ಒಳ್ಳೇ ಕಥೆ ಸಿಕ್ಕರೆ ಪುನೀತ್ ಜೊತೆ ನಟನೆ
ಶಿವಣ್ಣನ ಮನದ ಮಾತಿಗೆ ಅಭಿಮಾನಿಗಳು ಖುಷ್
Team Udayavani, May 21, 2020, 4:21 AM IST
ಡಾ.ರಾಜ್ ಪುತ್ರರು ಒಟ್ಟಿಗೆ ಎಲ್ಲೇ ಸೇರಲಿ ಅಲ್ಲೊಂದು ಕಾಮನ್ ಪ್ರಶ್ನೆ ತೂರಿಬರೋದು ಸಹಜ. ಅದು ನಿನ್ನೆ ಮೊನ್ನೆಯ ಪ್ರಶ್ನೆಯಂತೂ ಅಲ್ಲ. ಹಲವು ವರ್ಷಗಳಿಂದಲೂ ಅಂಥದ್ದೊಂದು ಪ್ರಶ್ನೆ ತೂರಿಬರುತ್ತಲೇ ಇದೆ. ಆ ಪ್ರಶ್ನೆಗೆ ಅಷ್ಟೇ ಪ್ರೀತಿಯಿಂದಲೇ ಅವರು ಉತ್ತರಿಸುವ ಮೂಲಕ ಅಭಿಮಾನಿಗಳಿಗೆ ಖುಷಿಪಡಿಸುತ್ತಲೇ ಇದ್ದಾರೆ. ಇಷ್ಟಕ್ಕೂ ಆ ಪ್ರಶ್ನೆ ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಶಿವರಾಜಕುಮಾರ್ ಅಭಿನಯದ “ಓಂ’ ಸಿನಿಮಾ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಶಿವರಾಜಕುಮಾರ್ ಆನ್‌ಲೈನ್ ಲೈವ್ ಬಂದಿದ್ದರು. ಆ ಸಂದರ್ಭದಲ್ಲಿ ಅಭಿಮಾನಿಗಳು ಶಿವರಾಜಕುಮಾರ್ ಅವರನ್ನು ಎಲ್ಲಾ ಪ್ರಶ್ನೆಗಳನ್ನು ಕೇಳುವುದರ ಜೊತೆಯಲ್ಲಿ, ನೀವು ಹಾಗು ಪುನೀತ್‌ರಾಜಕುಮಾರ್ ಇಬ್ಬರು ಯಾವಾಗ ನಟಿಸುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟರು. ಆಗ ಶಿವರಾಜಕುಮಾರ್, ನಗುತ್ತಲೇ ಆ ಪ್ರಶ್ನೆಗೆ ಉತ್ತರ ಕೊಡಲು ಸಜ್ಜಾದರು.
ನಾನು ಈ ಪ್ರಶ್ನೆಗೆ ಹಲವು ಬಾರಿ ಉತ್ತರಿಸುತ್ತಲೇ ಬಂದಿದ್ದೇನೆ. ಬಹಳ ವರ್ಷಗಳಿಂದಲೂ ನನಗೆ ಎಲ್ಲೇ ಹೋದರೂ ಫ್ಯಾನ್ಸ್ ಈ ಪ್ರಶ್ನೆ ಕೇಳುತ್ತಾರೆ. ನನಗೊಬ್ಬನಿಗೆ ಅಲ್ಲ, ಪುನೀತ್‌ಗೂ ಇದೇ ಪ್ರಶ್ನೆ ಬರುತ್ತೆ. ಈ ಪ್ರಶ್ನೆಗೆ ನಾನು ಉತ್ತರಿಸುವುದಾದರೆ, 100% ನಾನು ಮತ್ತು ಪುನೀತ್‌ರಾಜಕುಮಾರ್ ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸ್ತೀವಿ. ಆದರೆ, ಒಳ್ಳೆಯ ಕಥೆ ಬೇಕಲ್ಲವೇ?
ಒಳ್ಳೆಯ ಕಥೆ, ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಇಬ್ಬರು ಜೊತೆಯಲ್ಲೇ ನಟಿಸುತ್ತೇವೆ. ಆಮೇಲೆ, ಆ ಕಥೆ ಚೆನ್ನಾಗಿದ್ದು, ನಾವೂ ಒಪ್ಪಿ ಮಾಡಿದರೆ, ಅದು ನಮ್ಮ ಹೋಮ್ ಬ್ಯಾನರ್ ವಜ್ರೆàಶ್ವರಿ ಕಂಬೈನ್ಸ್‌ನಲ್ಲೇ ತಯಾರಾಗಲಿದೆ ಎಂದು ಉತ್ತರಿಸಿದರು ಶಿವರಾಜಕುಮಾರ್. ಅದೇನೆ ಇರಲಿ, ಈ ಪ್ರಶ್ನೆಗೆ ಮೊದಲಿನಿಂದಲೂ ಶಿವರಾಜ್‌ಕುಮಾರ್ ಆಗಲಿ, ಪುನೀತ್‌ರಾಜಕುಮಾರ್ ಆಗಲಿ ಉತ್ತರಿಸುತ್ತಲೇ ಬಂದಿದ್ದಾರೆ.
ಇಲ್ಲಿಯವರೆಗೂ ಅಂಥದ್ದೊಂದು ಒಳ್ಳೆಯ ಕಥೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಇಬ್ಬರಿಗೂ ಸರಿಹೊಂದುವ ಕಥೆ ಸಿಕ್ಕರೆ, ಖಂಡಿತ ಶಿವರಾಜಕುಮಾರ್ ಮತ್ತು ಪುನೀತ್ ಸಹೋದರರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ತೆರೆ ಮೇಲೆ ರಾರಾಜಿಸಿದರೆ, ಅವರಿಬ್ಬರ ಅಭಿಮಾನಿಗಳಿಗಂತೂ ಹಬ್ಬದೂಟವೇ ಸರಿ. ಆದಷ್ಟು ಬೇಗ, ಇವರಿಬ್ಬರಿಗೂ ಸರಿ ಎನಿಸುವ ಕಥೆ ಸಿಗಲಿ ಎಂಬುದೇ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.