ಅಗ್ನಿಶಾಮಕ ದಳಕ್ಕೆ ಸಿಬ್ಬಂದಿ ಕೊರತೆ : ಮೂರು ತಾಲೂಕುಗಳಲ್ಲಿ ಠಾಣಾಧಿಕಾರಿಗಳೇ ಇಲ್ಲ

Team Udayavani, Oct 8, 2020, 6:31 PM IST

ಅಗ್ನಿಶಾಮಕ ದಳಕ್ಕೆ ಸಿಬ್ಬಂದಿ ಕೊರತೆ : ಮೂರು ತಾಲೂಕುಗಳಲ್ಲಿ ಠಾಣಾಧಿಕಾರಿಗಳೇ ಇಲ್ಲ

ದಾವಣಗೆರೆ: ಅಗ್ನಿ ಅವಘಡದಂತಹ ತುರ್ತು ಸಂದರ್ಭದಲ್ಲಿ ಶೀಘ್ರ ನೆರವಿಗೆ ಬರಬೇಕಾದ ಅಗ್ನಿಶಾಮಕದಳ ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಇದರಿಂದ ಸಕಾಲಕ್ಕೆ ಸಮರ್ಪಕ ಸೇವೆ ಒದಗಿಸಲು ಅಡಚಣೆಯಾಗಿದೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಯಲ್ಲಿ ಒಟ್ಟು 157ಮಂಜೂರಾತಿ ಹುದ್ದೆಗಳಿದ್ದು ಇದರಲ್ಲಿ 94 ಹುದ್ದೆಗಳು ಭರ್ತಿಯಾಗಿವೆ. ಉಳಿದ 63ಹುದ್ದೆಗಳು ಖಾಲಿ ಇವೆ. ದಾವಣಗೆರೆ ಅಗ್ನಿಶಾಮಕ ಠಾಣೆಯಲ್ಲಿ 18 , ಹರಿಹರ ಅಗ್ನಿಶಾಮಕ ಠಾಣೆಯಲ್ಲಿ 11, ಹೊನ್ನಾಳಿ ಅಗ್ನಿಶಾಮಕ ಠಾಣೆಯಲ್ಲಿ 14, ಚನ್ನಗಿರಿ ಅಗ್ನಿಶಾಮಕ ಠಾಣೆಯಲ್ಲಿ 10 ಹಾಗೂ ಜಗಳೂರು ಅಗ್ನಿಶಾಮಕ ಠಾಣೆಯಲ್ಲಿ 10 ಹುದ್ದೆಗಳು ಖಾಲಿ ಇವೆ.

ಮೂರು ತಾಲೂಕುಗಳಲ್ಲಿ ಠಾಣಾಧಿಕಾರಿಗಳಿಲ್ಲ:
ದಾವಣಗೆರೆ, ಹೊನ್ನಾಳಿ, ಚನ್ನಗಿರಿ ಅಗ್ನಿಶಾಮಕ ಠಾಣೆಗಳಲ್ಲಿ ಠಾಣಾಧಿಕಾರಿಗಳೇ ಇಲ್ಲ. ಜಗಳೂರಿನಲ್ಲಿ ಸಹಾಯಕ ಠಾಣಾಧಿಕಾರಿಯೂ ಇಲ್ಲದ ಪರಿಸ್ಥಿತಿ ಇದೆ. ಹೊನ್ನಾಳಿ ಹಾಗೂ ಜಗಳೂರು ಠಾಣೆಗಳಲ್ಲಿ ಚಾಲಕ ತಂತ್ರಜ್ಞರು ಒಬ್ಬರೂ ಇಲ್ಲ. ಇದೇ ಠಾಣೆಗಳಲ್ಲಿ ಪ್ರಮುಖ ಅಗ್ನಿಶಾಮಕರ ಕೊರತೆಯೂ ಇದೆ. ಈ ತುರ್ತು ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುವ
ಅಗ್ನಿಶಾಮಕರ ಸಂಖ್ಯೆಯೂ ಅರ್ಧಕ್ಕರ್ಧ ಖಾಲಿ ಇದೆ.

