಂಟ್‌ಮೇರಿಸ್ ದ್ವೀಪಯಾನಕ್ಕೆ ಅವಕಾಶ
Team Udayavani, Oct 6, 2022, 6:50 AM IST
ಮಲ್ಪೆ: ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣ ಮಲ್ಪೆಯ ಸೈಂಟ್‌ಮೇರಿಸ್ ದ್ವೀಪ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಿದ್ದು, ಬುಧವಾರ ಪ್ರವಾಸಿ ಬೋಟ್‌ಗಳ ಸಂಚಾರ ಆರಂಭಗೊಂಡಿದೆ.
ಕಳೆದ ವರ್ಷ ದ್ವೀಪದಲ್ಲಿ ಹಲವು ಅವಘಡಗಳು ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಸುರಕ್ಷೆಗೆ ಹೆಚ್ಚಿನ ಮಹತ್ವ ನೀಡಿದೆ. ಪ್ರತಿಕೂಲ ಹವಾಮಾನದ ಕಾರಣದಿಂದಲೂ ದ್ವೀಪಯಾನ ಆರಂಭ ಸ್ವಲ್ಪ ವಿಳಂಬವಾಗಿತ್ತು ಎಂದು ಮಲ್ಪೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾಗಿರುವ ಉಡುಪಿ ನಗರಸಭೆಯ ಪೌರಾಯುಕ್ತ ಡಾ| ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಪ್ಲಾಸ್ಟಿಕ್, ಮದ್ಯ ನಿಷೇಧ
ಜಿಲ್ಲಾಡಳಿತದ ಆದೇಶದಂತೆ ಪ್ರವಾಸಿಗರು ಪ್ಲಾಸ್ಟಿಕ್ ಪರಿಕರಗಳಲ್ಲಿ ಪ್ಯಾಕ್ ಮಾಡಿರುವ ಆಹಾರ ಪದಾರ್ಥಗಳನ್ನು ಕೊಂಡೊಯ್ಯು ವಂತಿಲ್ಲ. ಪುಟ್ಟ ಮಕ್ಕಳ ಬಳಕೆಯ ಹಾಲಿನ ಬಾಟಲಿ ಇತ್ಯಾದಿಗಳನ್ನು ಒಯ್ಯಬಹುದಾಗಿದೆ. ಧೂಮಪಾನ, ಮದ್ಯಪಾನವನ್ನೂ ಕಡ್ಡಾಯವಾಗಿ ನಿಷೇಧಿಸಲಾಗಿದೆ.
7 ಕಡೆ ಸೆಲ್ಫಿ ಪಾಯಿಂಟ್
5 ಅಪಾಯಕಾರಿ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಮತ್ತು ಬಾವುಟಗಳನ್ನು ಹಾಕಲಾಗಿದೆ. ದ್ವೀಪದ ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ 110 ಮೀ. ಉದ್ದ, 100 ಮೀ. ಅಗಲದಲ್ಲಿ ಸ್ವಿಮ್ಮಿಂಗ್ ಝೋನ್ ರಚಿಸಲಾಗಿದೆ. ಅಲ್ಲಿ ಮಾತ್ರ ಈಜಾಡಲು ಅವಕಾಶ. 4 ವಾಚ್ ಟವರ್ ನಿರ್ಮಿಸಿದ್ದು, ಪ್ರವಾಸಿಗರ ಮೇಲೆ ನಿಗಾ ಇಡಲಾಗುವುದು. ದ್ವೀಪಕ್ಕೆ ಸಾಗಲು ಬಂದರಿನ ಸೀವಾಕ್ ಪಾಯಿಂಟ್ ಬಳಿ ಪ್ರವಾಸಿಗರ ದೊಡ್ಡ ಬೋಟ್ ಮತ್ತು ಮಲ್ಪೆ ಬೀಚ್‌ನಿಂದ ಸ್ಪೀಡ್ ಬೋಟ್‌ಗಳ ಸೇವೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.