ಇದನ್ನೂ ಓದಿ :ಡಿಕೆಶಿ ಯಾವುದೇ ತಪ್ಪು ಮಾಡಿಲ್ಲಾ ಎಂದಾದರೆ ತನಿಖೆ ಎದುರಿಸಲಿ ;ಈಶ್ವರಪ್ಪ

ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾಧಿಕಾರಿಗಳು ಐದು, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳು ಏಳು, ಚಾಲಕ ತಂತ್ರಜ್ಞರು ಐದು, ಪ್ರಮುಖ ಅಗ್ನಿಶಾಮಕರು 22, ಅಗ್ನಿಶಾಮಕ
ಚಾಲಕರು 25, ಅಗ್ನಿಶಾಮಕರು 92 ಹೀಗೆ ಒಟ್ಟು 157 ಮಂಜೂರಾತಿ ಹುದ್ದೆಗಳಿವೆ. ಆದರೆ, ಅಗ್ನಿಶಾಮಕ ಠಾಣಾಧಿಕಾರಿಗಳ ಮೂರು ಹುದ್ದೆ, ಸಹಾಯಕ ಠಾಣಾಧಿಕಾರಿಗಳ ಮೂರು ಹುದ್ದೆ, ಚಾಲಕ ತಂತಜ್ಞರ ಎರಡು ಹುದ್ದೆ, ಪ್ರಮುಖ ಅಗ್ನಿಶಾಮಕರ ಎರಡು ಹುದ್ದೆ, ಅಗ್ನಿಶಾಮಕ ಚಾಲಕರ ನಾಲ್ಕು ಹುದ್ದೆ ಹಾಗೂ 49 ಅಗ್ನಿಶಾಮಕರ ಹುದ್ದೆ ಖಾಲಿ ಇವೆ.

ಇದನ್ನೂ ಓದಿ :ಚಿತ್ರದುರ್ಗ ಜಿಲ್ಲೆಯಲ್ಲಿ 182 ಜನರಿಗೆ ಕೋವಿಡ್, ಸೋಂಕಿತರ ಸಂಖ್ಯೆ 8,292ಕ್ಕೆ ಏರಿಕೆ

ಜಿಲ್ಲಾ ಅಗ್ನಿಶಾಮಕ ಕಚೇರಿಯಲ್ಲಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹುದ್ದೆ ಒಂದು, ಅಗ್ನಿಶಾಮಕ ಠಾಣಾಧಿಕಾರಿಗಳು ಎರಡು, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿಗಳು ನಾಲ್ಕು, ಚಾಲಕ ತಂತ್ರಜ್ಞರು ಮೂರು, ಪ್ರಮುಖ ಅಗ್ನಿಶಾಮಕರು 20, ಅಗ್ನಿಶಾಮಕ ಚಾಲಕರು 21, ಅಗ್ನಿಶಾಮಕರು 43 ಹೀಗೆ ಒಟ್ಟು 94 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಸಿಬ್ಬಂದಿ ಕೊರತೆ ನಡುವೆಯೂ ಅಗ್ನಿಶಾಮಕದಳ ಇರುವಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ತುರ್ತು ಸೇವೆಯಲ್ಲಿ ನಿರತವಾಗಿದೆ. ಸರಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ತುರ್ತು ಸೇವೆಗೆ ಇನ್ನಷ್ಟು ಬಲ ತುಂಬಬೇಕಿದೆ.

– ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

santhosh

Sushasana Day: ಕಾಂಗ್ರೆಸ್‌ ಆಡಳಿತದಲ್ಲಿ ಜಂಗಲ್‌ ರಾಜ್‌ ಸೃಷ್ಟಿ: ಬಿ.ಎಲ್‌.ಸಂತೋಷ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ

Shiradi

Road Project: ಶಿರಾಡಿ ಘಾಟ್‌ ಸುರಂಗ ಯೋಜನೆಗೆ ಡಿಪಿಆರ್‌ ರಚಿಸಿ: ಕೇಂದ್ರ ಸೂಚನೆ

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.